

ಕೆಜಿಎಫ್ ಸಿನಿಮಾ ಮೂಲಕ ಪ್ಯಾನ್ ಇಂಡಿಯಾ ಸ್ಟಾರ್ ಆದ ಯಶ್ ಫ್ಯಾಮಿಲಿ ಮ್ಯಾನ್ ಎಂದರೆ ತಪ್ಪಲ್ಲ. ಅವರು ಶೂಟಿಂಗ್ನಲ್ಲಿ ಬ್ಯುಸಿಯಿದ್ದರು ಸಮಯ ಮಾಡಿಕೊಂಡು ಅಥವಾ ಚಿತ್ರೀಕರಣ ಇಲ್ಲದ ಸಮಯವನ್ನು ತಮ್ಮ ಕುಟಂಬದೊಂದಿಗೆ ಕಳೆಯುತ್ತಾರೆ. ಇದು ರಾಧಿಕಾ ಪಂಡಿತ್ ಅವರು ಆಗಾಗ್ಗೆ ಹಂಚಿಕೊಳ್ಳುವ ಫೋಟೋಗಳನ್ನು ನೋಡಿದ್ರೆ ತಿಳಿಯುತ್ತದೆ.(Radhika Pandit & Yash)
ಹಲವರು ಪಬ್ ಅಥವಾ ಪಾರ್ಟಿ ಮಾಡುತ್ತಾ ಮೂಲಕ ಹೊಸ ವರ್ಷವನ್ನು ಬರಮಾಡಿಕೊಂಡಿದ್ದಾರೆ. ಆದರೆ ಸ್ಯಾಂಡಲ್ವುಡ್ ಸ್ಟಾರ್ ಕಪಲ್ ರಾಧಿಕಾ ಪಂಡಿತ್ ಮತ್ತು ಯಶ್ ಕುಟುಂಬದ ಜತೆಗೆ ಹೊಸ ವರ್ಷಾಚರಣೆಯನ್ನು ಮಾಡಿದ್ದಾರೆ. ಸದ್ಯ ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.
ಬೆಂಗಳೂರಿನ ಗಾಲ್ಫ್ಕೋರ್ಸ್ ಬಳಿ ಇರುವ ಪ್ರೆಸ್ಟೀಜ್ ಅಪಾರ್ಟ್ಮೆಂಟ್ನಲ್ಲಿ ಯಶ್ ಫ್ಲ್ಯಾಟ್ ಹೊಂದಿದ್ದಾರೆ. ಈ ನಿವಾದಲ್ಲಿಯೇ ಮಕ್ಕಳು ಮತ್ತು ಪತ್ನಿ ರಾಧಿಕಾ ಅವರೊಂದಿಗೆ ಸಿಂಪಲ್ ಆಗಿ ನ್ಯೂಇಯರ್ ಸೆಲೆಬ್ರೇಷನ್ ಮಾಡಿದ್ದಾರೆ. ಯಶ್ ಹಾಗೂ ರಾಧಿಕಾ ಪಂಡಿತ್ ಅವರು ಪೆಂಟ್ಹೌಸ್ನಲ್ಲಿರುವ ಸೋಫಾ ರೀತಿಯಲ್ಲಿರುವ ವಸ್ತುವಿನ ಮೇಲೆ ಕುಳಿತಿದ್ದಾರೆ. ಆಯ್ರಾ ಯಶ್ ಕಾಲ ಮೇಲೆ ಕುಳಿತರೆ, ಯಥರ್ವ್ ಅಲ್ಲಿಯೇ ಪಕ್ಕದಲ್ಲಿ ಕುಳಿತಿದ್ದಾನೆ. ಈ ಫೋಟೋಗಳನ್ನು ನೋಡಿ ಅಭಿಮಾನಿಗಳು ಖುಷ್ ಆಗಿದ್ದಾರೆ.
ರಾಧಿಕಾ ಪಂಡಿತ್ ಅವರು ಇತ್ತೀಚೆಗೆ ಕ್ರಿಸ್ಮಸ್ ಸಂದರ್ಭದಲ್ಲಿ ಮಕ್ಕಳ ಜತೆ ಕೇಕ್ ಕತ್ತಿರುಸುತ್ತಿರುವ ಫೋಟೋ ವೈರಲ್ ಆಗಿತ್ತು. ಈ ಫೋಟೋಗೆ ಫ್ಯಾನ್ಸ್ ಪ್ರೀತಿಯಿಂದ ಪ್ರತಿಕ್ರಿಯಿಸಿದ್ದರು. ಈ ಮುದ್ದಾದ ಕುಟುಂಬ ನೋಡಿ ಅನೇಕರಿಗೆ ಖುಷಿ ಆಗಿದೆ.