ರಸ್ತೆ ತುಂಬೆಲ್ಲ ಪ್ರಾಣಿಗಳ ಎಲುಬು-ಲಾರಿ-ಟೆಂಪೋ ನಡುವೆ ಡಿಕ್ಕಿ

Accident
Published on

ಬೇತಮಂಗಲ: ಪ್ರಾಣಿಗಳ ಎಲುಬು ಸಾಗಿಸುತ್ತಿದ್ದ ಲಾರಿ ಮತ್ತು ಹಾಲು ಸಾಗಣೆ ವಾಹನಗಳ ನಡುವೆ ಅಪಘಾತ ಸಂಭವಿಸಿ, ಒಬ್ಬ ಸ್ಥಳದಲ್ಲೇ ಮೃತಪಟ್ಟಿದ್ದು, ನಾಲ್ವರಿಗೆ ಗಂಭೀರ ಗಾಯಗಳಾಗಿವೆ.

ಹಾಲಿನ ವಾಹನ ಚಾಲಕ ಗಣೇಶ್ (26) ಮೃತ. ಗುಣಶೇಖರ್ (22) ಎಂಬಾತನಿಗೆ ತೀವ್ರ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಲಾರಿ ಚಾಲಕ ಸೇರಿ ಮೂವರಿಗೆ ಸಣ್ಣಪುಟ್ಟ ಗಾಯಗಳಾಗಿವೆ.

ಘಟನೆ ವಿವರ: ಬೆಂಗಳೂರಿನಿಂದ ತಮಿಳುನಾಡಿಗೆ ಪ್ರಾಣಿಗಳ ಎಲುಬು ಸಾಗಿಸುತ್ತಿದ್ದ ಲಾರಿ ಮತ್ತು ಆಂಧ್ರಪ್ರದೇಶದ ಖಾಸಗಿ ಸಂಸ್ಥೆಯ ಹಾಲಿನ ಪ್ಯಾಕೆಟ್ ಸಾಗಿಸುತ್ತಿದ್ದ ವಾಹನದ ನಡುವೆ ಬೇತಮಂಗಲದ ವಿ.ಕೋಟೆ ರಸ್ತೆಯ ಬೆಟ್ಕೂರು ಕ್ರಾಸ್ ಬಳಿ ಗುರುವಾರ ಬೆಳಗ್ಗೆ 7ಗಂಟೆಗೆ ಅಪಘಾತ ಸಂಭವಿಸಿದೆ.

ಜಾರ್ಖಂಡ್ ಮೂಲದ ನೋಂದಣಿ ಸಂಖ್ಯೆಯ ಲಾರಿಯಲ್ಲಿ ಬೆಂಗಳೂರಿನ ಡಿಜೆ ಹಳ್ಳಿಯಿಂದ ಹಸು ಮತ್ತು ಎಮ್ಮೆ ಹಾಗೂ ಇತರ ಪ್ರಾಣಿಗಳ ಮೂಳೆಗಳು, ಕೊಂಬುಗಳು, ತಲೆಗಳು ಹಾಗೂ ಇನ್ನಿತರ ಅವಶೇಷಗಳು ಸಾಗಿಸಲಾಗುತ್ತಿತ್ತು. ಅಪಘಾತದಿಂದ ಲಾರಿ ಪಲ್ಟಿಯಾಗಿ ರಸ್ತೆ ತುಂಬ ಅವಶೇಷಗಳು ಚಲ್ಲಾಪಿಲ್ಲಿಯಾಗಿ ಬಿದ್ದಿದ್ದವು. ಹಾಲಿನ ಟೆಂಪೋ ಕ್ಯಾಬಿನ್ ಮತ್ತು ಲಗೇಜ್ ಕ್ಯಾರಿಯರ್ ಪ್ರತ್ಯೇಕಗೊಂಡು ನುಜ್ಜುಗುಜ್ಜಾಗಿದೆ.

ವಾಹನಗಳು ಡಿಕ್ಕಿಯಾದ ರಭಸಕ್ಕೆ ಬಹುದೂರವರೆಗೂ ಕೇಳಿದ್ದು, ಅಕ್ಕಪಕ್ಕದ ಹಳ್ಳಿ ಜನ ಬೆಚ್ಚಿ ಬಿದ್ದಿದ್ದಾರೆ. ಘಟನಾ ಸ್ಥಳದಲ್ಲಿ ಸಾಕಷ್ಟು ಜನರು ಜಮಾಯಿಸಿದ್ದರು.

ತುಂಡಾದ ದೇಹ: ಹಾಲಿನ ವಾಹನದ ಚಾಲಕನ ದೇಹ ಗುರುತು ಸಿಗದ ರೀತಿಯಲ್ಲಿ ತುಂಡುಗಳಾಗಿ ಬೇರ್ಪಟ್ಟಿದೆ. ಅರೆಪ್ರಜ್‌ಷೆಯಲ್ಲಿದ್ದ ಕ್ಲಿನರ್, ಮತ್ತೊಂದು ಲಾರಿಯಲ್ಲಿದ್ದ ಚಾಲಕ ಸೇರಿ ಮೂವರಿಗೂ ಸಣ್ಣಪುಟ್ಟ ಗಾಯಗಳಾಗಿದ್ದು, ಗಸ್ತಿನಲ್ಲಿದ್ದ ಹೈವೇ ಪೆಟ್ರೋಲ್ ಪೊಲೀಸ್ ಸಿಬ್ಬಂದಿ ಮತ್ತು ಸುಂದರಪಾಳ್ಯದ ಆಟೋ ಚಾಲಕ ಆರಿಫ್, ಸಾರ್ವಜನಿಕರು ಆಟೋದಲ್ಲಿ ಆಸ್ಪತ್ರೆಗೆ ಸಾಗಿಸಿದರು.

ಚರ್ಚೆಗೆ ಗ್ರಾಸವಾದ ಪ್ರಾಣಿಗಳ ಭಾಗಗಳು?: ರಸ್ತೆಗೆ ಬಿದ್ದ ಪ್ರಾಣಿಗಳ ತಲೆ, ಕೊಂಬುಗಳನ್ನು ನೋಡಿ ಭಯಭೀತರಾದರು, ಕೊಂಬುಗಳು, ತಲೆಗಳು ಎಲ್ಲಿಂದ ಬಂತು ಎಲ್ಲಿಗೆ ಏಕೆ ಹೋಗುತ್ತಿದೆ ಎನ್ನುವ ಚರ್ಚೆ ಜೋರಾಗಿತ್ತು. ಬೆಂಗಳೂರಿನ ಟ್ಯಾನರಿ ರಸ್ತೆಯ ಡಿಜೆ ಹಳ್ಳಿ ಕಡೆಯಿಂದ ತಮಿಳುನಾಡಿನ ಪ್ಯಾರ್ನಂಬುಟ್‌ಗೆ ಹಲವು ವರ್ಷಗಳಿಂದ ಪ್ರಾಣಿಗಳ ಅವಶೇಷ ಸಾಗಿಸಲಾಗುತ್ತಿದೆ ಎನ್ನಲಾಗಿದ್ದು, ಮೂಳೆ, ಕೊಂಬು ಮತ್ತು ಇತರ ಅವಶೇಷ ಪುಡಿವಾಡಿ ಬೇರೆ ದೇಶಕ್ಕೆ ರಪ್ತು ವಾಡಲಾಗುತ್ತದೆ ಎಂದು ವಾಹಿತಿ ಲಭ್ಯವಾಗಿದೆ. ಈ ಪುಡಿಯು ಹಲವು ಔಷಧ ಸೇರಿ ಇತರೆ ವಸ್ತುಗಳನ್ನು ತಯಾರಿಸಲು ಉಪಯೋಗಿಸಲಾಗುತ್ತದೆ ಎಂದು ತಿಳಿದು ಬಂದಿದೆ. ಟನಾ ಸ್ಥಳಕ್ಕೆ ಸರ್ಕಲ್ ಇನ್‌ಸ್ಪೆಪೆಕ್ಟರ್ ರಂಗಾಸ್ವಾಮಯ್ಯ, ಸಬ್ ಇನ್‌ಸ್ಪೆಕ್ಟರ್ ಗುರುರಾಜ ಚಿಂತಾಕಲ ಭೇಟಿ ನೀಡಿ ಪರಿಶೀಲಿಸಿದರು.

ರಸ್ತೆಯಲ್ಲಿ ಬಿದ್ದಿದ್ದ ಪ್ರಾಣಿಗಳ ಅವಶೇಷ, ಹಾಲಿನ ಪ್ಯಾಕೆಟ್‌ಗಳು ಹಾಗೂ ವಾಹನಗಳನ್ನು ರಸ್ತೆಯಿಂದ ದೂರಕ್ಕೆ ಸರಿಸಿದ ಸಾರ್ವಜನಿಕರು ವಾಹನ ಸಂಚಾರಕ್ಕೆ ಅನುಕೂಲ ವಾಡಿಕೊಟ್ಟರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net