ರಾಬರಿ ಮಾಡಿದ ಮೋಸ್ಟ್​ ವಾಂಟೆಡ್​ ರೌಡಿ; 20 ನಿಮಿಷದಲ್ಲಿ ಬಂಧಿಸಿದ ಪೊಲೀಸರು..!

New Project
Published on

ಬೆಂಗಳೂರು: ಕಳ್ಳರು ಕದಿಯುವುದು, ಪೊಲೀಸರು ಅವರನ್ನ ಹಿಡಿಯುವುದು, ಇದೆಲ್ಲಾ ಮಾಮೂಲಿ ಸುದ್ದಿಗಳು. ಆದರೆ ಇಲ್ಲಿ ನಡೆದಿರುವುದೇ ಬೇರೆ! ಈತ ಸಿಸಿಬಿ ಅಧಿಕಾರಿಗಳಿಗೆ, ಬೇರೆ ಬೇರೆ ಠಾಣೆಗಳ ಪೊಲೀಸರಿಗೆ ಬೇಕಾದ ಕುಖ್ಯಾತ ರೌಡಿ. ಈತ ರಾಬರಿ ಮಾಡಿದ ಕೂಡಲೆ ಕಾರ್ಯಪ್ರವೃತ್ತರಾದ ಪೊಲೀಸರು ಈತನನ್ನು 20 ನಿಮಿಷದಲ್ಲೇ ಬಂಧಿಸಿದ್ದಾರೆ!

ಹೌದು! ಕಳ್ಳತನ ಮಾಡಿದ ಕೇವಲ ಇಪ್ಪತ್ತು ನಿಮಿಷದಲ್ಲಿ ಪೊಲೀಸರು ಪ್ರಕರಣವನ್ನು ಭೇದಿಸಿ ಆರೋಪಿಗಳನ್ನು ಬಂಧಿಸಿದ ಘಟನೆ ನಾಗವಾರ ಬಳಿಯ ಕನಕನಗರದಲ್ಲಿ ನಡೆದಿದೆ. ಇದಾದ ನಂತರ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.

ನಾಗವಾರ ಬಳಿಯ ಕನಕ ನಗರದ 13ನೇ ಕ್ರಾಸ್​ನಲ್ಲಿ ನಡುರಸ್ತೆಯಲ್ಲೇ ಕುಟುಂಬ ಒಂದನ್ನು ನಿಲ್ಲಿಸಿ ಈ ಗ್ಯಾಂಗ್​ ರಾಬರಿ ಮಾಡಿದೆ. ಮನ್ಸೂರ್ ದಾನ್ ,ಅಬ್ದುಲ್ ಹಾಗೂ ಅವರ ಗ್ಯಾಂಗ್, ಡಿಸೆಂಬರ್ 5ನೇ ತಾರೀಕಿನಂದು‌ ಕಾರಿನಲ್ಲಿ ಹೊರಗಡೆ ಹೋಗಿ ಬರುತ್ತಿದ್ದ ಮನೆಯವರ ಮೇಲೆ ಅಟ್ಯಾಕ್ ಮಾಡಿದೆ. ವೃತ್ತಿಯಲ್ಲಿ ಮೆಡಿಕಲ್ ಮಾಲೀಕರಾಗಿರುವ ಅಹಮದ್​​, ತಮ್ಮ ಸ್ನೇಹಿತನ ಮನೆಗೆ ಹೋಗಿ ವಾಪಸ್​ ಬರುವಾಗ ಈ ಗ್ಯಾಂಗ್​ನವರು ಬೈಕಿನಲ್ಲಿ ಬಂದು ಕಾರಿಗೆ ಗುದ್ದಿದ್ದಾರೆ. ನಂತರ ಅಹಮದ್ ಕುಟುಂಬದವರ ಮೇಲೆ ಈ ಗ್ಯಾಂಗ್​ ಹಲ್ಲೆ ಮಾಡಿದೆ.

ಮನ್ಸೂರ್ ಗ್ಯಾಂಗ್​, ಕಾರಿನಿಂದ ಇಡೀ ಕುಟುಂಬವನ್ನೇ ಹೊರಗಡೆ ಎಳೆದು ಹಾಕಿ ಹಲ್ಲೆ ಮಾಡಿದೆ. ಈ ವೇಳೆ ಕುಟುಂಬದ ಕೈಯಲ್ಲಿದ್ದ ಮೊಬೈಲ್, ಹಣ ಕಿತ್ತುಕೊಂಡ ಮನ್ಸೂರ್​ ಅದೇ ಕಾರಿನ‌ ಕೀ ತೆಗೆದುಕೊಂಡು ತಮ್ಮ ಗ್ಯಾಂಗ್​ ಜೊತೆಗೆ ಪರಾರಿ ಆಗಿದ್ದಾನೆ.

ನಂತರ ಮನ್ಸೂರ್​ ತನ್ನ ಗ್ಯಾಂಗ್​ ಜೊತೆ ಸೇರಿ, ಹೊರಮಾವು ಬ್ರಿಡ್ಜ್ ಬಳಿ ಇರುವ ಬಾರ್ ಬಳಿ ನಿಂತು ಮದ್ಯ ಸೇವನೆ ಮಾಡುತ್ತಿದ್ದ. ಇಷ್ಟರಲ್ಲೇ ಈ ಮನ್ಸೂರ್​ ಯಾರು, ಎಲ್ಲಿದ್ದಾನೆ ಎನ್ನುವ ಮಾಹಿತಿಯನ್ನು ಕಂಡು ಹಿಡಿದ ಪೊಲೀಸರು, ಸ್ಥಳಕ್ಕೆ ಹೋಗಿ ಈ ಮನ್ಸೂರ್​ನನ್ನು ಬಂಧಿಸಿದ್ದಾರೆ.

ಇನ್ನು ಮನ್ಸೂರ್, ಎಷ್ಟು ವಿಲಕ್ಷಣ ವ್ಯಕ್ತಿತ್ವ ಹೊಂದಿರುವವನು ಎಂದರೆ ತನ್ನ ಮಗನ ಮೇಲೆ ಹೆಚ್ಚು ಪ್ರೀತಿ ಎಂದು ಪ್ರತಿ ಪ್ರಕರಣಕ್ಕೂ ತನ್ನ ಮಗನನ್ನು ಕರೆದುಕೊಂಡು ಹೋಗ್ತಿದ್ದ. ಅಷ್ಟೇ ಅಲ್ಲ, ತನ್ನ ಮಗನ ಮುಂದೆನೇ ಹಲ್ಲೆ ಕೂಡ ಮಾಡ್ತಿದ್ದ!

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net