Bihar Election | 143 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ ಆರ್​ಜೆಡಿ

untitled-design-1-68f60f4bb8500
Published on

ಬಿಹಾರ: ಬಿಹಾರದ ಮಹಾಘಟಬಂಧನ್‌ನಲ್ಲಿ ಸೀಟು ಹಂಚಿಕೆಯ ಬಿಕ್ಕಟ್ಟಿನ ನಡುವೆಯೂ, 2025 ರ ( Bihar Election) ಬಿಹಾರ ವಿಧಾನಸಭಾ ಚುನಾವಣೆಗೆ ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ) ತನ್ನ 143 ಅಭ್ಯರ್ಥಿಗಳ ಪಟ್ಟಿಯನ್ನು ಸೋಮವಾರ (ಅ.20) ಬಿಡುಗಡೆ ಮಾಡಿದೆ.

ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ ವೈಶಾಲಿ ಜಿಲ್ಲೆಯ ರಾಘೋಪುರ ವಿಧಾನಸಭಾ ಸ್ಥಾನದಿಂದ ಸ್ಪರ್ಧಿಸಲಿದ್ದಾರೆ ಎಂದು ಮಾಹಿತಿ ಹೊರಬಿದ್ದಿದ್ದು, ನವೆಂಬರ್ 6 ಮತ್ತು 11 ರಂದು ಚುನಾವಣೆ ನಡೆಯಲಿದೆ. ಹಾಗೂ ನವೆಂಬರ್​ 14 ರಂದು ಫಲಿತಾಂಶ ಘೋಷಿಸಲಾಗುತ್ತದೆ ಎಂದು ತಿಳಿಸಲಾಗಿದೆ.

ಮಹಾಘಟಬಂಧನದೊಳಗೆ ಸೀಟು ಹಂಚಿಕೆಯ ವಿವಾದಗಳಿಂದಾಗಿ, ಆರ್‌ಜೆಡಿ ಪಕ್ಷವು ಇಲ್ಲಿಯವರೆಗೂ ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿರಲಿಲ್ಲ. ಈ ಅಧೀಕೃತ ಪಟ್ಟಿ ಬಿಡುಗಡೆ ಮಾಡುವ ಮೊದಲೇ ಪಕ್ಷವು ತನ್ನ ಎಲ್ಲಾ ಅಭ್ಯರ್ಥಿಗಳಿಗೆ ಚಿನ್ಹೆಗಳನ್ನು ಹಂಚಿಕೆ ಮಾಡಿತ್ತು.

2020 ರ ವಿಧಾನಸಭಾ ಚುನಾವಣೆಗೆ ಹೋಲಿಸಿದರೆ, ಆರ್‌ಜೆಡಿ ಈ ಬಾರಿ ಒಂದು ಸ್ಥಾನ ಕಡಿಮೆ ಸ್ಪರ್ಧಿಸಲಿದೆ. ಈ ಹಿಂದೆ 2020 ರಲ್ಲಿ 144 ಸ್ಥಾನಗಳು ಮತ್ತು 2025 ರಲ್ಲಿ 143 ಸ್ಥಾನಗಳು ಸ್ಪರ್ಧಿಸುತ್ತಿವೆ. ಪ್ರಮುಖ ಅಭ್ಯರ್ಥಿಗಳಲ್ಲಿ ರಾಘೋಪುರದಿಂದ ತೇಜಸ್ವಿ ಯಾದವ್, ಮಾಧೇಪುರದಿಂದ ಚಂದ್ರಶೇಖರ್, ಮೋಕಾಮಾದಿಂದ ವೀಣಾ ದೇವಿ ಮತ್ತು ಝಾಜಾದಿಂದ ಉದಯ್ ನಾರಾಯಣ್ ಚೌಧರಿ ಸ್ಪರ್ಧಿಸಲಿದ್ದಾರೆ.

ಆದಾಗ್ಯೂ, ಬಿಹಾರ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ಸೋಮವಾರ 6 ಅಭ್ಯರ್ಥಿಗಳ ಮತ್ತೊಂದು ಪಟ್ಟಿಯನ್ನು ಬಿಡುಗಡೆ ಮಾಡಿತ್ತು. ಇದು ಪಕ್ಷ ಘೋಷಿಸಿದ ಒಟ್ಟು ಅಭ್ಯರ್ಥಿಗಳ ಸಂಖ್ಯೆ 60 ಕ್ಕೆ ತಲುಪಿದೆ ಎಂದು ತಿಳಿದುಬಂದಿದೆ.

ಆರ್‌ಜೆಡಿ ಮತ್ತು ಕಾಂಗ್ರೆಸ್ ನಡುವೆ ಸೀಟು ಹಂಚಿಕೆಯ ವಿಚಾರದಲ್ಲಿ ಒಂದು ಒಪ್ಪಂದಕ್ಕೆ ಬರದ ಹಿನ್ನಲೆ, ಮಹಾಘಟಬಂಧನ್‌ನಲ್ಲಿ ಮಧ್ಯರಾತ್ರಿಯ ನಂತರ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ.

6 ಅಭ್ಯರ್ಥಿಗಳ ಪಟ್ಟಿಯ ಪ್ರಕಾರ, ವಾಲ್ಮೀಕಿ ನಗರದಿಂದ ಸುರೇಂದ್ರ ಪ್ರಸಾದ್ ಕುಶ್ವಾಹ, ಅರಾರಿಯಾದಿಂದ ಅಬಿದುರ್ ರೆಹಮಾನ್, ಅಮೌರ್‌ನಿಂದ ಜಲೀಲ್ ಮಸ್ತಾನ್, ಬರಾರಿಯಿಂದ ತೌಕೀರ್ ಅಲಂ, ಕಹಲ್ಗಾಂವ್‌ನಿಂದ ಪ್ರವೀಣ್ ಸಿಂಗ್ ಕುಶ್ವಾಹ ಮತ್ತು ಸಿಕಂದ್ರದಿಂದ ವಿನೋದ್ ಚೌಧರಿ ಅವರನ್ನು ಕಾಂಗ್ರೆಸ್ ಕಣಕ್ಕಿಳಿಸಿದೆ.

ಗುರುವಾರ ಕಾಂಗ್ರೆಸ್ ಪಕ್ಷವು ತನ್ನ 48 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿತ್ತು. ಇದರಲ್ಲಿ ಕುಟುಂಬ ಕ್ಷೇತ್ರದಿಂದ ರಾಜ್ಯ ಘಟಕದ ಮುಖ್ಯಸ್ಥ ರಾಜೇಶ್ ರಾಮ್ ಮತ್ತು ಕಡ್ವಾ ಕ್ಷೇತ್ರದಿಂದ ಸಿಎಲ್‌ಪಿ ನಾಯಕ ಶಕೀಲ್ ಅಹ್ಮದ್ ಖಾನ್ ಸೇರಿದ್ದಾರೆ.

ಆರ್‌ಜೆಡಿ ಮತ್ತು ಕಾಂಗ್ರೆಸ್ ಎರಡರಲ್ಲೂ ಅತೃಪ್ತ ಆಕಾಂಕ್ಷಿಗಳು ನಾಯಕತ್ವವು ಟಿಕೆಟ್‌ಗಳನ್ನು ಮಾರಾಟಕ್ಕೆ ಇಟ್ಟಿದೆ ಎಂದು ಆರೋಪಿಸಿದ್ದರು. ಇದು ಮಹಾಘಟಬಂಧನ್‌ನ ರಕ್ಷಾಕವಚದಲ್ಲಿನ ಬಿರುಕುಗಳು ಸ್ಪಷ್ಟವಾಗಿ ಕಂಡುಬಂದಿವೆ. ಇದು ಚುನಾವಣೆಗೆ ಮುಂಚಿತವಾಗಿ ಆಂತರಿಕ ಅಸಮಾಧಾನವನ್ನು ಎತ್ತಿ ತೋರಿಸಿದ್ದು, ಅಂತಿಮ ಹಂತದ ನಾಮಪತ್ರ ಸಲ್ಲಿಸಲು ಸೋಮವಾರ ಕೊನೆಯ ದಿನ ಎಂದು ಘೋಷಿಸಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net