ಪರಪ್ಪನ ಅಗ್ರಹಾರದಲ್ಲಿ ಟಿಕ್​ಟಾಕ್​ನಲ್ಲಿ ತೆರಿಮೇರಿ ಕಹಾನಿ ಹಾಡುತ್ತಿರುವ ರೌಡಿಶೀಟರ್​ಗಳು

PARAPPANA JAN 29 2020
Published on

ಬೆಂಗಳೂರು: ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಇಬ್ಬರು ರೌಡಿಶೀಟರ್​ಗಳು ಸಿನಿಮಾ ಡೈಲಾಗ್​ ಬಳಸಿಕೊಂಡು ಚಿತ್ರೀಕರಿಸಿರುವ ಟಿಕ್​ ಟಾಕ್​ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ವಸಿಂ ಹಾಗೂ ಫಯಾಜ್​ ಅಲಿಯಾಸ್​ ಚಪ್ಪರ್ ಎಂಬ ರೌಡಿಗಳು ಜೈಲಿನಲ್ಲೇ ಸಿಗರೇಟು ಸೇದುತ್ತಾ ನಟ ಶಿವರಾಜ್ ಕುಮಾರ್ ಚಿತ್ರದ ಡೈಲಾಗ್ ಬಳಸಿಕೊಂಡು ಹವಾಜ್​ ಹಾಕಿರುವ ದೃಶ್ಯದ ಚಿತ್ರೀಕರಣ ನಡೆದಿದೆ. ಜೈಲಿನಲ್ಲಿ ಮಾರಾಕಾಸ್ತ್ರಗಳನ್ನು ಅವರು ತೋರಿಸಿದ್ದಾರೆ.

ಫಯಾಜ್​ ತನ್ನ ಹುಡುಗಿ ಫೋಟೋ ಹಾಕಿಕೊಂಡು ತೆರಿಮೇರಿ ಕಹಾನಿ ಎಂದು ಹಾಡುತ್ತಿದ್ದಾನೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net