

ಬೆಂಗಳೂರು: ನಗರದಲ್ಲಿ ಸಂಚಾರ ನಿಯಮ ಉಲ್ಲಂಘನೆ ಸಂಬಂಧ ಸಂಚಾರಿ ಇ-ಚಲನ್ ಮುಖಾಂತರ ದಾಖಲಾದ ಪ್ರಕರಣಗಳಲ್ಲಿ ಬಾಕಿ ದಂಡ ಪಾವತಿಗೆ ನೀಡಲಾಗಿರುವ ಶೇ.೫೦ರಷ್ಟು ರಿಯಾಯಿತಿಗೆ ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಗಿದೆ. ೯ ದಿನಗಳಲ್ಲಿ ೯,೦೬,೭೦೭ ಲಕ್ಷ ಪ್ರಕರಣಗಳಲ್ಲಿ ೨೫.೫೨ ಕೋಟಿ ರೂ. ದಂಡ ಸಂಗ್ರಹವಾಗಿದೆ.
ರಾಜ್ಯ ಸರ್ಕಾರವು ಸಂಚಾರ ನಿಯಮ ಉಲ್ಲಂಘನೆಗಳ ಹಳೇ ಪ್ರಕರಣಗಳಲ್ಲಿ ಬಾಕಿ ದಂಡ ಪಾವತಿಗೆ ಶೇ.೫೦ರಷ್ಟು ರಿಯಾಯಿತಿ ನೀಡಿ ಆದೇಶಿಸಿದೆ. ಆ.೨೩ ರಿಂದ ಸೆ.೧೨ರ ವರೆಗೆ ಶೇ.೫೦ರ ರಿಯಾಯಿತಿಗೆ ಅವಕಾಶ ಕಲ್ಪಿಸಲಾಗಿದೆ. ಆ.೨೩ ರಿಂದ ೩೧ ವರೆಗೆ ಒಟ್ಟು ೨೫,೫೨,೬೦,೨೫೦ ಕೋಟಿ ರೂ. ಸಂಗ್ರಹವಾಗಿದೆ.ನಿಗದಿತ ಸಮಯದೊಳಗೆ ಸುಮಾರು ನೂರು ಕೋಟಿ ರೂ.ಗೂ ಅಧಿಕ ಬಾಕಿ ದಂಡ ಸಂಗ್ರಹವಾಗುವ ನಿರೀಕ್ಷೆಯಿದೆ.