ನದಿ ನೀರಿನ ಪ್ರಮಾಣ ಪರಿಶೀಲಿಸಿದ ಎಸಿ

IMG-20200717-WA0029
Published on

ಬೈಲಕುಪ್ಪೆ: ಕೊಡಗಿನ ಭಾಗಮಂಡಲ ಹಾಗೂ ಕೊಪ್ಪ ವ್ಯಾಪ್ತಿ ಸುರಿಯುತ್ತಿರುವ ಮಳೆಯಿಂದ ಕಾವೇರಿ ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಾಗಿದ್ದು, ಹುಣಸೂರು ಉಪವಿಭಾಗಾಧಿಕಾರಿ ವೀಣಾ ಶುಕ್ರವಾರ ಭೇಟಿ ನೀಡಿ ಕೊಪ್ಪ ಗ್ರಾಮದ ಕಾವೇರಿ ಸೇತುವೆ ಬಳಿ ಪರಿಶೀಲಿಸಿದರು.

ನಂತರ ಮಾತನಾಡಿದ ಅವರು, ಕಳೆದ ವರ್ಷದಂತೆ ಈ ಬಾರಿಯೂ ಅವಮಾನ ಇಲಾಖೆ ವರದಿಯ ಪ್ರಕಾರ ಪ್ರವಾಹ ಬರುವ ಸಾಧ್ಯತೆಗಳಿದೆ. ಆದ್ದರಿಂದ ಕಾವೇರಿ ನದಿ ದಡದ ಸಮೀಪದ ಮನೆಗಳ ನಿವಾಸಿಗಳು ಸುರಕ್ಷಿತ ಪ್ರದೇಶಗಳಿಗೆ ತೆರಳಬೇಕು. ಈ ಭಾಗದ ನದಿ ದಡದ ಅವರ್ತಿ, ದಿಂಡಗಾಡು, ಕಣಗಾಲು ಗ್ರಾಮದ ಜನರಿಗೆ ಮುನ್ನೆಚ್ಚರಿಕೆ ಕ್ರಮ ತಿಳಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಹಾರನಹಳ್ಳಿ ಉಪ ತಹಸೀಲ್ದಾರ್ ನಿಜಮುದ್ದಿನ, ಕೊಪ್ಪ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಎನ್.ಆರ್.ರವಿ, ಕಾರ್ಯದರ್ಶಿ ನಟೇಶ್, ಕಂದಾಯಾಧಿಕಾರಿ ಪ್ರದೀಪ್, ಗ್ರಾಮಲೆಕ್ಕಿಗ ನವೀನ್ ರಾವ್, ಗ್ರಾಮಸಹಾಯಕ ರಾಜು ಮತ್ತಿತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net