ಹೊಸಗುಂದದಲ್ಲಿ ಶತ ರುದ್ರಾಭಿಷೇಕ

18-ANP-P1
ಹೊಸಗುಂದ ಶ್ರೀ ಉಮಾಮಹೇಶ್ವರ ದೇವಾಲಯದಲ್ಲಿ ಲೋಕಕಲ್ಯಾಣಾರ್ಥ ಶತರುದ್ರಾಭಿಷೇಕ ಪೂಜೆ ನಡೆಯಿತು. ಸಿಎಂಎನ್ ಶಾಸ್ತ್ರಿ, ಕೆ.ಜಿ.ಮಂಜುನಾಥ್, ಗಣೇಶ್ ಭಟ್ ಇತರರಿದ್ದರು.
Published on

ಆನಂದಪುರ: ವಿಶ್ವದ ಪ್ರಾಕೃತಿಕ ವಿದ್ಯಮಾನಗಳು ರುದ್ರದೇವನಾದ ಶಿವನ ನಿಯಂತ್ರಣದಲ್ಲಿದೆ. ರುದ್ರದೇವ ತೃಪ್ತನಾದರೆ ಜಗತ್ತಿಗೆ ಕ್ಷೇಮ ಉಂಟಾಗುತ್ತದೆ ಎಂದು ಹೊಸಗುಂದ ಶ್ರೀ ಉಮಾಹೇಶ್ವರ ದೇವಾಲಯ ಟ್ರಸ್ಟಿ ಸಿ.ಎಂ.ಎನ್.ಶಾಸ್ತ್ರಿ ಹೇಳಿದರು.

ಶ್ರೀ ಉಮಾಮಹೇಶ್ವರ ದೇವಾಲಯದ ಆವರಣದಲ್ಲಿ ಲೋಕಕಲ್ಯಾಣಾರ್ಥವಾಗಿ ಶನಿವಾರ ಏರ್ಪಡಿಸಿದ್ದ ಶತರುದ್ರಾಭಿಷೇಕ ಮಂಗಳ ಪೂಜೆಯಲ್ಲಿ ಪಾಲ್ಗೊಂಡು ಮಾತನಾಡಿ, ಈ ವರ್ಷ ಮಳೆ-ಬೆಳೆ ಸಮೃದ್ಧವಾಗಿ ನೈಸರ್ಗಿಕ ವಿಪತ್ತು ದೂರವಾಗಲಿ ಎಂಬ ಆಶಯದಿಂದ ಶತರುದ್ರಾಭಿಷೇಕ ಪೂಜೆ ನಡೆಸಲಾಗಿದೆ ಎಂದು ತಿಳಿಸಿದರು.
ಶೃಂಗೇರಿ ಶಾರದಾ ಪೀಠದ ಶಾಖಾ ಮುಖ್ಯಸ್ಥ ಕೆ.ಜಿ.ಮಂಜುನಾಥ ಮಾತನಾಡಿ, ದೇವರನ್ನು ಆರಾಧಿಸಲು ಮತ್ತು ಇಷ್ಟಾರ್ಥಕ್ಕಾಗಿ ಪ್ರಾರ್ಥಿಸಲು ಶ್ರಾವಣ ಮಾಸ ಯೋಗ್ಯ ಕಾಲವಾಗಿದೆ ಎಂದರು.
ದೇವಾಲಯ ಸಮಿತಿ ಸದಸ್ಯರಾದ ವಿನಾಯಕ ಹೊಸೂರು, ಕೆ.ಟಿ.ರಮೇಶ ಐಗಿನಬೈಲು, ಅನಂತ ಕಲ್ಲಾಪುರ, ಲತಾ ಹೊಸಗುಂದ, ಕೋವಿ ಸ್ವಾಮಿ, ಗಣಪತಿ ಶೆಟ್ಟಿ, ಶೇಖರಪ್ಪ ಶಿವಗಂಗೆ, ಪ್ರಧಾನ ಅರ್ಚಕ ಗಣೇಶ ಭಟ್, ಪುರೋಹಿತರಾದ ಉಮಾಮಹೇಶ ಭಟ್, ವಿಜಯ ಭಟ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net