ಭೂಲೋಕದ ಕುಬೇರರು!; ಕಳೆದ ಒಂದು ತಿಂಗಳಲ್ಲಿ 153 ಶತಕೋಟ್ಯಧಿಪತಿಗಳ ಉದಯ

Kubera
Published on
ಕರೊನಾ, ರಷ್ಯಾ-ಯೂಕ್ರೇನ್ ಯುದ್ಧದ ಹೊರತಾಗಿಯೂ ವಿಶ್ವದ ಶ್ರೀಮಂತರ ಸಂಪತ್ತಿನಲ್ಲಿ ಇಳಿಕೆ ಕಂಡಿಲ್ಲ. ವಿಶ್ವದಲ್ಲಿ ಕಳೆದ ಒಂದು ತಿಂಗಳಲ್ಲಿ 153 ಹೊಸ ಶತಕೋಟ್ಯಧಿಪತಿಗಳು ಉದಯಿಸಿದ್ದಾರೆ. ವಿಶ್ವದ ಶತಕೋಟ್ಯಧಿಪತಿಗಳ ಸಂಖ್ಯೆ 3381ಕ್ಕೆ ತಲುಪಿದೆ. ವಿಶ್ವದ ಶ್ರೀಮಂತರ ಪಟ್ಟಿ, ಅವರ ಸಂಪತ್ತಿನ ವಿವರ ಇಲ್ಲಿದೆ.
  • ಯೂಕ್ರೇನ್ ಯುದ್ಧ ಹಿನ್ನೆಲೆಯಲ್ಲಿ ಉಂಟಾಗಿರುವ ಆರ್ಥಿಕ ಸಂಕಷ್ಟದ ಕಾರಣ ರಷ್ಯಾ 13 ಶತಕೋಟ್ಯಧಿ ಪತಿಗಳನ್ನು ಕಳೆದುಕೊಂಡಿದೆ.
  • ಚೀನಾದಲ್ಲಿ 490 ಹೊಸ ಶತ ಕೋಟ್ಯಧಿಪತಿಗಳು ಉದಯಿಸಿದ್ದಾರೆ.
  • ಭಾರತದಲ್ಲಿ 38 ಶ್ರೀಮಂತರು ಈ ಪಟ್ಟಿಗೆ ಸೇರ್ಪಡೆಗೊಂಡಿದ್ದಾರೆ.
  • ಇದೇ ಮೊದಲ ಬಾರಿಗೆ ಫೇಸ್​ಬುಕ್ ಸ್ಥಾಪಕ ಜುಕರ್​ಬರ್ಗ್ ಶ್ರೀಮಂತರ ಪಟ್ಟಿಯಿಂದ ಹೊರಬಿದ್ದಿದ್ದಾರೆ.

ಯಾವ ದೇಶದಲ್ಲಿ ಎಷ್ಟು ಶ್ರೀಮಂತರು?: ಚೀನಾ - 1133, ಅಮೆರಿಕ - 716, ಭಾರತ - 215, ಜರ್ಮನಿ - 150, ರಷ್ಯಾ - 72

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net