

ನವದೆಹಲಿ: ಭಾರತೀಯ ರೈಲ್ವೆ ತನ್ನ ರೈಲ್ವೆ ಪ್ರೊಟೆಕ್ಷನ್ ಫೋರ್ಸ್(ಆರ್ಪಿಎಫ್)ಗೆ ಮರುನಾಮಕರಣ ಮಾಡಿದ್ದು, ಇನ್ನು ಮುಂದೆ ಇದು ಇಂಡಿಯನ್ ರೈಲ್ವೆ ಪ್ರೊಟೆಕ್ಷನ್ ಫೋರ್ಸ್ ಸರ್ವೀಸ್ ಎಂದು ಗುರುತಿಸಲ್ಪಡಲಿದೆ.
ರೈಲ್ವೆ ಸಚಿವಾಲಯವು ಆರ್ಪಿಎಫ್ಗೆ ಆರ್ಗನೈಸ್ಡ್ ಗ್ರೂಪ್ ಎ ಸ್ಟೇಟಸ್(ಒಜಿಎಎಸ್) ಎಂಬ ಮಾನ್ಯತೆ ನೀಡಿದ ಬಳಿಕ ಈ ಮರುನಾಮಕರಣ ಮಾಡಲಾಗಿದೆ. ಇದಕ್ಕೆ ಸಂಬಂಧಿಸಿದ ಅಧಿಕೃತ ಸೂಚನೆಯನ್ನು ಸಚಿವಾಲಯ ಸೋಮವಾರ ಪ್ರಕಟಿಸಿದೆ.
ಕೋರ್ಟ್ ಆದೇಶದ ಮೇರೆಗೆ ಕೇಂದ್ರ ಸಚಿವ ಸಂಪುಟ ಆರ್ಪಿಎಫ್ಗೆ ಒಜಿಎಎಸ್ ಸ್ಥಾನಮಾನ ನೀಡುವ ತೀರ್ಮಾನವನ್ನು ಕಳೆದ ಜುಲೈನಲ್ಲಿ ತೆಗೆದುಕೊಂಡಿತ್ತು. ಈ ಸ್ಥಾನಮಾನ ಸಿಕ್ಕಿರುವ ಕಾರಣ ಇತರೆ ಸರ್ಕಾರಿ ಅಧಿಕಾರಿಗಳಿಗೆ ಸಿಗುವ ಹಣಕಾಸಿನ ಸೌಲಭ್ಯಗಳು ಇಲ್ಲಿರುವ ಅಧಿಕಾರಿಗಳಿಗೂ ಸಿಗಲಿದೆ.
ನಾನ್ ಫಂಕ್ಷನಲ್ ಅಪ್ಗ್ರೆಡೇಷನ್(ಎನ್ಎಫ್ಯು)ಗೆ ಸರ್ಕಾರ ಆದ್ಯತೆ ನೀಡಲಿದ್ದು, ಐಆರ್ಪಿಎಫ್ಎಸ್ ಸಿಬ್ಬಂದಿ ಕೂಡ ಇದರ ಸವಲತ್ತು ಪಡೆಯಲಿದ್ದಾರೆ. ಅಂದರೆ, ಐಎಎಸ್ ಅಧಿಕಾರಿಗಳ ಕೆಡರ್ಗೆ ಸಮನಾದ ಸವಲತ್ತುಗಳನ್ನು ಒಜಿಎಎಸ್ ನಾಮನಿರ್ದೇಶಿತ ಅಧಿಕಾರಿಗಳು ಪಡೆಯಲಿದ್ದಾರೆ.ಬಡ್ತಿ ಸಿಕ್ಕಿದರೂ ಸಿಗದೇ ಇದ್ದರೂ ಅವರು ಈ ಸವಲತ್ತು ಪಡೆಯಲಿದ್ದಾರೆ. ಎನ್ಎಫ್ಯು ಯೋಜನೆಯನ್ನು ಸರ್ಕಾರ 2008ರಲ್ಲಿ ಜಾರಿಗೊಳಿಸಿದೆ. (ಏಜೆನ್ಸೀಸ್)