ಹೆಲಿಕಾಪ್ಟರ್ ಮೂಲಕ ಚುನಾವಣಾ ಕರಪತ್ರ ಹಂಚಿದ್ದ ಮಾಜಿ ಕಾರ್ಪೊರೇಟರ್, ರೌಡಿಶೀಟರ್ ಚಕ್ರೆ ಇನ್ನಿಲ್ಲ

5656
Published on

ಬೆಂಗಳೂರು: ಶ್ರೀರಾಂಪುರದ ರೌಡಿ ಶೀಟರ್ ಕ್ರಿಸ್ಟೋಫರ್ ಅಲಿಯಾಸ್​ ಚಕ್ರಿ ಯಶವಂತಪುರದ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದಾನೆ.

ಈ ಹಿಂದೆ ಕಾರ್ಪೋರೇಟ್​ ಚುನಾವಣೆಗೆ ಚಕ್ರಿ ಸ್ಪರ್ಧಿಸಿ ಗೆದ್ದಿದ್ದ. ಪ್ರಥಮ ಬಾರಿಗೆ ಹೆಲಿಕಾಪ್ಟರ್ ಮೂಲಕ ಚುನಾವಣಾ ಪಾಂಪ್ಲೆಟ್ ಹಂಚಿ ಪ್ರಚಾರ ಮಾಡಿದ್ದ. ಬ್ರೇನ್ ಸ್ಟ್ರೋಕ್ ಆಗಿದ್ದ ಹಿನ್ನಲೆ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.

ಸೋಮನಾಥ್ ಅಲಿಯಾಸ್ ಡೆಡ್ಲಿ ಸೋಮ ಸಹಚರ ರಾಜಶೇಖರನನ್ನು ಕೊಂದಿದ್ದ ಟೀಂನಲ್ಲಿ ಚಕ್ರಿ ಗುರುತಿಸಿಕೊಂಡಿದ್ದ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net