VIDEO| 4 ಕೋಟಿ ರೂ. ಬೆಲೆ ಬಾಳುವ ಕಾರು ಭಾರೀ ಮಳೆಗೆ ಈಗ ದೋಣಿಯಾಗಿ ಬಳಕೆ!

rollsroyce
Published on

ದುಬೈ: ನಗರವು ಮಳೆಯಿಂದ ಜಲಾವೃತವಾಗಿದೆ. ಇಲ್ಲಿನ ಮರುಭೂಮಿ ನಾಡಿನಲ್ಲಿ ಅಕಾಲಿಕ ಮಳೆ ಅವಾಂತರ ಸೃಷ್ಟಿಸಿದೆ. ಗುಡುಗು, ಸಿಡಿಲು ಸಹಿತ ಭಾರೀ ಮಳೆಯಾಗಿದೆ. ಹಲವು ಪ್ರದೇಶಗಳು ಜಲಾವೃತಗೊಂಡಿವೆ. ಅಕಾಲಿಕ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿದೆ.

ದುಬೈನಲ್ಲಿ ಎರಡು ವರ್ಷದಲ್ಲಿ ದಾಖಲಾದ ಮಳೆ.. ಒಂದೇ ದಿನದಲ್ಲಿ ಕೆಲವೇ ಗಂಟೆಗಳಲ್ಲಿ ದಾಖಲಾಗಿದೆ.  ವಾಹನಗಳು ಸಹ ಮಳೆ ಮತ್ತು ಪ್ರವಾಹಕ್ಕೆ ಕೊಚ್ಚಿ ಹೋಗಿವೆ. ದುಬೈ ನೀರಿನ ಪ್ರವಾಹಕ್ಕೆ ಸಂಬಂಧಿಸಿದ ಹಲವು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

ಕೆಂಪು ರೋಲ್ಸ್ ರಾಯ್ಸ್‌ನ ಬಾನೆಟ್ ಮೇಲೆ ಕುಳಿತಿರುವ ವ್ಯಕ್ತಿಯನ್ನು ತೋರಿಸುತ್ತದೆ ಮತ್ತು ಅವನ ಸುತ್ತಲೂ ನೀರು ಸಂಗ್ರಹವಾಗಿದೆ. ಕೈಯಲ್ಲಿ ಎನರ್ಜಿ ಡ್ರಿಂಕ್ ಹಿಡಿದುಕೊಂಡು ಎಂಜಾಯ್ ಮಾಡುತ್ತಿದ್ದಾರೆ. ಪ್ರವಾಹದಲ್ಲಿ ಸಿಲುಕಿ ರೋಲ್ಸ್ ರಾಯ್ಸ್ ನ ಬೋನೆಟ್ ಮೇಲೆ ಹತ್ತಿ ಈ ವ್ಯಕ್ತಿ ಕುಳಿತಿರುವ ಕಾರು ಸುಮಾರು 4 ಕೋಟಿ ಮೌಲ್ಯದ್ದಾಗಿದೆ. ಕೋಟಿ ಬೆಲೆ ಬಾಳುವ ಕಾರು ಈಗ ಅಲ್ಲಿ ದೋಣಿಯಾಗಿ ಮಾರ್ಪಟ್ಟಿದೆ. ಈ ವಿಡಿಯೋವನ್ನು ಸಾಮಾಜಿಕ ಜಾಲತಾಣ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ.

ವೈರಲ್ ವೀಡಿಯೊದಲ್ಲಿ, ಒಬ್ಬ ವ್ಯಕ್ತಿಯು ಕೆಂಪು ರೋಲ್ಸ್ ರಾಯ್ಸ್​​ನ ಬಾನೆಟ್ ಮೇಲೆ ಕುಳಿತಿದ್ದಾನೆ, ಸುತ್ತಲೂ ನೀರು ನಿಂತಿದೆ. ಕೈಯಲ್ಲಿ ಎನರ್ಜಿ ಡ್ರಿಂಕ್ ಹಿಡಿದು ಸವಿಯುತ್ತಿದ್ದಾರೆ. ವಿಡಿಯೋದಲ್ಲಿ ಎಲ್ಲಿ ನೋಡಿದರೂ ನೀರು ಕಾಣುತ್ತಿದೆ. ಈ ವೀಡಿಯೊವನ್ನು ವೀಕ್ಷಿಸಿದ ನಂತರ  ನೆಟ್ಟಿಗರು ಪ್ರತಿಕ್ರಿಯಿಸಿದ್ದಾರೆ. ಈಗ ಮರುಭೂಮಿ ನಾಡು ನೀರಿಲ್ಲದೆ ಪರದಾಡುತ್ತಿತ್ತು ಆದರೆ ಈಗ ಏನಾಗಿದೆ ನೋಡಿ ಎಂದು ಕಾಮೆಂಟ್​​ ಮಾಡುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net