VIDEO: ಆರ್​.ಆರ್​.ನಗರ ಕಾಂಗ್ರೆಸ್​ ಅಭ್ಯರ್ಥಿ ಕುಸುಮಾರಿಂದ ರಾಜರಾಜೇಶ್ವರಿ ದೇವಿಗೆ ಉರುಳು ಸೇವೆ...

Kusuma
Published on

ಬೆಂಗಳೂರು: ವಿಜಯದಶಮಿ ಹಿನ್ನೆಲೆಯಲ್ಲಿ ಆರ್​.ಆರ್​.ನಗರ ಉಪಚುನಾವಣೆ ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ಹನುಮಂತರಾಯಪ್ಪ ಇಂದು ರಾಜರಾಜೇಶ್ವರಿ ದೇವಿ ದೇವಸ್ಥಾನದಲ್ಲಿ ಉರುಳು ಸೇವೆ ಮಾಡಿದರು.

ದೇಗುಲದಲ್ಲಿ ಕುಸುಮಾ ಉರುಳು ಸೇವೆ ಮಾಡಿದ ವಿಡಿಯೋ ವೈರಲ್ ಆಗಿದೆ. ನಂತರ ಮಾತನಾಡಿದ ಅವರು, ಇಡೀ ನಾಡಿನ ಜನತೆ ಹಾಗೂ ಆರ್.ಆರ್.ನಗರದ ಜನರಿಗೆ ಚಾಮುಂಡೇಶ್ವರಿ, ರಾಜರಾಜೇಶ್ವರಿ ಒಳಿತು ಮಾಡಲಿ, ಆಯುರಾರೋಗ್ಯ, ಐಶ್ವರ್ಯ ಕೊಟ್ಟು ಹರಸಲಿ ಎಂದು ಪ್ರಾರ್ಥಿಸಿದ್ದೇನೆ ಎಂದು ಹೇಳಿದ್ದಾರೆ.

ಈಗಾಗಲೇ ಚುನಾವಣಾ ಪ್ರಚಾರದಲ್ಲಿ ಸಕ್ರಿಯರಾಗಿರುವ ಕುಸುಮಾ ನಿನ್ನೆ ಕೂಡ ಡಿ.ಕೆ.ಶಿವಕುಮಾರ್ ಅವರೊಂದಿಗೆ ಆದಿಶಕ್ತಿ ಅಣ್ಣಮ್ಮ ದೇವಸ್ಥಾನಕ್ಕೆ ಭೇಟಿ ನೀಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net