

ನವದೆಹಲಿ: ನಟಿ ಕ್ಯಾರಿ ಫಿಶರ್ ಧರಿಸಿರುವ ಚಿನ್ನದ ಬಿಕಿನಿ ಶೈಲಿಯ ವೇಷಭೂಷಣ ಹರಾಜಿನಲ್ಲಿ ಬರೋಬ್ಬರಿ 1.46 ಕೋಟಿ ರೂಪಾಯಿಗೆ ಮಾರಾಟವಾಗಿದೆ. ಈ ಸುದ್ದಿ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಹಲ್ಚಲ್ ಎಬ್ಬಿಸಿದೆ.
ರಿಟರ್ನ್ ಆಫ್ ದಿ ಜೇಡಿ ಫ್ರಾಂಚೈಸ್‌ನಲ್ಲಿ ಪ್ರಿನ್ಸೆಸ್ ಲಿಯಾ ಆಗಿ ಕಾಣಿಸಿಕೊಂಡಿದ್ದ ನಟಿ ಕ್ಯಾರಿ ಫಿಶರ್ ಮರೂನ್ ಗೋಲ್ಡನ್ ಬಣ್ಣದ ವಿಶೇಷ ಬಿಕಿನಿ ಧರಿಸಿದ್ದರು. ಆ ಬಿಕಿನಿ ಇಂದು ಕೋಟಿ ಕೋಟಿ ಮೊತ್ತಕ್ಕೆ ಹರಾಜು ಆಗಿದೆ.
ಪಾತ್ರಕ್ಕೆ ಹೊಂದಿಕೊಳ್ಳುವ ಬಿಕಿನಿ 1977ರಿಂದ 1983ರ ಅವಧಿಯಲ್ಲಿ ಭಾರಿ ಸಂಚಲನ ಸೃಷ್ಟಿಸಿತ್ತು. ಬಿಕಿನಿಯಲ್ಲಿ ಬ್ರಾ ಮೇಲೆ ಧರಿಸಿದ್ದ ಗೋಲ್ಡನ್ ಆಭರಣ ರೀತಿಯ ಡ್ರೆಸ್, ಕೈಗಳಿಗೆ ಧರಿಸಿದ್ದ ತೋಳ್ಬಳೆ, ಸೊಂಟಕ್ಕೆ ಧರಿಸಿದ್ದ ರಿಂಗ್ ಸೇರಿದಂತೆ ಫುಲ್ ಸೆಟ್ ಹರಾಜಾಗಿದೆ.
ರಿಚರ್ಡ್ ಮಿಲ್ಲರ್, ಈ ವೇಷಭೂಷಣದ ಸೃಷ್ಟಿಕರ್ತ ಸಂದರ್ಶನವೊಂದರಲ್ಲಿ ಈ ಬಗ್ಗೆ ರಿಚರ್ಡ್ ಮಿಲ್ಲರ್ ಹೇಳಿದ್ದು ಹೀಗೆ. ʻʻಫಿಶರ್‌ಗೆ ಹೆಚ್ಚು ಚಲನೆಯ ಸ್ವಾತಂತ್ರ್ಯ ಸಿಗಬೇಕು ಎಂದು ಮೃದುವಾದ ವಸ್ತುಗಳನ್ನು ಬಳಸಿ ಬಿಕಿನಿ ತಯಾರಿಸಲಾಗಿತ್ತು. ಆದರೆ ಆಕೆ ಅದನ್ನು ಇಷ್ಟಪಡಲಿಲ್ಲ. ಈ ಬಗ್ಗೆ ಅವರನ್ನು ನಾನು ದೂಷಿಸುವುದಿಲ್ಲ, ನಟಿಗೆ ಕಂಫರ್ಟ್ ಆಗಿರಲಿ ಎಂದು ಹಿಂಭಾಗದಲ್ಲಿ ಚರ್ಮವನ್ನು ಹಾಕಿ ಉಡುಪು ತಯಾರಿಸಲಾಗಿತ್ತುʼʼಎಂದು ಹೇಳಿಕೊಂಡಿದ್ದರು.
ಕ್ಯಾರಿ ಫಿಶರ್ 2016ರ ಡಿಸೆಂಬರ್ 27ರಂದು ನಿಧನರಾಗಿದ್ದಾರೆ. ತಮ್ಮ 60ನೇ ವಯಸ್ಸಿನಲ್ಲೂ ಕ್ಯಾರಿ ಅಭಿಯನದ ಮೂಲದ ಪ್ರೇಕ್ಷಕರನ್ನು ಮೋಡಿ ಮಾಡಿದ್ದರು.