ಯೂಟ್ಯೂಬ್​ ವಿಡಿಯೋ ನೋಡಿ ಬಾಲಕನ ಎಡವಟ್ಟು: ಮರ್ಮಾಂಗದಲ್ಲಿ ಸಿಲುಕಿದ್ದ ರಿಂಗ್​ ತೆಗೆಯಲು ಹರಸಾಹಸ

Ring
Published on

ಕೊಯಿಕ್ಕೋಡ್​: ಸರಿಯಾದ ಸಮಯಕ್ಕೆ ಅಗ್ನಿಶಾಮಕ ಸಿಬ್ಬಂದಿ ಆಗಮಿಸಿ 15 ವರ್ಷದ ಬಾಲಕನ ಮರ್ಮಾಂಗದಲ್ಲಿ ಸಿಲುಕಿಕೊಂಡಿದ್ದ ಸ್ಟೀಲ್​ ರಿಂಗ್​ ಅನ್ನು ಹೊರ ತೆಗೆಯುವ ಮೂಲಕ ಆತನ ಪ್ರಾಣ ಕಾಪಾಡಿರುವ ಘಟನೆ ಕೇರಳದ ಕೊಯಿಕ್ಕೋಡ್​ನಲ್ಲಿ ನಡೆದಿದೆ.

ಕೇರಳದ ಫೆರೊಕೆ ಮೂಲದ ಬಾಲಕ ಭಾನುವಾರ ಬೆಳಗ್ಗೆ ಕೊಯಿಕ್ಕೋಡ್​ ಮೆಡಿಕಲ್​ ಕಾಲೇಜು ಹಾಸ್ಪಿಟಲ್​ಗೆ ದಾಖಲಾಗಿದ್ದ. ತಕ್ಷಣ ವೈದ್ಯರು ವೆಲ್ಲಿಮಡುಕುನ್ನುವಿನಲ್ಲಿರುವ ಅಗ್ನಿಶಾಮಕ ಠಾಣೆಗೆ ಕರೆ ಮಾಡಿ ಮಾಹಿತಿ ನೀಡಿದರು. ತಕ್ಷಣ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿ, ವೈದ್ಯರ ಸಹಾಯದಿಂದ ವಿಶೇಷವಾಗಿ ಹೊಂದಿಕೊಳ್ಳುವ ಮತ್ತು ಮೃಧು ಗ್ರೈಂಡರ್ ಬಳಸಿ ಸ್ಟೀಲ್​ ರಿಂಗ್​ ಅನ್ನು ಕತ್ತರಿಸುವ ಮೂಲಕ ಬಾಲಕನ ಪ್ರಾಣ ಉಳಿಸಿದ್ದಾರೆ.

ಶನಿವಾರ ಯೂಟ್ಯೂಬ್​ ವಿಡಿಯೋ ನೋಡುತ್ತಾ ಮರ್ಮಾಂಗದಲ್ಲಿ ರಿಂಗ್​ ಸಿಲುಕಿಸಿದ್ದಾಗಿ ಬಾಲಕ ಹೇಳಿದ್ದಾನೆ. ರಿಂಗ್​ ತೆಗೆಯಲು ಕುಟುಂಬಸ್ಥರು ಸಾಕಷ್ಟು ಪ್ರಯತ್ನ ಮಾಡಿದ್ದಾರೆ. ಆದರೆ, ಸಾಧ್ಯವಾಗದಿದ್ದಾಗ ವೈದ್ಯರನ್ನು ಸಂಪರ್ಕಿಸಿದ್ದಾರೆ. ಕೊನೆಗೆ ವೈದ್ಯರು ಮತ್ತು ಅಗ್ನಿಶಾಮಕ ಸಿಬ್ಬಂದಿಯ ಸಹಾಯದಿಂದ ರಿಂಗ್​ ಅನ್ನು ಯಶಸ್ವಿಯಾಗಿ ಹೊರ ತೆಗೆಯಲಾಗಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net