ಆರ್‌ಟಿಇ ಸೀಟು ಅರ್ಜಿ ಸಲ್ಲಿಕೆ ಆರಂಭ: ಏನೆಲ್ಲಾ ದಾಖೆಲಗಳು ಬೇಕಿದೆ? ಇಲ್ಲಿದೆ ಮಾಹಿತಿ

RTE
Published on

ಬೆಂಗಳೂರು: ಶಾಲಾ ಶಿಕ್ಷಣ ಇಲಾಖೆಯು 2025-26ನೇ ಸಾಲಿನ ಶಿಕ್ಷಣ ಹಕ್ಕು ಕಾಯ್ದೆಯಡಿ (ಆರ್‌ಟಿಇ) ಅನುದಾನಿತ ಮತ್ತು ಖಾಸಗಿ ಶಾಲೆಗಳ ಪ್ರವೇಶ ಕೋರಿ ಇಂದಿನಿಂದ (ಏ.15) ಮೇ 12ರವರೆಗೆ ಅರ್ಜಿ ಸಲ್ಲಿಸಬಹುದಾಗಿದೆ.

ಅನುದಾನಿತ ಮತ್ತು ಖಾಸಗಿ ಶಾಲೆಗಳಲ್ಲಿ ಎಲ್‌ಕೆಜಿ ಮತ್ತು ಒಂದನೇ ತರಗತಿಗೆ ದಾಖಲಿಸಲು ಜಾತಿ ಮತ್ತು ಆದಾಯ ಪ್ರಮಾಣಪತ್ರ, ಮಗು ಮತ್ತು ಪಾಲಕರ ಆಧಾರ್ ಕಾರ್ಡ್‌ಗಳನ್ನು ಮಾಹಿತಿಯನ್ನು ನೀಡಬೇಕು ಎಂದು ಶಾಲಾ ಶಿಕ್ಷಣ ಇಲಾಖೆ ಆಯುಕ್ತರು ಸುತ್ತೋಲೆ ಹೊರಡಿಸಿದ್ದಾರೆ.

ಆರ್‌ಟಿಇ ಅರ್ಜಿ ಸಲ್ಲಿಸುವ ವೇಳೆ ಸಮಸ್ಯೆ ಉಂಟಾದಲ್ಲಿ ನ್ಯೂನ್ಯತೆ ಸರಿಪಡಿಸಲು ತಂತ್ರಾಂಶ ಅಭಿವೃದ್ಧಿಪಡಿಸಲಾಗಿದೆ. ಈ ತಂತ್ರಾಂಶದಲ್ಲಿ ನಿರ್ದಿಷ್ಟ ದೂರುಗಳನ್ನು ಅಗತ್ಯ ದಾಖಲೆಗಳೊಂದಿಗೆ ಸಲ್ಲಿಸಿ ತಂತ್ರಾಂಶವನ್ನು ಸದುಪಯೋಗ ಮಾಡಿಕೊಳ್ಳಬಹುದು ಎಂದು ತಿಳಿಸಿದ್ದಾರೆ.

ವೇಳಾಪಟ್ಟಿ

ಏ.15ರಿಂದ ಮೇ 12ರ ಅವಧಿಯಲ್ಲಿ ಅಧಿಕೃತವಾಗಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಮೇ 14ರವರೆಗೆ ಅರ್ಜಿಗಳ ದಾಖಲಾತಿ ಪರಿಶೀಲನೆ ನಡೆಯಲಿದೆ. ಮೇ 17ರಂದು ಅರ್ಹ ಅಭ್ಯರ್ಥಿಗಳ ಪಟ್ಟಿ ಪ್ರಕಟಿಸಲಿದೆ. ಮೇ 21ರಂದು ಮೊದಲ ಸುತ್ತಿನ ಸೀಟು ಹಂಚಿಕೆ ಪ್ರಕ್ರಿಯೆ ನಡೆಯಲಿದೆ ಎಂದು ತಿಳಿಸಿದ್ದಾರೆ.

ಹೆಚ್ಚಿನ ಮಾಹಿತಿಗೆ ಶಾಲಾ ಶಿಕ್ಷಣ ಇಲಾಖೆ ವೆಬ್‌ಸೈಟ್  https://schooleducation.karnataka.gov.in ಗೆ ಭೇಟಿ ನೀಡಬಹುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net