

ಬೆಂಗಳೂರು: ಡಿ. ರೂಪಾ ಇದಾರಲ್ಲ, ಯಾರು ಅವರು? ಸಿಂಧೂ ಅವರ ಡಿಪಾರ್ಟ್ಮೆಂಟ್ನಲ್ಲಿ ನೂರಾರು ಆಫೀಸರ್ಸ್ ಇದ್ದಾರೆ. ಸಿಂಧೂರಿ ಬಗ್ಗೆ ಯಾಕೆ ಮಾತನಾಡುತ್ತಿದ್ದಾರೆ? ಪರ್ಸನಲ್ ಅಜೆಂಡಾ ಏನಿದೆ ಎಂಬುದು ಗೊತ್ತಾಗಬೇಕು. ರೂಪಾ ಅವರಿಗೆ ಮಾನಸಿಕ ತೊಂದರೆ ಇರಬಹುದು ಎಂದು ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಅವರ ಪತಿ ಸುಧೀರ್ ಮಾಧ್ಯಮಗಳ ಮುಂದೆ ಪ್ರಶ್ನಿಸಿದ್ದಾರೆ.
ಸಿಂಧೂರಿ ಅವರ ಫೋಟೋ ಯಾರು ಕಳುಹಿಸಿದ್ದಾರೆಂದು ನನಗೆ ಗೊತ್ತಿಲ್ಲ. ಡಿ.ರೂಪ ಮೂರು ಜನ ಐಎಎಸ್ ಅಧಿಕಾರಿ ಅಂತಾರೆ. ಅವರು ಯಾರೆಂಬುದನ್ನು ಬಹಿರಂಗ ಪಡಿಸಲಿ. ಸಂಪರ್ಕದಲ್ಲಿ ಇಲ್ಲದವರ ಪೋಟೊ ತೆಗೆದು ಡಿ.ರೂಪ ವೈರೆಲ್ ಮಾಡಿದ್ದಾರೆ. ನಾವು ಯಾರಿಗೂ ಶೇರ್ ಮಾಡಿಲ್ಲದ ಫೋಟೋಗಳೆಲ್ಲ ಇವರಿಗೆ ಹೇಗೆ ಸಿಕ್ಕಿದೆ ಎಂದು ಪ್ರಶ್ನಿಸಿದರು.
ನಮ್ಮ ತಂದೆ ಇಲ್ಲಿ ನೂರಾರು ಎಕರೆ ಲೇಔಟ್ ಮಾಡಿದ್ದಾರೆ. ನಮ್ಮ ಕುಟುಂಬದವರು ಐಬಿಎಂ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ನಾನು ಇದೇ ರಾಜ್ಯದಲ್ಲಿ ಹುಟ್ಟಿರುವುದು. ನಾನೊಬ್ಬ ಕನ್ನಡಿಗ ಎಂದು ರೋಹಿಣಿ ಸಿಂಧೂರಿ ಪತಿ ಸುಧೀರ್ ಎಂದು ಮನೆ ನಿರ್ಮಾಣದ ಆರೋಪಕ್ಕೆ ಉತ್ತರಿಸಿದರು.
ಡಿ.ಕೆ ರವಿ ಅವರು ನಮ್ಮಿಂದ ದೂರವಾಗಿದ್ದಾರೆ. ಅವರ ಬಗ್ಗೆ ನಾವು ಮಾತನಾಡಬಾರದು. ಆ ಸಂದರ್ಭದಲ್ಲಿ ನಾವು ಸಾಕಷ್ಟು ಕಷ್ಟ ಪಟ್ಟಿದ್ದೇವೆ. ನನ್ನ ತಂದೆ 2011 ರಲ್ಲಿ ಜಮೀನು ಖರೀದಿ ಮಾಡಿದ್ದು, 2016ರಲ್ಲಿ ಕಾಂಪೌಂಡ್ ಹಾಕಲು ಹೋಗಿದ್ದೇವೆ. ನಂತರ ನಮ್ಮ ತಾಯಿಗೆ ಟ್ರಾನ್ಸಫರ್ ಆಗಬೇಕಿದೆ. ಈ ಹಿನ್ನೆಲೆ ನಾನು ದಾಖಲೆಗಳ ವರ್ಗಾವಣೆಗಾಗಿ ಓಡಾಡಿದ್ದೇನೆ. ಆದರೆ ನಾನು ರೋಹಿಣಿ ಸಿಂಧೂರಿ ಪತಿ ಎಂದು ಹೇಳಿ ಎಲ್ಲೂ ನಾವೂ ಹೆಸರು ದುರ್ಬಳಕೆ ಮಾಡಿಲ್ಲ ಈ ವಿಚಾರವೆಲ್ಲವೂ ರಿಪೋರ್ಟ್ನಲ್ಲಿದೆ. ಡಿ.ರೂಪ ಹೇಳುತ್ತಿರುವ ಆ ಮೂರು ಜನ ಐಎಎಸ್ ಅಧಿಕಾರಿಗಳು ಯಾರೆಂಬುದನ್ನು ಕೂಡಲೇ ಬಹಿರಂಗ ಪಡಿಸಬೇಕು. ಇಲ್ಲದೇ ಹೋದಲ್ಲಿ ನಾನು ಕಾನೂನು ಕ್ರಮ ಕೈಗೊಳ್ಳುತ್ತೇನೆ. ನಾನು ಈವರೆಗೆ ಮಾಧ್ಯಮದ ಮುಂದೆ ಬಂದಿಲ್ಲ. ನನಗೆ ಈ ವಿಷಯ ತೀರ ವೈಯಕ್ತಿವಾದುದರಿಂದ ಮುಂದೆ ಬಂದು ಪ್ರತಿಕ್ರಿಯಿಸುತ್ತಿದ್ದೇನೆ ಎಂದು ಹೇಳಿದರು.
ರೋಹಿಣಿ ಸಿಂಧೂರಿ 10 ವರ್ಷ ಜೂನಿಯರ್ ಅಧಿಕಾರಿ. ಸಣ್ಣ ವಯಸ್ಸಿನಲ್ಲಿ ದೊಡ್ಡ ಹೆಸರು ಮಾಡಿದ್ದಾರೆ ಎಂದು ಡಿ. ರೂಪ ಅವರಿಗೆ ಹೊಟ್ಟೆ ಕಿಚ್ಚಿದೆ. ಹೀಗಾಗಿ ಈ ರೀತಿಯ ಆರೋಪಕ್ಕೆ ರೂಪ ಮುಂದಾಗಿದ್ದಾರೆ. ರೂಪಾ ಅವರಿಗೆ ಪ್ರಚಾರ ಬೇಕಾಗಿದೆ. ಆದರೆ ಸಿಂಧೂರಿ ಅವರ ಕೆಲಸವೇ ಹೇಳುತ್ತದೆ, ಅವರಿಗೆ ಪ್ರಚಾರದ ಗೀಳು ಇಲ್ಲ ಎಂಬುದನ್ನು ಎಂದು ಸುಧೀರ್ ಹೇಳಿದ್ದಾರೆ.