

ಸಪ್ತ ಸಾಗರದಾಚೆ ಸಿನಿಮಾದಲ್ಲಿ ಮನು-ಪ್ರಿಯಾ ಕೆಮಿಸ್ಟ್ರಿಗೆ ಸ್ಯಾಂಡಲ್‌ವುಡ್ ಮಾತ್ರವಲ್ಲದೇ ಟಾಲಿವುಡ್ ಮಂದಿ ಕೂಡ ಫಿದಾ ಆಗಿದ್ದರು. ರುಕ್ಮಿಣಿ ವಸಂತ್ ಹಾಗೂ ರಕ್ಷಿತ್ ಶೆಟ್ಟಿ ನಟನೆಯ 'ಸಪ್ತ ಸಾಗರದಾಚೆ ಎಲ್ಲೋ' ಸಿನಿಮಾದಿಂದ ರುಕ್ಮಿಣಿ ವಸಂತ್ ಪಡ್ಡೆ ಹುಡುಗರ ಕ್ರಶ್ ಆಗಿದ್ದಾರೆ. ರುಕ್ಮಿಣಿ ವಸಂತ್ ಪ್ರಿಯಾ ಪಾತ್ರದಲ್ಲಿ ನಟಿಸಿ ಎಲ್ಲರಿಗೂ ಮೋಡಿ ಮಾಡಿದ್ದಾರೆ.
ಮನು-ಪ್ರಿಯಾ ಜೋಡಿಯಂತೂ ಸೂಪರ್ ಹಿಟ್ ಅಂತಲೇ ಹೇಳಬಹುದು. ಕನ್ನಡಿಗರ ನ್ಯೂ ಕ್ರಶ್ ಆಗಿರುವ ಪುಟ್ಟಿ ಅಲಿಯಾಸ್ ರುಕ್ಮಿಣಿ ವಸಂತ್ ಇದೀಗ ಟಾಲಿವುಡ್‌ನತ್ತ ಮುಖಮಾಡಿದ್ದಾರೆ ಎನ್ನಲಾಗುತ್ತಿದೆ. ಟಾಲಿವುಡ್‌ನಲ್ಲಿ 'ಸಪ್ತ ಸಾಗರಾಲು ದಾಟಿ' ಎನ್ನುವ ಟೈಟಲ್ ಮೂಲಕ ಸಿನಿಮಾ ರಿಲೀಸ್ ಆಗಿ ಮೊದಲ ದಿನವೇ ಬ್ರೇಕ್ ಈವನ್ ಆಗಿತ್ತು. ಅಲ್ಲದೇ ವಾರಾಂತ್ಯದಲ್ಲೂ ಭರ್ಜರಿ ಕಲೆಕ್ಷನ್ ಮಾಡಿತ್ತು. ಇನ್ನು ಈ ಸಿನಿಮಾಗೆ ಸೋಷಿಯಲ್ ಮಿಡಿಯಾದಲ್ಲಿ ಮೆಚ್ಚುಗೆಯ ಮಹಾಪೂರವೇ ಹರಿದು ಬಂದಿತ್ತು.
ಟಾಲಿವುಡ್ನಲ್ಲಿ ಕನ್ನಡ ನಟಿಯರ ಹಾವಳಿ ಜೋರಾಗಿದೆ. ಶ್ರೀಲೀಲಾ, ರಶ್ಮಿಕಾ ಸಖತ್ ಮಿಂಚುತ್ತಿದ್ದಾರೆ. ಹೀಗಿರುವಾಗ ರುಕ್ಮಿಣಿ ವಸಂತ್ ಶೀಘ್ರದಲ್ಲೇ ಟಾಲಿವುಡ್‌ಗೆ ಎಂಟ್ರಿ ಕೊಡಬಹುದು ಎನ್ನಲಾಗುತ್ತಿದೆ. ಇತ್ತೀಚೆಗೆ ಭಾಗವಹಿಸಿದ ಸಂದರ್ಶನದಲ್ಲಿ ನಟಿ ರುಕ್ಮಿಣಿ ವಸಂತ್ ಸಹ ನನಗೆ ತೆಲುಗಿನಲ್ಲಿ ನಟಿಸುವ ಅವಕಾಶ ಸಿಗುತ್ತೆ ಅಂದ್ರೆ ನಾನು ಅದನ್ನ ಮಿಸ್ ಮಾಡಿಕೊಳ್ಳೋದಿಲ್ಲ ಎಂದು ಹೇಳಿದ್ದಾರೆ.
ಶ್ರೀಮುರುಳಿ ಅವರ 'ಬಘೀರ', ಶಿವಣ್ಣನ 'ಬೈರತಿ ರಣಗಲ್' ಚಿತ್ರದಲ್ಲಿ ರುಕ್ಮಿಣಿ ವಸಂತ್ ಕಾಣಿಸಿಕೊಳ್ಳಲಿದ್ದಾರೆ. ಒಟ್ಟಾರೆಯಾಗಿ ರುಕ್ಮಿಣಿ ವಸಂತ್ ಇದೀಗ ಬಹು ಬೇಡಿಕೆಯ ನಟಿ ಎನಿಸಿಕೊಂಡಿದ್ದಾರೆ.