ಬಾಡಿಗೆಮನೆ ನೋಡುವ ಸೋಗಿನಲ್ಲಿ ದರೋಡೆ

Theft
Published on

ಬೆಂಗಳೂರು: ಅಗ್ರಹಾರ ದಾಸರಹಳ್ಳಿಯಲ್ಲಿ ಬಾಡಿಗೆ ಮನೆ ನೋಡುವ ಸೋಗಿನಲ್ಲಿ ಮನೆಗೆ ಬಂದು ಮಹಿಳೆ ಮೇಲೆ ಹಲ್ಲೆ ನಡೆಸಿ 30 ಗ್ರಾಂ ಆಭರಣ ಮತ್ತು 60 ಸಾವಿರ ರೂ.ಗಳನ್ನು ದುಷ್ಕರ್ವಿು ದೋಚಿದ್ದಾನೆ.

ಅಗ್ರಹಾರ ದಾಸರಹಳ್ಳಿಯ ಎಸ್.ಆರ್. ಮೀನಾಕ್ಷಿ (43) ಹಲ್ಲೆಗೆ ಒಳಗಾದವರು. ಶನಿವಾರ (ಆ.1) ಬೆಳಗ್ಗೆ 11 ಗಂಟೆಯಲ್ಲಿ ಮನೆ ಬಳಿಗೆ ಬಂದ 35 ವರ್ಷದ ಅಪರಿಚಿತ ವ್ಯಕ್ತಿ, ‘ಪಕ್ಕದ ಮನೆ ಖಾಲಿ ಇದೆಯಾ?’ ಎಂದು ಕೇಳಿದ್ದಾನೆ. ಹೌದು.. ಎಂದು ಹೇಳಿದ ಮೀನಾಕ್ಷಿ, ಮನೆ ತೋರಿಸಲು ಕೀ ತರಲು ಮನೆಯ ಒಳಕ್ಕೆ ಹೋದಾಗ ಹಿಂದೆಯೇ ಬಾಗಿಲು ತಳ್ಳಿ ಒಳನುಗ್ಗಿದ ಆರೋಪಿ ಬಾಗಿಲು ಲಾಕ್ ಮಾಡಿದ್ದಾನೆ.

ಮೀನಾಕ್ಷಿ ಅವರನ್ನು ರೂಂಗೆ ಎಳೆದೊಯ್ದು ಬೆದರಿಸಿ 30 ಗ್ರಾಂ ಚಿನ್ನಾಭರಣ ಕಸಿದá-ಕೊಂಡಿದ್ದಾನೆ. ವರಮಹಾಲಕ್ಷ್ಮೀ ಪೂಜೆಗಿಟ್ಟಿದ್ದ 60 ಸಾವಿರ ರೂ. ತೆಗೆದá-ಕೊಂಡು ಕಿವಿ ಓಲೆಗಳನ್ನು ಬಿಚ್ಚಿಕೊಡುವಂತೆ ತಾಕೀತು ಮಾಡಿದ್ದಾನೆ. ಮೀನಾಕ್ಷಿ ನಿರಾಕರಿಸಿದಾಗ ಚಾಕುವಿನಿಂದ ಕೈ ಮೇಲೆ ಹಲ್ಲೆ ನಡೆಸಿದ್ದಾನೆ. ಆಗ ಆಕೆ ಕೂಗಿಕೊಂಡಿದ್ದು, ಭಯಗೊಂಡ ಆರೋಪಿ ಪರಾರಿಯಾಗಿದ್ದಾನೆ. ನಂತರ ಮೀನಾಕ್ಷಿ ತಮ್ಮ ಕುಟುಂಬ ಸದಸ್ಯರಿಗೆ ವಿಷಯ ತಿಳಿಸಿ ಪೊಲೀಸರಿಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿ ಆರೋಪಿ ಪತ್ತೆಗೆ ಕ್ರಮ ಕೈಗೊಂಡಿರುವುದಾಗಿ ಮಾಗಡಿ ರಸ್ತೆ ಠಾಣೆ ಪೊಲೀಸರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net