ರಸ್ತೆ ಅಪಘಾತದಲ್ಲಿ ಮಹಿಳೆ ಸಾವು

death
Published on

ಕಬ್ಬೂರ: ಪಟ್ಟಣದ ಕಬ್ಬೂರ-ಬೆಲ್ಲದ ಬಾಗೇವಾಡಿ ರಸ್ತೆಯಲ್ಲಿ ಗೋಡ್ಸ್ ಟಂಟಂ ಹಾಗೂ ಕಾರು ಮಧ್ಯ ಸಂಭವಿಸಿದ ಅಪಘಾತದಲ್ಲಿ ಮಹಿಳೆ ಮೃತಪಟ್ಟ ಘಟನೆ ಮಂಗಳವಾರ ನಡೆದಿದೆ. ಮಹಾರಾಷ್ಟ್ರದ ಹಾತಕನಗಲಿ ತಾಲೂಕಿನ ಕುಂಭೂಜ ಗ್ರಾಮದ ತಾರಾಬಾಯಿ ಭೀಮಗೌಡ ಪಾಟೀಲ (55) ಮೃತ ಮಹಿಳೆ.

ಗದಗ ಜಿಲ್ಲೆಯ ಯಮನೂರ ದೇವಸ್ಥಾನಕ್ಕೆ ತೆರಳುತ್ತಿರುವಾಗ ಈ ಘಟನೆ ಸಂಭವಿಸಿದೆ. ಈ ಕುರಿತು ಚಿಕ್ಕೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net