BBKS11: ವೀಕ್ಷಕರು ನಿರೀಕ್ಷಿಸಿದ್ದು ಅದೇ, ಬಿಗ್​ಬಾಸ್​ ಕೊಟ್ಟಿದ್ದು ಅದೇ! 'ಕಿಚ್ಚಿ'ನ ಆಟ ಈಗ ಶುರು

guessed celebrities
Published on

ಬೆಂಗಳೂರು: ಕಳೆದ ಕೆಲವು ತಿಂಗಳಿನಿಂದಲೂ ಅತೀ ದೊಡ್ಡ ರಿಯಾಲಿಟಿ ಶೋ ಎಂದೇ ಖ್ಯಾತಿ ಗಳಿಸಿರುವ ಕನ್ನಡದ ಬಿಗ್​ ಬಾಸ್​ ಸೀಸನ್​ 11ರ (BBKS11) ಗ್ರ್ಯಾಂಡ್​ ಓಪನಿಂಗ್​ಗೆ ವೀಕ್ಷಕರು ತೀವ್ರ ಕುತೂಹಲ ವ್ಯಕ್ತಪಡಿಸಿದ್ದರು. ಬಿಗ್ ಬಾಸ್​ 11ರ ಪ್ರಾರಂಭದ ಬಗ್ಗೆ ಒಂದಷ್ಟು ವಿಷಯಗಳು ಹೊರಬೀಳುತ್ತಿದ್ದಂತೆ ಇವರು ಬಿಗ್ ಮನೆ ಪ್ರವೇಶಿಸುತ್ತಾರಾ? ವೈರಲ್ ಆದ ಈ ವ್ಯಕ್ತಿಗಳು ಎಂಟ್ರಿ ಕೊಡಬಹುದಾ? ಎಂಬ ಹತ್ತು ಹಲವು ಕುತೂಹಲಕಾರಿ ಪ್ರಶ್ನೆಗಳು ಜಾಲತಾಣವನ್ನು ಸುತ್ತುವರೆದಿತ್ತು. ಒಂದೆಡೆ ಸ್ಪರ್ಧಿಗಳು (Contestants) ಯಾರಿರಬಹುದು ಎಂಬ ಲೆಕ್ಕಾಚಾರಗಳ ಮಧ್ಯೆ ಸುದೀಪ್​ ಈ ಬಾರಿಯ ಸೀಸನ್​ ನಡೆಸಿಕೊಡುವುದಿಲ್ಲ ಅನ್ನೋ ವಿಚಾರ ವೀಕ್ಷಕರಲ್ಲಿ ಭಾರೀ ಬೇಸರ ಮೂಡಿಸಿತ್ತು. ಆದ್ರೆ, ಅಂತಿಮವಾಗಿ ಈ ಬಾರಿಯೂ ಕಾರ್ಯಕ್ರಮದ ಮುಂದಾಳತ್ವ ಕಿಚ್ಚ ಸುದೀಪ್​ ಅವರೇ ವಹಿಸಿಕೊಂಡಿದ್ದು ನೋಡುಗರಲ್ಲಿ ಸಂತಸ ತಂದಿದೆ.

17 ಘಟಾನುಘಟಿ ಸ್ಪರ್ಧಿಗಳು

ನಿನ್ನೆ ನಡೆದ ಅದ್ಧೂರಿ ಬಿಗ್ ಬಾಸ್​ ಸೀಸನ್​ 11ರ ಗ್ರ್ಯಾಂಡ್​ ಓಪನಿಂಗ್​ ಕಾರ್ಯಕ್ರಮಕ್ಕೆ ಚಾಲನೆ ಕೊಟ್ಟ ಸುದೀಪ್​, 17 ಘಟಾನುಘಟಿ ಸ್ಪರ್ಧಿಗಳನ್ನು ಬಿಗ್ ಮನೆಗೆ ಸ್ವಾಗತಿಸಿದರು. ಸೀಸನ್​ 11ರ (BBKS11) ಮನೆಯೊಳಗೆ ಅದ್ಧೂರಿಯಾಗಿ ಎಂಟ್ರಿಕೊಡುವ ಬಹುನಿರೀಕ್ಷಿತ ಸ್ಪರ್ಧಿಗಳು ಇವರೇ ಇರಬಹುದಾ? ಎಂದು ತೀವ್ರ ಕಾತರ, ಕುತೂಹಲ ವ್ಯಕ್ತಪಡಿಸುತ್ತಿದ್ದ ವೀಕ್ಷಕರಿಗೆ ಸಿಕ್ಕಿದ್ದು ತಾವು ಬಯಸಿದ್ದೇ. ಈ ಹಿಂದೆ ಸಾಮಾಜಿಕ ಜಾಲತಾಣದಲ್ಲಿ ಬಿಗ್ ಬಾಸ್​ 11 ಆರಂಭಕ್ಕೂ ಒಂದು ತಿಂಗಳ ಹಿಂದೆಯೇ ಮನೆಯೊಳಗೆ ಹೋಗುವ 17 ಕಂಟೆಸ್ಟೆಂಟ್​ಗಳ ಸಂಭಾವ್ಯ ಪಟ್ಟಿ ಇಲ್ಲಿದೆ ನೋಡಿ ಎಂಬ ಸುದ್ದಿಗಳು ಹರಿದಾಡಲು ಪ್ರಾರಂಭಿಸಿತ್ತು. ಇಂದು ಬಿಗ್​ ಮನೆಯಲ್ಲಿರುವ ಬಹುತೇಕ ಮಂದಿ ಅಂದು ಈ ಪಟ್ಟಿಯಲ್ಲಿರುವವರೇ ಎಂಬುದೇ ಸದ್ಯ ಅಚ್ಚರಿ ಸಂಗತಿ.

ಈ ಹಿಂದೆಯೂ ಇದೇ ರೀತಿ

ಸಾಮಾನ್ಯವಾಗಿ ಈ ಹಿಂದಿನಿಂದಲೂ ಯಾರು ಮನೆಗೆ ಹೋಗಬಹುದು ಎಂಬ ಲೆಕ್ಕಾಚಾರಗಳು, ಸುದ್ದಿಗಳು ಬಿಗ್​ಬಾಸ್​ ಕಾರ್ಯಕ್ರಮ ಶುರುವಾಗುವ ಒಂದೆರೆಡು ತಿಂಗಳ ಹಿಂದಿನಿಂದಲೇ ಜಾಲತಾಣಗಳಲ್ಲಿ ಚರ್ಚೆಯಾಗುತ್ತವೆ. ಅಲ್ಲಿ ಹರಿದಾಡುವ ಫೋಟೋಗಳು, ಹೆಸರುಗಳು ಕೆಲವರ ಹುಬ್ಬೇರಿಸಿದರೆ, ಇನ್ನು ಕೆಲವರು ಇವರೆಲ್ಲ ಬಿಗ್​ ಮನೆಗೆ ಅರ್ಹ ಅಭ್ಯರ್ಥಿಗಳಲ್ಲ ಎಂದು ನೇರವಾಗಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದರು. ಆದ್ರೆ, ಅಂದು ಆ ಸೀಸನ್​ನ ಗ್ರ್ಯಾಂಡ್​ ಓಪನಿಂಗ್​ನಲ್ಲಿ ಸಂಭಾವ್ಯ ಪಟ್ಟಿಯಲ್ಲಿದ್ದವರ ಪೈಕಿ ಬೆರಳೆಣಿಕೆಯಷ್ಟು ಜನರು ಮಾತ್ರ ಎಂಟ್ರಿ ಕೊಡುತ್ತಿದ್ದರು. ಇದು ಅನೇಕರಿಗೆ ಭಾರೀ ನಿರಾಸೆ ತರುತ್ತಿತ್ತು. ಆದ್ರೆ, ಇದೇ ಮೊದಲ ಬಾರಿಗೆ ಊಹಿಸಿದ ಅಷ್ಟು ಸ್ಪರ್ಧಿಗಳ ಪೈಕಿ ಬಹುತೇಕರು ಸೀಸನ್​ 11ರ ಮನೆ ಪ್ರವೇಶಿಸಿದ್ದಾರೆ.

ವೀಕ್ಷಕರು ಬಯಸ್ಸಿದ್ದು ಅದೇ ಬಿಗ್​ಬಾಸ್​ ಕೊಟ್ಟಿದ್ದು ಅದೇ

ಜಾಲತಾಣಗಳಲ್ಲಿ ಬಿಗ್ ಬಾಸ್​ ಸೀಸನ್​ 11ರ ಪ್ರಾರಂಭಕ್ಕೂ ಮುನ್ನ ಹರಿದಾಡಿದ್ದ ಸ್ಪರ್ಧಿಗಳ ಪೈಕಿ ಭವ್ಯ ಗೌಡ, ಧನರಾಜ್​ ಆಚಾರ್​, ಲಾಯರ್ ಜಗದೀಶ್​, ಚೈತ್ರಾ ಕುಂದಾಪುರ, ಶಿಶಿರ್​, ಮಾನಸಾ, ಅನುಷಾ ರೈ, ಮೋಕ್ಷಿತಾ ಪೈ, ಗೌತಮಿ ಜಾಧವ್​, ತ್ರಿವಿಕ್ರಮ್​, ಐಶ್ವರ್ಯ ಶಿಂಧೋಗಿ, ಧರ್ಮ ಕೀರ್ತಿರಾಜ್​ ಇದೀಗ ಬಿಗ್ ಮನೆಯೊಳಗೆ ಅದ್ಧೂರಿಯಾಗಿ ಎಂಟ್ರಿ ಕೊಟ್ಟಿದ್ದಾರೆ. ಇವರ ಹೆಸರುಗಳು ಬಿಗ್​​ಬಾಸ್​ ಮನೆಗೆ ಹೋಗುವ ಸ್ಪರ್ಧಿಗಳ ಸಂಭಾವ್ಯ ಪಟ್ಟಿಯಲ್ಲಿ ಉಲ್ಲೇಖವಾಗಿತ್ತು ಎಂಬುದು ಗಮನಾರ್ಹ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net