ಮದುವೆಯಾಗದೆ ತಾಯಿಯಾದ ಜನಪ್ರಿಯ ಪಾಪ್ ಗಾಯಕಿ ರಿಹನ್ನಾ

rihanna (1)
Published on

ಅಮೆರಿಕ: ಪಾಪ್ ಗಾಯಕಿ ರಿಹನ್ನಾ ಮನೆಯಲ್ಲಿ ಮತ್ತೊಮ್ಮೆ ಸಂಭ್ರಮ ಮನೆ ಮಾಡಿದೆ. ಹೌದು, ರಿಹನ್ನಾ ಎರಡನೇ ಬಾರಿಗೆ ತಾಯಿಯಾಗಿದ್ದು, ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಟಿಎಂಝಡ್ ವರದಿಯ ಪ್ರಕಾರ, 35 ವರ್ಷದ ಗಾಯಕಿ ರಿಹನ್ನಾ ಆಗಸ್ಟ್ 3 ರಂದು ಮಗುವಿಗೆ ಜನ್ಮ ನೀಡಿದ್ದು, ಅದು ಈಗ ರಿವೀಲ್ ಆಗಿದೆ.

ಮದುವೆಯಾಗದೆ ತಾಯಿಯಾದ ರಿಹನ್ನಾ

ಮೇ 2022 ರಲ್ಲಿ, ರಿಹನ್ನಾ ಮೊದಲ ಮಗುವಿಗೆ (ಮಗ) ಜನ್ಮ ನೀಡಿದರು. ಈಗ ಎರಡನೇ ಬಾರಿಗೆ ತಾಯಿಯಾಗಿದ್ದಾರೆ. ಮದುವೆಯಾಗದೆ ಗೆಳೆಯ A$AP ರಾಕಿಯ ಮಗುವಿನ ತಾಯಿಯಾಗಿದ್ದಾರೆ, ಆದರೆ ತಾಯಿಯಾಗುವ ಬಗ್ಗೆ ರಿಹನ್ನಾ ಅಥವಾ ಆಕೆಯ ಗೆಳೆಯ ಯಾವುದೇ ಮಾಹಿತಿಯನ್ನು ಹಂಚಿಕೊಂಡಿರಲಿಲ್ಲ. ಇಬ್ಬರೂ ಅನೇಕ ವರ್ಷಗಳಿಂದ ಪರಸ್ಪರ ಡೇಟಿಂಗ್ ಮಾಡುತ್ತಿದ್ದಾರೆ. ಡೇಟಿಂಗ್ ಮಾಡುವ ಮೊದಲು, ಇಬ್ಬರೂ ಮೂರು ವರ್ಷಗಳ ಕಾಲ ಸ್ನೇಹಿತರಾಗಿದ್ದರು.

ದಂಪತಿಗಳು ತಮ್ಮ ಎರಡನೇ ಮಗನಿಗೆ 'ಆರ್' ಎಂದು ಹೆಸರಿಸಿದ್ದಾರೆ. ಆದರೂ ಪೂರ್ಣ ಹೆಸರು ಬಹಿರಂಗವಾಗಿಲ್ಲ. ಮೊದಲ ಮಗನಿಗೆ RZA ಎಂದು ಹೆಸರಿಸಲಾಗಿದೆ.

ರಿಹನ್ನಾ ಯಾರು?

ರಿಹನ್ನಾ ಬಾರ್ಬಡೋಸ್ ನಿವಾಸಿ ಮತ್ತು ಕೆರಿಬಿಯನ್ ಪಾಪ್ ಗಾಯಕಿ. ರಿಹನ್ನಾ ಅವರ ಪೂರ್ಣ ಹೆಸರು ರಾಬಿನ್ ರಿಹನ್ನಾ ಫೆಂಟಿ . ರಿಹನ್ನಾ ಸಾಮಾಜಿಕ ಮಾಧ್ಯಮದಲ್ಲಿ ತುಂಬಾ ಸಕ್ರಿಯರಾಗಿದ್ದಾರೆ. ತನ್ನ ಮೊದಲ ಆಲ್ಬಂಗಳಾದ ಮ್ಯೂಸಿಕ್ ಆಫ್ ದಿ ಸನ್ ಮತ್ತು ಎ ಗರ್ಲ್ ಲೈಕ್ ಮಿ ಮೂಲಕ 2005 ರಲ್ಲಿ ರೆಕಾರ್ಡ್ ಮಾಡಿದರು. ರಿಹನ್ನಾ 9 ಗ್ರ್ಯಾಮಿ ಪ್ರಶಸ್ತಿ, 13 ಅಮೇರಿಕನ್ ಸಂಗೀತ ಪ್ರಶಸ್ತಿ, 12 ಬಿಲ್ಬೋರ್ಡ್ ಸಂಗೀತ ಪ್ರಶಸ್ತಿ ಪಡೆದಿದ್ದು, 6 ವಿಶ್ವ ದಾಖಲೆಗಳನ್ನು ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net