ಹೆಸರಾಂತ ನಟ ಯಶ್​, ದುನಿಯಾ ವಿಜಿ ಹತ್ಯೆಗೆ ಸ್ಲಂ ಭರತ ಸಂಚು ರೂಪಿಸಿದ್ದ?: ಪೊಲೀಸ್​ ವಿಚಾರಣೆ ವೇಳೆ ಸ್ಫೋಟಕ ಮಾಹಿತಿ

slam barth
Published on

ಬೆಂಗಳೂರು: ಪೊಲೀಸರ ಗುಂಡಿನ ದಾಳಿಗೆ ಬಲಿಯಾದ ರೌಡಿಶೀಟರ್​ ಸ್ಲಂ ಭರತ ಕನ್ನಡದ ಹೆಸರಾಂತ ನಟರಾದ ಯಶ್​ ಹಾಗೂ ದುನಿಯಾ ವಿಜಿ ಹತ್ಯೆಗೆ ಸಂಚು ರೂಪಿಸಿದ್ದ ಎಂಬ ವಿಚಾರ ಬೆಳಕಿಗೆ ಬಂದಿದೆ.

ಉತ್ತರ ಪ್ರದೇಶದಲ್ಲಿ ಬಂಧಿತನಾದ ರೌಡಿಶೀಟರ್​ ಸ್ಲಂ ಭರತ ಪೊಲೀಸರ ವಿಚಾರಣೆ ವೇಳೆ ಈ ವಿಷಯ ತಿಳಿಸಿದ್ದಾನೆ ಎಂದು ಡಿಸಿಪಿ ಶಶಿಕುಮಾರ್​ ಸ್ಪಷ್ಟಪಡಿಸಿದ್ದಾರೆ.

ಆದರೆ ಸಿನಿಮಾ ನಟರ ಹತ್ಯೆ ಸಂಚು ರೂಪಿಸಿದ್ದ ಕುರಿತು ಯಾವುದೇ ದೂರು ದಾಖಲಾಗಿಲ್ಲ. ಬೇರೆ ವಿಭಾಗಗಳಲ್ಲಿ ಈ ಬಗ್ಗೆ ಚರ್ಚೆ ನಡೆದಿರಬಹುದು. ಈ ಬಗ್ಗೆ ತನಿಖೆ ನಡೆಸಲಾಗುವುದು ಎಂದು ಅವರು ಹೇಳಿದರು.

ದೊಡ್ಡ ನಟರ ಹತ್ಯೆ ಮಾಡಿ ರಾಷ್ಟ್ರದ ನಂ.1 ಡಾನ್​ ಆಗಬೇಕು ಎನ್ನುವ ಆಕಾಂಕ್ಷೆಯನ್ನು ಆತ ಹೊಂದಿದ್ದ. ಹೀಗಾಗಿ ಪ್ರಮುಖ ನಟರ ಹತ್ಯೆಗೆ ಸಂಚು ರೂಪಿಸಿದ್ದ ಎನ್ನುವ ವಿಚಾರವನ್ನು ಆತ ವಿಚಾರಣೆ ವೇಳೆ ತಿಳಿಸಿದ್ದಾನೆ ಎಂದು ತಿಳಿದು ಬಂದಿದೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net