

ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಬಹುನಿರೀಕ್ಷಿತ ಸಿನಿಮಾ ”ರಾಬರ್ಟ್” ರಿಲೀಸ್ಗೆ ಟಾಲಿವುಡ್ ತೆಗೆದಿದ್ದ ಕ್ಯಾತೆಗೆ ನಟ ದರ್ಶನ್ ಫುಲ್ ಗರಂ ಆಗಿದ್ದರು. ಅಲ್ಲದೆ, ಆಂಧ್ರದ ಈ ನಡೆಗೆ ರಾಜ್ಯದಲ್ಲೂ ಆಕ್ರೋಶ ವ್ಯಕ್ತವಾಗಿತ್ತು. ಇದೀಗ ಈ ಸಮಸ್ಯೆ ಇತ್ಯರ್ಥಕ್ಕೆ ಸೌತ್ ಇಂಡಿಯನ್ ಫಿಲ್ಮ್ ಚೇಂಬರ್ ಅಭಯ ನೀಡಿದೆ.
ಇದೇ ವಿಚಾರವಾಗಿ ಇಂದು(ಭಾನುವಾರ) ಸೌತ್ ಇಂಡಿಯನ್ ಫಿಲ್ಮ್ ಚೇಂಬರ್ಗೆ ಕರ್ನಾಟಕ ಫಿಲ್ಮ್ ಚೇಂಬರ್ ದೂರು ನೀಡಿತು. ಸಕರಾತ್ಮಕವಾಗಿ ಸ್ಪಂದಿಸಿದ ಸೌತ್ ಇಂಡಿಯನ್ ಫಿಲ್ಮ್ ಚೇಂಬರ್, ಮಾ.11ರಂದೇ ಸಿನಿಮಾ ಬಿಡುಗಡೆಗೆ ಅವಕಾಶ ಸಿಗುವ ಬಗ್ಗೆ ಭರವಸೆ ನೀಡಿದೆ. ಸಭೆಯಲ್ಲಿ ವಾಣಿಜ್ಯ ಮಂಡಳಿ ಅಧ್ಯಕ್ಷ ಜಯರಾಜ್, ನಿರ್ಮಾಪಕರ ವಲಯದ ಕಾರ್ಯದರ್ಶಿ ಎನ್.ಎಂ.ಸುರೇಶ್ ಪಾಲ್ಗೊಂಡಿದ್ದರು.