ನಿನ್ನೆ ರಾತ್ರಿ ತಿಪಟೂರಲ್ಲಿ ರೌಡಿಶೀಟರ್ ಡಿಚ್ಚಿ ದಿವಾ ಭೀಕರ ಕೊಲೆ: ಬೆಚ್ಚಿಬಿದ್ದ ಜನತೆ

rowdy divakar
Published on

ತುಮಕೂರು: ತಿಪಟೂರು ತಾಲೂಕಿನ ಹೊಸಹಳ್ಳಿಯಲ್ಲಿ ರೌಡಿಶೀಟರ್ ದಿವಾಕರ್ ಅಲಿಯಾಸ್​ ಡಿಚ್ಚಿ ದಿವಾ ಎಂಬಾತನನ್ನು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ ಸೋಮವಾರ ರಾತ್ರಿ ನಡೆದಿದೆ.

ತಿಪಟೂರು ತಾಲೂಕಿನ ಹುಚ್ಚನಹಳ್ಳಿ ನಿವಾಸಿ ದಿವಾಕರ್, ಸೋಮವಾರ ರಾತ್ರಿ 10 ಗಂಟೆ ಸುಮಾರಿಗೆ ತಿಪಟೂರಿನಿಂದ ಹುಚ್ಚನಹಳ್ಳಿ ಕಡೆಗೆ ಹೋಗುತ್ತಿದ್ದ. ಮಾರ್ಗಮಧ್ಯೆ ಹೊಸಹಳ್ಳಿ ನಾಲ್ಕೈದು ಜನರ ಗುಂಪು ದಾಳಿ ಮಾಡಿ ಮನಸೋಇಚ್ಛೆ ಕೊಚ್ಚಿ ಪರಾರಿಯಾಗಿದೆ. ರಕ್ತದ ಮಡುವಿನಲ್ಲಿ ಬಿದಿದ್ದ ದಿವಾಕರ್​ನನ್ನು ಹಾಸನ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯುವಾಗ ಮಾರ್ಗದಲ್ಲೇ ಕೊನೆಯುಸಿರೆಳೆದಿದ್ದಾನೆ.

ಮೃತ ದಿವಾಕರ್​ ಅಲಿಯಾಸ್​ ಡಿಚ್ಚಿ ದಿವಾ ರೌಡಿಶೀಟರ್ ಆಗಿದ್ದ. ಹೊನ್ನವಳ್ಳಿ, ತಿಪಟೂರು ಟೌನ್, ಎನ್​ಇಪಿಎಸ್ ಜಯನಗರ, ದಾಬಸ್​ಪೇಟೆ, ಬೆಂಗಳೂರು ಸೇರಿದಂತೆ ಹಲವು ಪೊಲೀಸ್ ಠಾಣೆಗಳಲ್ಲಿ ಈತನ ವಿರುದ್ಧ ಕೊಲೆ, ಕೊಲೆ ಯತ್ನ, ಸುಲಿಗೆ ಪ್ರಕರಣಗಳು ದಾಖಲಾಗಿದ್ದವು. ದಿವಾಕರ್​ನನ್ನು ಹಳೇ ವೈಷಮ್ಯದ ಹಿನ್ನೆಲೆ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಆರೋಪಿಗಳಿಗೆ ತಿಪಟೂರು ಗ್ರಾಮಾಂತರ ಪೊಲೀಸರು ಠಾಣೆ ಬಲೆ ಬೀಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net