

Jawan movie ticket price high: ಶಾರುಖ್ ಖಾನ್ ಅವರು ಮಾಸ್ ಅವತಾರ ತಾಳುತ್ತಿದ್ದಾರೆ. ‘ಪಠಾಣ್’ ಸಿನಿಮಾದಲ್ಲಿ ಅವರು ಸಖತ್ ಆ್ಯಕ್ಷನ್ ಮೆರೆದಿದ್ದರು. ‘ಜವಾನ್’ ಚಿತ್ರದಲ್ಲೂ ಅದು ಮುಂದುವರಿಯಲಿದೆ ಅನ್ನೋದಕ್ಕೆ ಪ್ರಿವ್ಯೂ ವಿಡಿಯೋ ಹಾಗೂ ಟ್ರೇಲರ್ಗಳೇ ಸಾಕ್ಷಿ . ಗಸ್ಟ್ 31ರಂದು ಜವಾನ್ ಟ್ರೈಲರ್ ರಿಲೀಸ್ ಅದ್ಧೂರಿಯಾಗಿ ನಡೆದಿದೆ. ಚೆನ್ನೈನ ಶ್ರೀರಾಮ್ ಎಂಜಿನಿಯರಿಂಗ್ ಕಾಲೇಜ್ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಟ್ರೈಲರ್ ರಿಲೀಸ್ ಮಾಡಲಾಗಿತ್ತು.
ಈ ಸಿನಿಮಾ ಸೆಪ್ಟೆಂಬರ್ 7ರಂದು ರಿಲೀಸ್ ಆಗಲಿದೆ. ಈ ಚಿತ್ರದಲ್ಲಿ ಶಾರುಖ್ ಖಾನ್ ಅವರು ಹಲವು ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಸಿನಿಮಾ ರಿಲೀಸ್ಗೆ ಒಂದು ವಾರ ಇರುವಾಗ ಅಡ್ವಾನ್ಸ್ ಬುಕಿಂಗ್ ಆರಂಭ ಆಗಿದೆ. ಶಾರುಖ್ ಖಾನ್ ನಟನೆಯ ಈ ಚಿತ್ರದ ಟಿಕೆಟ್ ಬೆಲೆ ಗಗನಕ್ಕೇರಿದೆ. ಬೆಂಗಳೂರಿನಲ್ಲಿ 2400 ರೂಪಾಯಿವರೆಗೆ ‘ಜವಾನ್’ ಸಿನಿಮಾದ ಟಿಕೆಟ್ಗಳು ಮಾರಾಟ ಆಗುತ್ತಿವೆ.
ತಮಿಳಿನ ಖ್ಯಾತ ನಿರ್ದೇಶಕ ಅಟ್ಲಿ ಅವರು ‘ಜವಾನ್’ ನಿರ್ದೇಶನ ಮಾಡಿದ್ದಾರೆ. ನಯನತಾರಾ ಚಿತ್ರದ ನಾಯಕಿ. ತಮಿಳು ಹೀರೋ ವಿಜಯ್ ಸೇತುಪತಿ ವಿಲನ್ ಪಾತ್ರ ಮಾಡಿದ್ದಾರೆ. ಬಾಲಿವುಡ್ ನಾಯಕಿಯರಾದ ಸಾನ್ಯಾ ಮಲ್ಹೋತ್ರಾ ಹಾಗೂ ದೀಪಿಕಾ ಪಡುಕೋಣೆ ಈ ಚಿತ್ರದಲ್ಲಿ ನಟಿಸಿದ್ದಾರೆ.
ಬೆಂಗಳೂರಿನ ಡೈರೆಕ್ಟರ್ಸ್ ಕಟ್ ಥಿಯೇಟರ್ನಲ್ಲಿ ‘ಜವಾನ್’ ಟಿಕೆಟ್ ದರ 2400 ರೂಪಾಯಿ ಇದೆ. ಐಷಾರಾಮಿ ಮಲ್ಟಿಪ್ಲೆಕ್ಸ್ ಆಗಿರುವುದರಿಂದ ಟಿಕೆಟ್ ದರ ದುಬಾರಿಯಾಗಿದೆ. ಸಾಮಾನ್ಯ ಮಲ್ಟಿಪ್ಲೆಕ್ಸ್ಗಳಲ್ಲೂ ಟಿಕೆಟ್ ದರ ಜೋರಾಗಿಯೇ ಇದೆ. ಲುಲು ಮಾಲ್ನಲ್ಲಿರುವ ಸಿನಿಪೊಲಿಸ್ನಲ್ಲಿ ರಾತ್ರಿ ಶೋಗಳ ಟಿಕೆಟ್ ಬೆಲೆ ಗರಿಷ್ಟ 1600 ರೂಪಾಯಿ ಇದೆ. ಬಿನ್ನಿಪೇಟೆ ಸಿನಿಪೊಲಿಸ್ನಲ್ಲಿ ಗರಿಷ್ಠ ಬೆಲೆ 750 ರೂಪಾಯಿ ಇದೆ.
ಮಲ್ಟಿಪ್ಲೆಕ್ಸ್ನಲ್ಲಿ 250 ರೂಪಾಯಿಯಿಂದ ‘ಜವಾನ್’ ಸಿನಿಮಾ ಟಿಕೆಟ್ ಬೆಲೆ ಆರಂಭ ಆಗುತ್ತಿದೆ. ಸಿಂಗಲ್ ಸ್ಕ್ರೀನ್ಗಳಲ್ಲಿನ ದರದ ಬಗ್ಗೆ ಇನ್ನಷ್ಟೇ ಮಾಹಿತಿ ಸಿಗಬೇಕಿದೆ. ಟಿಕೆಟ್ ದರ ಇಷ್ಟೊಂದು ದುಬಾರಿ ಆದರೆ ಜನಸಾಮಾನ್ಯರು ಸಿನಿಮಾ ನೋಡೋದು ಹೇಗೆ ಎನ್ನುವ ಪ್ರಶ್ನೆ ಮೂಡಿದೆ.