ಆಸ್ಟ್ರೋ ಟರ್ಫ್ ಮೈದಾನಕ್ಕೆ 1 ಕೋಟಿ ರೂ. ಚೆಕ್ ಹಸ್ತಾಂತರ

20 gkp 05
ಗೋಣಿಕೊಪ್ಪಲುವಿನ ಅಶ್ವಿನಿ ಸ್ಪೋರ್ಟ್ಸ್ ಫೌಂಡೇಷನ್ ವತಿಯಿಂದ ಕ್ರೀಡೆಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ನಿರ್ಮಿಸಿರುವ ಆಸ್ಟ್ರೋ ಟರ್ಫ್ ಮೈದಾನಕ್ಕೆ ಫೆಡರಲ್ ಬ್ಯಾಂಕ್ ವತಿಯಿಂದ 1 ಕೋಟಿ ರೂ. ಅನುದಾನ ನೀಡಲಾಯಿತು. ಬಿ.ದಿಲೀಪ್, ಕೆ.ವಿ.ಶಜಿ, ಅಶ್ವಿನಿ ನಾಚಪ್ಪ, ದತ್ತ ಕರುಂಬಯ್ಯ, ಕೆ.ಪ್ರವೀಣ್, ವಿ.ಸಿ.ರಾಜೀವ್, ಅಮಲ್ ಎಳದ್ಯತ್ ಇತರರಿದ್ದರು.
Published on

ಗೋಣಿಕೊಪ್ಪಲು: ಅಶ್ವಿನಿ ಸ್ಪೋರ್ಟ್ಸ್ ಫೌಂಡೇಷನ್ ವತಿಯಿಂದ ಕ್ರೀಡೆಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ನಿರ್ಮಿಸಿರುವ ಆಸ್ಟ್ರೋ ಟರ್ಫ್ ಮೈದಾನಕ್ಕೆ ಫೆಡರಲ್ ಬ್ಯಾಂಕ್ ವತಿಯಿಂದ 1 ಕೋಟಿ ರೂ. ಅನುದಾನ ನೀಡಲಾಯಿತು.

ಫೆಡರಲ್ ಬ್ಯಾಂಕ್ ಬೆಂಗಳೂರು ವಲಯ ಮುಖ್ಯಸ್ಥ ಬಿ.ದಿಲೀಪ್ ಅವರು ಅಶ್ವಿನಿ ಸ್ಪೋರ್ಟ್ಸ್ ಫೌಂಡೇಷನ್ ಮುಖ್ಯಸ್ಥೆ ಅಂತಾರಾಷ್ಟ್ರೀಯ ಓಟಗಾರ್ತಿ ಅಶ್ವಿನಿ ನಾಚಪ್ಪ ಹಾಗೂ ಕರುಂಬಯ್ಯಸ್ ಅಕಾಡೆಮಿಕ್ ಆಫ್ ಲನಿರ್ಂಗ್ ಆ್ಯಂಡ್ ಸ್ಪೋರ್ಟ್ಸ್ ಮುಖ್ಯಸ್ಥ ಮನೆಯಪಂಡ ದತ್ತ ಕರುಂಬಯ್ಯ ಅವರಿಗೆ ಮೈದಾನದಲ್ಲಿ ಚೆಕ್ ಹಸ್ತಾಂತರ ಮಾಡಿದರು.

ಫೆಡರಲ್ ಬ್ಯಾಂಕ್ ಬೆಂಗಳೂರು ವಲಯ ಮುಖ್ಯಸ್ಥ ಬಿ.ದಿಲೀಪ್ ಮಾತನಾಡಿ, ಸಾಮಾಜಿಕ ಜವಾಬ್ದಾರಿ ಅರಿತು ಕ್ರೀಡೆಗೆ ಉತ್ತೇಜನ ನೀಡಲು ಆರ್ಥಿಕ ಕೊಡುಗೆ ನೀಡಲಾಗಿದೆ. ಮತ್ತಷ್ಟು ಹಾಕಿ ಕಲಿಗಳು ದೇಶವನ್ನು ಪ್ರತಿನಿಧಿಸುವಂತಾಗಬೇಕು. ಕೇರಳದಿಂದ ಶ್ರಿಜೇಶ್ ದೇಶಕ್ಕಾಗಿ ಆಡಿ ಗಮನ ಸೆಳೆದಿದ್ದಾರೆ. ಕಿರಿಯ ಪ್ರತಿಭೆಗಳು ಮೈದಾನವನ್ನು ಸದುಪಯೋಗ ಪಡಿಸಿಕೊಂಡು ದೇಶವನ್ನು ಪ್ರತಿನಿಧಿಸುವ ಗುರಿ ಈಡೇರಿಸಿಬೇಕು ಎಂದು ಸಲಹೆ ನೀಡಿದರು.

ಬ್ಯಾಂಕ್ ಸಿಎಸ್‌ಆರ್ ಮುಖ್ಯಸ್ಥ ಕೆ.ವಿ.ಶಜಿ ಮಾತನಾಡಿ, ಹಾಕಿ ಕ್ರೀಡೆಗೆ ಯೋಜನೆ ಮೂಲಕ ಧನಸಹಾಯ ನೀಡಿರುವುದು ಖುಷಿ ತಂದಿದೆ ಎಂದರು. ಅಶ್ವಿನಿ ಸ್ಪೋರ್ಟ್ಸ್ ಫೌಂಡೇಷನ್ ಮುಖ್ಯಸ್ಥೆ ಅಶ್ವಿನಿ ನಾಚಪ್ಪ ಮಾತನಾಡಿ, ಸ್ಥಳೀಯ ಪ್ರತಿಭೆಗಳನ್ನು ಹೊರತರುವ ಕಾರ್ಯ ಅಶ್ವಿನಿ ಸ್ಪೋರ್ಟ್ಸ್ ಫೌಂಡೇಷನ್ ಮಾಡುತ್ತಿದೆ. ಸುಮಾರು 5.5 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿರುವ ಮೈದಾನದಲ್ಲಿ ಮತ್ತಷ್ಟು ಪ್ರತಿಭೆಗಳು ಹೊರಬರಬೇಕಿದೆ. ನಮ್ಮದೇ ವಿದ್ಯಾರ್ಥಿ ಸಿ.ಬಿ.ಪೂವಣ್ಣ ಭಾರತ ತಂಡಕ್ಕೆ ಆಯ್ಕೆಯಾಗಿರುವುದು ಹೆಮ್ಮೆಯ ವಿಚಾರ. ಕ್ರೀಡೆಗೆ ಬ್ಯಾಂಕ್ ವತಿಯಿಂದ ನೀಡಿದ ಪ್ರೋತ್ಸಾಹ ಪ್ರತಿಭೆಗಳಿಗೆ ಕೂಡ ಬೆಂಬಲ ನೀಡಿದಂತಾಗಿದೆ ಎಂದರು.

ಕ್ಯಾಲ್ಸ್ ಮುಖ್ಯಸ್ಥ ಮನೆಯಪಂಡ ದತ್ತ ಕರುಂಬಯ್ಯ, ಬ್ಯಾಂಕ್ ಸಿಎಸ್‌ಆರ್ ಉಪಾಧ್ಯಕ್ಷ ಕೆ.ಪ್ರವೀಣ್, ವಲಯ ಮುಖ್ಯಸ್ಥ ವಿ.ಸಿ. ರಾಜೀವ್, ಗೋಣಿಕೊಪ್ಪ ಶಾಖಾ ವ್ಯವಸ್ಥಾಪಕ ಅಮಲ್ ಎಳ್‌ದ್ಯತ್ ಇದ್ದರು. ಶಾಲೆಯ ವಿದ್ಯಾರ್ಥಿಗಳ ಗ್ರೀನ್ ಹಾಗೂ ರೆಡ್ ತಂಡಗಳ ನಡುವೆ ಪ್ರದರ್ಶನ ಪಂದ್ಯ ನಡೆಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net