ಇನ್ಫಿ ಮೂರ್ತಿ ಅಳಿಯ, ಬ್ರಿಟನ್​ ಪ್ರಧಾನಿ ರಿಷಿ ಸುನಕ್​ ಪುತ್ರಿ ಅನುಷ್ಕಾರಿಂದ ಕೂಚಿಪುಡಿ ನೃತ್ಯ ಪ್ರದರ್ಶನ: ವಿಡಿಯೋ ವೈರಲ್​

Rishi
Published on

ಲಂಡನ್​: ಬ್ರಿಟನ್​ ಪ್ರಧಾನಿ ಹಾಗೂ ಇನ್ಫಿ ಮೂರ್ತಿ ಅಳಿಯ ರಿಷಿ ಸುನಕ್​ ಅವರ ಪುತ್ರಿ ಅನುಷ್ಕಾ ಸುನಕ್ ಅವರು ಶುಕ್ರವಾರ ಲಂಡನ್​ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಅನೇಕ ಮಕ್ಕಳೊಂದಿಗೆ ಭಾರತೀಯ ನೃತ್ಯ ಪ್ರಕಾರಗಳಲ್ಲಿ ಒಂದಾದ ಕೂಚಿಪುಡಿಯನ್ನು ಪ್ರದರ್ಶಿಸಿದರು. ಇದಕ್ಕೆ ಸಂಬಂಧಿಸಿದ ವಿಡಿಯೋ ತುಣುಕೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ಅಂತಾರಾಷ್ಟ್ರೀಯ ಕೂಚಿಪುಡಿ ಡಾನ್ಸ್​ ಫೆಸ್ಟಿವಲ್​-2022 ನಲ್ಲಿ 9 ವರ್ಷದ ಅನುಷ್ಕಾ ಸುನಕ್​ ತಮ್ಮ ಪ್ರದರ್ಶನದ ಮೂಲಕ ಗಮನ ಸೆಳೆದರು. ಯುಕೆಯಲ್ಲಿ ನಡೆಯುವ ಈ ನೃತ್ಯ ಪ್ರಕಾರದ ಅತಿದೊಡ್ಡ ಅಂತರ್-ಪೀಳಿಗೆಯ ಉತ್ಸವ ಇದಾಗಿದೆ.

ಲೈವ್ ಸಂಗೀತಗಾರರು, ಹಿರಿಯ ಸಮಕಾಲೀನ ನೃತ್ಯ ಕಲಾವಿದರು (65+ ವರ್ಷಗಳ ಪ್ರದರ್ಶನದ ಗುಂಪು), ಕಲಿಕೆಯಲ್ಲಿ ಅಸಮರ್ಥತೆ ಹೊಂದಿರುವ ಗಾಲಿಕುರ್ಚಿ ನೃತ್ಯಗಾರರು, ಪೋಲೆಂಡ್‌ನ ನಟರಂಗ್ ಗ್ರೂಪ್‌ನ ಅಂತಾರಾಷ್ಟ್ರೀಯ ಬರ್ಸರಿ ವಿದ್ಯಾರ್ಥಿಗಳು ಸೇರಿದಂತೆ 4 ರಿಂದ 85 ವರ್ಷ ವಯಸ್ಸಿನ ಸುಮಾರು 100 ಕಲಾವಿದರು ಕಾರ್ಯಕ್ರಮದ ಭಾಗವಾಗಿದ್ದರು. .

ಅನುಷ್ಕಾ ತಾಯಿ ಹಾಗೂ ಇನ್ಫೋಸಿಸ್​ ಸಹ ಸಂಸ್ಥಾಪಕ ನಾರಾಯಣಮೂರ್ತಿ ಅವರು ಮಗಳು ಅಕ್ಷತಾ ಮೂರ್ತಿ ಅವರು ರಿಷಿ ಸುನಕ್​ ಪಾಲಕರೊಂದಿಗೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ರಿಷಿ ಸುನಕ್ ಯುನೈಟೆಡ್ ಕಿಂಗ್‌ಡಮ್‌ನ 57 ನೇ ಪ್ರಧಾನ ಮಂತ್ರಿ ಮತ್ತು ಈ ಹುದ್ದೆಯನ್ನು ಅಲಂಕರಿಸಿದ ಮೊದಲ ಭಾರತೀಯ ಮೂಲದ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. (ಏಜೆನ್ಸೀಸ್​)

(ವಿಡಿಯೋ ಕೃಪೆ: ಎನ್​ಡಿಟಿವಿ)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net