

ರಾಣೆಬೆನ್ನೂರ: ನಗರದ ಆರ್‌ಟಿಇಎಸ್ ಕಲಾ, ವಿಜ್ಞಾನ ಹಾಗೂ ವಾಣಿಜ್ಯ ಪದವಿ ಮಹಾವಿದ್ಯಾಲಯಕ್ಕೆ ಬುಧವಾರ ನ್ಯಾಕ್ ಕಮಿಟಿ ಭೇಟಿ ನೀಡಿ ದಾಖಲಾತಿ ಪರಿಶೀಲನೆ ನಡೆಸಿತು.
ಯುಜಿಸಿಯ ನ್ಯಾಕ್‌ನಿಂದ ನೇಮಿಸಲ್ಪಟ್ಟ ಮೂರು ಜನರ ಸಮಿತಿಯು ಮಹಾವಿದ್ಯಾಲಯದ ಶೈಕ್ಷಣಿಕ ಪ್ರಗತಿ ಕುರಿತು ಸಮಗ್ರವಾಗಿ ಪರಿಶೀಲನೆ ನಡೆಸಿತು. ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯದ ಪ್ರೋ. ಬಿ. ಧರ್ಮಲಿಂಗಮ ಅಧ್ಯಕ್ಷತೆಯಲ್ಲಿ ಹೈದರಾಬಾದನ ಬಾದಿನ ಓಸಮಾನಿಯಾ ವಿಶ್ವವಿದ್ಯಾಲಯ ವಿಠ್ಠಲ ಮುಗಾ, ಡಾ. ಆರ್.ಎನ್. ಸಿಂಗ್ ತಂಡದಲ್ಲಿದ್ದರು.
ಮಹಾವಿದ್ಯಾಲಯದ ಪ್ರಾಚಾರ್ಯ ಸಿ.ಎ. ಹರಿಹರ ಮಹಾವಿದ್ಯಾಲಯದ ಪ್ರಗತಿಯ ಕಾರ್ಯ ಚಟುವಟಿಕೆ ಕುರಿತು ಮಾಹಿತಿ ನೀಡಿದರು.
ಸಂಸ್ಥೆಯ ಅಧ್ಯಕ್ಷ ಸುಭಾಷ ಸಾವಕಾರ, ಕಾರ್ಯದರ್ಶಿ ಎಸ್.ಕೆ. ಕೋಟಿ, ಡಾ. ಸಂಜಯ ಸಾವಕಾರ, ಡಾ. ಮಧುಕುಮಾರ ಆರ್. ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.