ತಹಸೀಲ್ದಾರ್‌ರಿಂದ ರಸ್ತೆ ಪರಿಶೀಲನೆ

IMG-20231116-WA0076
ಬಿ.ಲಕ್ಷ್ಮಿಪುರ ಗ್ರಾಮದಲ್ಲಿ ತಹಸೀಲ್ದಾರ್ ಸಮಕ್ಷಮದಲ್ಲಿ ರಸ್ತೆ ಸರ್ವೇ ಕಾರ್ಯ ನಡೆಯಿತು. ಗಿರೀಶ್, ಆನಂದ್, ನವೀನ್‌ರಾವ್ ಇದ್ದರು.
Published on

ಬೈಲಕುಪ್ಪೆ: ಸಮೀಪದ ಬಿ.ಲಕ್ಷ್ಮೀಪುರ ಗ್ರಾಮದ ಸರ್ವೇ ನಂ.40ರ ಸಾರ್ವಜನಿಕರ ರಸ್ತೆಯಲ್ಲಿ ತಿರುಗಾಡಲು ಕೆಲವರು ತೊಂದರೆ ಕೊಡುತ್ತಿದ್ದಾರೆ ಎಂಬ ಗ್ರಾಮಸ್ಥರ ದೂರಿನ ಮೇರೆಗೆ ತಹಸೀಲ್ದಾರ್ ಕು.ಞ.ಅಹಮದ್ ಗುರುವಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ, ಕಲ್ಲು ಅಳವಡಿಸಿ ಬಂದೋಬಸ್ತ್ ಮಾಡಿಸಿದರು.

ತಹಸೀಲ್ದಾರ್ ಸಮ್ಮುಖದಲ್ಲಿ ಭೂಮಾಪನಾ ಇಲಾಖೆ ಅಧಿಕಾರಿಗಳು ಸರ್ವೇ ಕಾರ್ಯ ನಡೆಸಿ 12 ಅಡಿ ರಸ್ತೆ ಬಿಡಿಸಿ ಕಲ್ಲು ನೆಟ್ಟಿದ್ದು, ಸಾರ್ವಜನಿಕರ ಓಡಾಟಕ್ಕೆ ಯಾರಾದರು ತೊಂದರೆ ಕೊಟ್ಟರೆ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು ಎಂದು ತಹಸೀಲ್ದಾರ್ ಎಚ್ಚರಿಸಿದರು.

ಆರ್‌ಐ ಆನಂದ್, ತಾಲೂಕು ಭೂಮಾಪನಾ ಅಧಿಕಾರಿ ಗಿರೀಶ್, ಗ್ರಾಮ ಲೆಕ್ಕಾಧಿಕಾರಿ ನವೀನ್‌ರಾವ್, ಬೈಲಕುಪ್ಪೆ ಠಾಣೆ ಪೊಲೀಸ್ ಸಿಬ್ಬಂದಿ ಮುದ್ದುರಾಜ್, ಕುಮಾರಸ್ವಾಮಿ, ರವಿಕುಮಾರ್, ಶಿವಣ್ಣ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಚೆನ್ನಯ್ಯ, ಕಾಂಗ್ರೆಸ್ ಮುಖಂಡ ಅಸ್ಲಾಂ, ಗ್ರಾಮಸ್ಥರಾದ ಕೃಷ್ಣ, ಮಹದೇವ ನಾಯಕ, ಉದಯ ನಾಯಕ, ವೀರಭದ್ರ, ರಘು, ಕಿರಣ್, ಪ್ರದೀಪ್ ಮತ್ತಿತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net