

ಬೆಂಗಳೂರು: ಹಾಲಿವುಡ್ ನಟಿ ಜೇನ್ ಫೋಂಡಾ, ನಿನ್ನೆಯಷ್ಟೇ ಎಸ್ಎಸ್ ರಾಜಮೌಳಿ ಅವರ ಆರ್ಆರ್ಆರ್ (RRR) ಚಿತ್ರದ ಬಗ್ಗೆ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಹೊಗಳಿದ್ದಾರೆ. ಆದರೆ ಅದನ್ನು ತಮ್ಮ ಪೋಸ್ಟ್ನಲ್ಲಿ ಬಾಲಿವುಡ್ ಚಿತ್ರ ಎಂದು ಕರೆದಿದ್ದಾರೆ. ಇದನ್ನು ಗಮನಿಸಿದ ಅಭಿಮಾನಿಗಳು 'ಬಾಲಿವುಡ್ ಚಿತ್ರ ಎಂದರೆ ಹಿಂದಿ ಭಾಷೆಯ ಸಿನಿಮಾಗಳು.
ಇದು ಟಾಲಿವುಡ್ ಸಿನಿಮಾ. ಇದು ತೆಲುಗು ಭಾಷೆಯ ಚಿತ್ರ' ಎಂದು ಖಡಕ್ ಆಗಿ ಹೇಳಿದ್ದಾರೆ. ಆರ್ಆರ್ಆರ್ (RRR)ನ ತೆಲುಗು ಭಾಷಿಗ ಅಭಿಮಾನಿಯೊಬ್ಬ ತೆಲುಗಿನಲ್ಲೇ 'ಈಕೆಗೆ ಇದು ಬಾಲಿವುಡ್ ಸಿನಿಮಾ ಅಲ್ಲ ಎಂದು ಯಾರಾದರೂ ಹೇಳಿ' ಎಂದು ಕಾಮೆಂಟ್ ಮಾಡಿದ್ದಾನೆ.
ಹಾಲಿವುಡ್ ಐಕಾನ್ ಜೇನ್ ಫೋಂಡಾ 'ನಾನು ಇತ್ತೀಚೆಗೆ 'ಟು ಲೆಸ್ಲಿ' ಹೆಸರಿನ ಚಿತ್ರವನ್ನು ನೋಡಲು ಎಲ್ಲರಿಗೂ ಸಲಹೆ ನೀಡಿದ್ದೆ. ಆದರೆ ಈಗ ನಾನು RRR ಚಿತ್ರವನ್ನು ನೋಡಿದ್ದು ಇದರ ಪ್ರಕಾರವೇ ಹೊಸದಾಗಿದ್ದು ನನಗೆ ಆಶ್ಚರ್ಯ ಉಂಟುಮಾಡಿದೆ. ಇದು ಬೆಸ್ಟ್ ಫಾರಿನ್ ಸಿನಿಮಾ ವಿಭಾಗದಲ್ಲಿ ನಾಮಿನೇಟ್ ಆಗಿರುವ ಸಿನಿಮಾ ಆಗಿರುವ ಕಾರಣ ಇದನ್ನು ನಾನು ನೋಡಿದ್ದು ಇದು ಇಂಡಿಯಾನ ಜೋನ್ಸ್ ಹಾಗೂ ಇಂಪೀರಿಯಲಿಸಮ್ ನ ಮಿಶ್ರಣ ಇರುವ ಬಾಲಿವುಡ್ ಸಿನಿಮಾ' ಎಂದು ಕ್ಯಾಪ್ಶನ್ ಬರೆದಿದ್ದರು.
ಈ ಬಗ್ಗೆ ಜನರು ಖಡಕ್ ಆಗಿ 'RRR ಬಾಲಿವುಡ್ ಸಿನಿಮಾ ಅಲ್ಲ, ಇದು ಟಾಲಿವುಡ್ ಸಿನಿಮಾ. ಇದನ್ನು ಇಂಡಿಯನ್ ಸಿನಿಮಾ ಎಂದರೆ ತಪ್ಪಾಗಲ್ಲ' ಹೇಳಿದ್ದು ಹಾಲಿವುಡ್ ನಟಿಯ ತಪ್ಪನ್ನು ತಿದ್ದಿದ್ದಾರೆ.