ಮಳೆಗೆ ಮನೆಛಾವಣಿ ಕುಸಿತ

MDG rain
ಮೂಡಿಗೆರೆ ತಾಲೂಕಿನ ಅಣಜೂರು ಗ್ರಾಮದ ಈರಮ್ಮ ಅವರ ಮನೆ ಕುಸಿದಿದ್ದು, ಗ್ರಾಮಸ್ಥರು ವೀಕ್ಷಿಸಿದರು.
Published on

ಮೂಡಿಗೆರೆ: ತಾಲೂಕಿನ ಅಣಜೂರು ಗ್ರಾಮದಲ್ಲಿ ಶುಕ್ರವಾರ ಧಾರಾಕಾರ ಮಳೆಗೆ ಈರಮ್ಮ ಎಂಬುವರ ಮನೆಛಾವಣಿ ಕುಸಿದಿದೆ.

ರಾತ್ರಿ ಮಲಗಿದ್ದಾಗ ಛಾವಣಿ ಕುಸಿಯುತ್ತಿರುವುದನ್ನು ಕಂಡ ಈರಮ್ಮ ಹೊರಗೆ ಓಡಿ ಬಂದು ಬಚಾವಾಗಿದ್ದಾರೆ. ಮನೆಯಲ್ಲಿದ್ದ ವಸ್ತುಗಳು ನಾಶವಾಗಿವೆ. ಸಂಬಂಧಿಕರ ಮನೆಯಲ್ಲಿ ವಾಸವಿದ್ದಾರೆ. ಅವರ ಇಬ್ಬರು ಪುತ್ರಿಯರಿಗೆ ವಿವಾಹವಾಗಿದ್ದು, ಅವರೊಬ್ಬರೇ ಮನೆಯಲ್ಲಿ ವಾಸವಾಗಿದ್ದರು. ತಹಸೀಲ್ದಾರ್ ತಿಪ್ಪೇಸ್ವಾಮಿ ಹಾಗೂ ಅಧಿಕಾರಿಗಳು ಶನಿವಾರ ಸ್ಥಳ ಪರಿಶೀಲನೆ ನಡೆಸಿದರು.
ಒಂದು ವಾರದಿಂದ ತಾಲೂಕಿನಲ್ಲಿ ಮಳೆಯಾಗುತ್ತಿದೆ. ಶನಿವಾರ ಕೊಂಚ ಬಿಡುವು ನೀಡಿ ಆಗಾಗ ಮಳೆಯಾಗುತ್ತಿತ್ತು. ತಾಲೂಕು ಆಡಳಿತದಿಂದ ಮಳೆ ಪರಿಸ್ಥಿತಿ ನಿಭಾಯಿಸಲು ಕ್ರಮ ಕೈಗೊಳ್ಳಲಾಗಿದೆ. 23 ಗ್ರಾಪಂ ವ್ಯಾಪ್ತಿಯಲ್ಲಿ ಅಧಿಕಾರಿಗಳ ತಂಡ ರಚಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net