ಅಮೆರಿಕಾದಲ್ಲಿ ರಸ್ತೆ ಬದಿ ಮೂತ್ರ ವಿಸರ್ಜನೆ; ಪ್ರಶ್ನಿಸಿದ ಹರಿಯಾಣದ ವ್ಯಕ್ತಿಯನ್ನು ಗುಂಡಿಕ್ಕಿ ಹತ್ಯೆ| Shot Dead

Hariyana
Published on

Shot Dead: ಅಮೆರಿಕಾದಲ್ಲಿ ರಸ್ತೆ ಬದಿ ಮೂತ್ರ ವಿಸರ್ಜನೆ ಮಾಡ್ತಿದ್ದನ್ನು ಪ್ರಶ್ನಿಸಿದ್ದಕ್ಕೆ ಶಾಪ್​ವೊಂದರಲ್ಲಿ ಸೆಕ್ಯೂರಿಟಿ ಗಾರ್ಡ್​ ಆಗಿ ಕೆಲಸ ಮಾಡ್ತಿದ್ದ ಹರಿಯಾಣ ಮೂಲದ ವ್ಯಕ್ತಿಯಲ್ಲಿ ಗುಂಡಿಕ್ಕಿ ಹತ್ಯೆ ಮಾಡಲಾಗಿದೆ ಎಂದು ಸೋಮವಾರ (ಸೆ. 08) ಪಿಟಿಐ ವರದಿ ಮಾಡಿದೆ.

ಹರಿಯಾಣದ ಜಿಂದ್ ಜಿಲ್ಲೆಯ ಬರಾಹ್ ಕಲಾನ್ ಗ್ರಾಮದ 26 ವರ್ಷದ ಕಪಿಲ್ ಕ್ಯಾಲಿಫೋರ್ನಿಯಾದ ಅಂಗಡಿಯೊಂದರಲ್ಲಿ ಭದ್ರತಾ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದರು. ಅಂಗಡಿಯ ಹೊರಗೆ ವ್ಯಕ್ತಿಯೊಬ್ಬ ಮೂತ್ರ ವಿಸರ್ಜನೆ ಮಾಡುತ್ತಿದ್ದನ್ನು ಆಕ್ಷೇಪಿಸಿದಾಗ ವಾಗ್ವಾದ ನಡೆದಿದೆ. ತಕ್ಷಣೆ ಆರೋಪಿ ತನ್ನ ಬಳಿ ಇದ್ದ ಬಂದೂಕನ್ನು ತಂದು ಕಪಿಲ್​ ಮೇಲೆ ಗುಂಡು ಹಾರಿಸಿ ಕೊಂದಿದ್ದಾನೆ ಎಂದು ಮೃತನ ಕುಟುಂಬಸ್ಥರು ಆರೋಪಿಸಿದ್ದಾರೆ.

ಕಪಿಲ್ ಸುಮಾರು ಮೂರು ವರ್ಷಗಳ ಹಿಂದೆ ಅಮೆರಿಕಕ್ಕೆ ಹೋಗಿದ್ದನು. ಬಹುಶಃ "ಕತ್ತೆ ಮಾರ್ಗ"ದ ಮೂಲಕ, ಪನಾಮದ ಕಾಡುಗಳನ್ನು ದಾಟಿ ಮೆಕ್ಸಿಕೊ ಗಡಿ ಗೋಡೆಯನ್ನು ಹತ್ತಿ ಅಮೆರಿಕಾ ಪ್ರವೇಶಿದ್ದಾನೆ ಎಂದು ವರದಿಗಳು ಉಲ್ಲೇಖಿಸಿವೆ. ಆರಂಭದಲ್ಲಿ ಅವರನ್ನು ಬಂಧಿಸಲಾಗಿದ್ದರೂ, ನಂತರ ಕಾನೂನು ಕ್ರಮಗಳ ಬಳಿಕ ಬಿಡುಗಡೆ ಮಾಡಲಾಗಿದೆ. ಅಂದಿನಿಂದ ಕಪಿಲ್ ಅಮೆರಿಕಾದಲ್ಲಿ ನೆಲೆಸಿದ್ದು, ಇದಕ್ಕೆ ಅವರ ಕುಟುಂಬ 45 ಲಕ್ಷ ರೂ. ಖರ್ಚು ಮಾಡಿದೆ ಎನ್ನಲಾಗಿದೆ.

ಕಪಿಲ್ ತಂದೆ ರೈತರಾಗಿದ್ದು, ಸಣ್ಣಮಟ್ಟದ ಜಮೀನು ಹೊಂದಿದ್ದಾರೆ. ಇಬ್ಬರು ಸಹೋದರಿಯರಿದ್ದಾರೆ. ಕಮೃತದೇಹವನ್ನು ಗ್ರಾಮಕ್ಕೆ ತರಲು ಸಹಾಯ ಮಾಡುವಂತೆ ಕೇಂದ್ರ ಮತ್ತು ಹರಿಯಾಣ ಸರ್ಕಾರವನ್ನು ಗ್ರಾಮದ ಮುಖ್ಯಸ್ಥ ಗೌತಮ್ ಒತ್ತಾಯಿಸಿದರು. ಈ ಸಂಬಂಧ ಅವರ ಕುಟುಂಬವು ಜಿಲ್ಲಾಧಿಕಾರಿಯನ್ನು ಭೇಟಿ ಮಾಡಲು ಯೋಜಿಸುತ್ತಿದೆ ಎಂದು ತಿಳಿಸಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net