video/ ಜನರು ಪ್ರಯಾಣಿಸಬೇಕಿದ್ದ ಸಾರಿಗೆ ಬಸ್​ನಲ್ಲಿ ಸಿಮೆಂಟ್ ಕಲ್ಲುಗಳ ಸಾಗಣೆ!

bus- road divider
Published on

ಹುಬ್ಬಳ್ಳಿ: ಸಾರ್ವಜನಿಕರನ್ನು ಕರೆದೊಯ್ಯಬೇಕಿದ್ದ ಸರ್ಕಾರಿ ಬಸ್​ನಲ್ಲಿ ಸಿಮೆಂಟ್​ಕಲ್ಲುಗಳನ್ನು ತುಂಬಿಕೊಂಡು ಪ್ರಯಾಣಿಸಿರುವ ವಿಡಿಯೋ ವೈರಲ್​ ಆಗಿದೆ.

ಹುಬ್ಬಳ್ಳಿ-ಕುಂದಗೋಳ ಮಾರ್ಗದ ಬಸ್​ನಲ್ಲಿ ಹುಬ್ಬಳ್ಳಿಯ ಹೊಸೂರು ಬಳಿ ರಸ್ತೆ ಡಿವೈಡರ್​ಗೆ ಹಾಕಲಾಗಿದ್ದ ಸಿಮೆಂಟ್ ಕಲ್ಲುಗಳನ್ನು ಬಸ್​ನಲ್ಲಿ ತುಂಬಿಕೊಂಡು ಹೋಗಿದ್ದಾರೆ. ಮಹಾನಗರ ಪಾಲಿಕೆ ನಿರ್ಮಿಸಿದ್ದ ರಸ್ತೆ ಡಿವೈಡರ್​ನ ಕಲ್ಲುಗಳನ್ನು ಸಾರಿಗೆ ಸಿಬ್ಬಂದಿ ಕಳ್ಳತನ ಮಾಡಿಕೊಂಡು ಹೋಗಿದ್ದಾರೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ. ಈ ಡಿವೈಡರ್ ಕಲ್ಲುಗಳನ್ನ ಬಸ್​ ಡಿಪೋಗೆ ತೆಗೆದುಕೊಂಡು ಹೋಗುತ್ತಿರುವುದಾಗಿ ಸಿಬ್ಬಂದಿ ಹೇಳಿದ್ದಾರೆ.

ಸಾರ್ವಜನಿಕರ ಪ್ರಯಾಣಕ್ಕೆ ಬಳಸಬೇಕಾದ ಸಾರಿಗೆ ಬಸ್​ನಲ್ಲಿ ಡಿವೈಡರ್​ ಕಲ್ಲು ತುಂಬಿದ್ದಕ್ಕೆ ಸಾರ್ವಜನಿಕ ವಲಯ ತೀವ್ರ ಆಕ್ರೋಶ ಹೊರಹಾಕಿದೆ. ಗೂಡ್ಸ್ ವಾಹನ ಬಳಸದೆ ಸಾರಿಗೆ ಬಸ್ಸನ್ನೇ ಕಲ್ಲು ತುಂಬಲು ಬಳಕೆ ಮಾಡಿರುವುದು ಸರಿಯಲ್ಲ ಎಂದು ಎನ್​ಡಬ್ಲ್ಯೂಕೆಎಸ್​ಆರ್​ಟಿಸಿ ಸಿಬ್ಬಂದಿಯ ಯಡವಟ್ಟಿಗೆ ತೀವ್ರ ಆಕ್ಷೇಪ ವ್ಯಕ್ತವಾಗಿದೆ. ಮೇಲಧಿಕಾರಿಗಳ ಸೂಚನೆಯಂತೆ ಸಾರಿಗೆ ಬಸ್​ನಲ್ಲಿ ಕಲ್ಲು ತುಂಬಿಕೊಂಡು ಡಿಪೋಗೆ ಹಾಕಲು ಹೋಗುತ್ತಿರುವುದಾಗಿ ಸಿಬ್ಬಂದಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net