ನಟ ಮಿಥುನ್ ಚಕ್ರವರ್ತಿ ಭೇಟಿ ಮಾಡಿದ ಮೋಹನ್ ಭಾಗವತ್

mohan-bhagwat
Published on

ಮುಂಬೈ: ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರ್​ಎಸ್​ಎಸ್​) ಮುಖ್ಯಸ್ಥ ಮೋಹನ್ ಭಾಗವತ್ ಅವರು ಇಂದು ಬಾಲಿವುಡ್ ನಟ ಮಿಥುನ್ ಚಕ್ರವರ್ತಿ ಅವರ ಮುಂಬೈ ನಿವಾಸಕ್ಕೆ ಭೇಟಿ ನೀಡಿದ್ದರು.

ಈ ವೇಳೆ ಉಬಯ ಕುಶಲೋಪರಿ ನಡೆಸಿದ ಮೋಹನ್ ಭಾಗವತ್ ಅವರು ಮಿಥುನ್ ಚಕ್ರವರ್ತಿ ಮನೆಯಲ್ಲಿ ಉಪಹಾರ ಸವೆದರು.

ಈ ಬಗ್ಗೆ ಪ್ರತಿಕ್ರಿಯಿಸಿರುವ ಮಿಥುನ್ ಚಕ್ರವರ್ತಿ ''ಇದೊಂದು ಸಹಜ ಭೇಟಿಯಷ್ಟೇ. ಮೋಹನ್ ಭಾಗವತ್ ಅವರ ಹಾಗೂ ನನ್ನ ನಡುವೆ ಆಧ್ಯಾತ್ಮಿಕ ಸಂಬಂಧ ಇದೆ. 2019 ರಲ್ಲಿ ನಾಗಪುರದಲ್ಲಿ ನಾನು ಅವರನ್ನು ಭೇಟಿಯಾಗಿದ್ದಾಗ ಒಂದು ಸಾರಿ ನಿಮ್ಮ ಮನೆಗೆ ಬರುತ್ತೇನೆ ಎಂದು ಹೇಳಿದ್ದರು. ಅದು ಈಗ ನೇರವೇರಿತು. ಇದರಲ್ಲಿ ಯಾವುದೇ ರಾಜಕೀಯವಿಲ್ಲ'' ಎಂದು ಹೇಳಿದ್ದಾರೆ.

ಇನ್ನೇನು ಕೆಲವೇ ತಿಂಗಳುಗಳಲ್ಲಿ ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆ ನಡೆಯಲಿದ್ದು, ಮೋಹನ್ ಭಾಗವತರು ಪಶ್ಚಿಮ ಬಂಗಾಳ ಮೂಲದ ಮಿಥುನ್ ಅವರನ್ನು ಭೇಟಿಯಾಗಿದ್ದು ತೀವ್ರ ಕುತೂಹಲ ಕೆರಳಿಸಿದೆ. ಏಕೆಂದರೆ ಪಶ್ಚಿಮ ಬಂಗಾಳದಲ್ಲಿ ಮಿಥುನ್ ಅವರು ಅಪಾರ ಅಭಿಮಾನಿಗಳನ್ನು, ಬೆಂಬಲಿಗರನ್ನು ಹೊಂದಿದ್ದಾರೆ. ಅಲ್ಲದೇ ಅವರು ಈ ಹಿಂದೆ ತೃಣಮೂಲ ಕಾಂಗ್ರೆಸ್​ನಿಂದ ರಾಜ್ಯಸಭೆ ಸದಸ್ಯರೂ ಆಗಿದ್ದರು. ದಿದಿ ತವರಿನಲ್ಲಿ ಶತಾಯ ಗತಾಯ ಗದ್ದುಗೆ ಹಿಡಿಯಬೇಕು ಎಂದು ಬಿಜೆಪಿ ಹವಣಿಸುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net