ಸೋಮವಾರಪೇಟೆಯಲ್ಲಿ ಆಯೋಜಿಸಿದ್ದ ರೋಟರಿ ಹಿಲ್ಸ್ ಪ್ರದಗ್ರಹಣ ಕಾರ್ಯಕ್ರಮವನ್ನು ಅಭಿನಂದನ್ ಶೆಟ್ಟಿ ಉದ್ಘಾಟಿಸಿದರು. ಸುಂದರ್, ವೀಣಾ, ಅನಿಲ್, ರವಿ ಇದ್ದರು.
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಸಂಸ್ಥೆಯ ಮಾಜಿ ಜಿಲ್ಲಾ ಪ್ರಾಂತಪಾಲ ಅಭಿನಂದನ್ ಶೆಟ್ಟಿ ಹೇಳಿಕೆ
ಸೋಮವಾರಪೇಟೆ: ಸೇವೆ, ನಾಯಕತ್ವ ಹಾಗೂ ಮಾನವೀಯ ಮೌಲ್ಯಗಳಿಗೆ ರೋಟರಿ ಸಂಸ್ಥೆ ಬದ್ಧವಾಗಿದ್ದು, ಶಿಕ್ಷಣ, ಸಾಕ್ಷರತೆ, ಶುದ್ಧ ಕುಡಿಯುವ ನೀರು, ಆರೋಗ್ಯ ಮತ್ತು ಶಾಂತಿ ಸ್ಥಾಪನೆಗೆ ಆದ್ಯತೆ ನೀಡುತ್ತಿದೆ ಎಂದು ರೋಟರಿ ಸಂಸ್ಥೆಯ ಮಾಜಿ ಜಿಲ್ಲಾ ಪ್ರಾಂತಪಾಲ ಅಭಿನಂದನ್ ಶೆಟ್ಟಿ ಹೇಳಿದರು.
ಪಟ್ಟಣದ ಜಾನಕಿ ಕನ್ವೆನ್ಷನ್ ಹಾಲ್‌ನಲ್ಲಿ ಬುಧವಾರ ಆಯೋಜಿಸಿದ್ದ ರೋಟರಿ ಹಿಲ್ಸ್ ಸೋಮವಾರಪೇಟೆ 202627ನೇ ಸಾಲಿನ ನೂತನ ಅಧ್ಯಕ್ಷರು ಹಾಗೂ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ರೋಟರಿಯ ವಿಶ್ವವ್ಯಾಪಿ ಸಾಧನೆಗಳಲ್ಲಿ ಪೋಲಿಯೋ ನಿರ್ಮೂಲನಾ ಅಭಿಯಾನ ಪ್ರಮುಖವಾಗಿದ್ದು, ಸಮಾಜಸೇವಾ ಮನೋಭಾವ ಹಾಗೂ ಉತ್ತಮ ವ್ಯಕ್ತಿತ್ವ ಹೊಂದಿರುವ ಯುವಕರು ರೋಟರಿ ಸದಸ್ಯರಾಗಿ ಸೇರ್ಪಡೆಗೊಂಡು ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಜಿಲ್ಲಾ ರೋಟರಿ ಸದಸ್ಯತ್ವ ವಿಸ್ತರಣಾ ಸಮಿತಿ ಅಧ್ಯಕ್ಷ ಎಚ್.ಟಿ. ಅನಿಲ್ ಮಾತನಾಡಿ, ದಾಖಲೆಯ ಸದಸ್ಯತ್ವ ನೋಂದಣಿ ಮಾಡಿದ ಕೀರ್ತಿ ಸೋಮವಾರಪೇಟೆ ರೋಟರಿ ಹಿಲ್ಸ್‌ಗೆ ಸಲ್ಲುತ್ತದೆ. ರೋಟರಿ ಜಿಲ್ಲೆ 3181ಕ್ಕೆ ಎಂಟು ದಿನಗಳಲ್ಲಿ 180 ಹೊಸ ಸದಸ್ಯರು ಸೇರ್ಪಡೆಯಾಗಿರುವುದು ರೋಟರಿ ಸಂಸ್ಥೆಯ ಮೇಲಿನ ಜನರ ವಿಶ್ವಾಸಕ್ಕೆ ಸಾಕ್ಷಿಯಾಗಿದೆ ಎಂದು ಪ್ರಶಂಸಿಸಿದರು.
2025- 26ನೇ ಸಾಲಿನ ಅಧ್ಯಕ್ಷೆ ವೀಣಾ ಮನೋಹರ್ ನೂತನ ಅಧ್ಯಕ್ಷ ಬಿ.ಎಸ್. ಸುಂದರ್ ಅವರಿಗೆ ರೋಟರಿ ಕಾಲರ್ ಹಸ್ತಾಂತರಿಸಿದರು. ಬಳಿಕ ಅಭಿನಂದನ್ ಶೆಟ್ಟಿ ನೂತನ ಅಧ್ಯಕ್ಷ ಹಾಗೂ ಪದಾಧಿಕಾರಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಿದರು. 23 ಹೊಸ ಸದಸ್ಯರು ರೋಟರಿ ಸಂಸ್ಥೆಗೆ ಸೇರ್ಪಡೆಯಾದರು. ಇದೇ ವೇಳೆ ಕ್ಲಬ್‌ಗೆ ಪ್ರಶಂಸನಾ ಪತ್ರ ಪ್ರದಾನ ಮಾಡಲಾಯಿತು. ನಸಿರ್ಂಗ್ ಕ್ಷೇತ್ರದಲ್ಲಿ ಉತ್ತಮ ಸೇವೆ ಸಲ್ಲಿಸುತ್ತಿರುವ ದಾದಿಯರಾದ ಅನಿತಾ ಹಾಗೂ ಬಿ.ಬಿ. ದಿವ್ಯಾ ಅವರನ್ನು ಸನ್ಮಾನಿಸಲಾಯಿತು. ವೇದಿಕೆಯಲ್ಲಿ ರೋಟರಿ ಡಿ.ಪಿ. ರಮೇಶ್, ವಸಂತ್, ಎ.ಎಸ್.ಮಲ್ಲೇಶ್ ಇದ್ದರು.