

ಮುಂಬೈ: ನಟಿ ರಿಚಾ ಚಡ್ಡಾ ಮತ್ತು ಅವರ ಪತಿ ಅಲಿ ಫಜಲ್ ಜುಲೈ 16ರಂದು ಹೆಣ್ಣು ಮಗುವನ್ನು ಪಡೆದ ಸಂತೋಷವನ್ನು ಹಂಚಿಕೊಂಡಿದ್ದರು. ಮಗ ಜನಸಿದ 14 ದಿನಗಳ ನಂತರ ಹಿರಿಯ ನಟಿ ಶಬಾನಾ ಅಜ್ಮಿ ಸೇರಿದಂತೆ ಅನೇಕ ನಟಿಯರು ರಿಚಾ ಅವರ ಮುದ್ದಾದ ಮಗುವನ್ನು ನೋಡಿದ ಸಂತೋಷವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಹಂಚಿಕೊಂಡಿರುವ ಚಿತ್ರದಲ್ಲಿ ಶಬಾನಾ ಅಜ್ಮಿ ಅವರೊಂದಿಗೆ ನಟಿಯರಾದ ದಿಯಾ ಮಿರ್ಜಾ ಮತ್ತು ಊರ್ಮಿಳಾ ಮಾತೋಂಡ್ಕರ್ ಕೂಡ ಕಾಣಿಸಿಕೊಂಡಿದ್ದಾರೆ. ಎಲ್ಲರೂ ರಿಚಾ ಮಗಳ ಮೇಲೆ ಪ್ರೀತಿಯನ್ನು ತೋರುತ್ತಿರುವುದು ಫೋಟೋದಲ್ಲಿ ಕಾಣಬಹುದಾಗಿದೆ. ನಟಿ ರಿಚಾ ಚಡ್ಡಾ ಮಗಳನ್ನು ಮಡಿಲಲ್ಲಿ ಕೂರಿಸಿಕೊಂಡಿದ್ದಾರೆ. ಸುತ್ತಲು ನಿಂತಿರುವ ಅವರೆಲ್ಲರು ಕ್ಯಾಮೆರಾಗಳಿಗೆ ಪೋಸ್ ನೀಡಿದ್ದಾರೆ. ಆದರೆ ಪುಟ್ಟ ಕಂದಮ್ಮನ ಮುಖವನ್ನು ಎಮೋಜಿಯಿಂದ ಮರೆಮಾಡಿದ್ದಾರೆ. ಈ ಸಂತೋಷದ ಕ್ಷಣವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುವಾಗ ಶಬಾನಾ ಅಜ್ಮಿ, ಹೊಸ ತಾಯಿ ಮತ್ತು ಮಗುವಿನ ಖಲಾ/ಮಾಸಿಸ್‌ನೊಂದಿಗೆ ಎಂದು ಬರೆದು ಫೋಟೋವನ್ನು ಪೋಸ್ಟ್ ಮಾಡಿದ್ದಾರೆ.
ನಮ್ಮ ಜೀವನದ ಅತ್ಯುತ್ತಮ ದಿನಗಳಲ್ಲಿ ಒಂದು ಎಂದ ದಿಯಾ ಮಿರ್ಜಾ ಪೋಸ್ಟ್‌ಗೆ ಪ್ರತಿಕ್ರಿಯಿಸಿದ್ದಾರೆ. ಅಭಿನಂದನೆಗಳನ್ನು ತಿಳಿಸಿದ ಬಂಗಾಳಿ ನಟ ರಿತುಪರ್ಣ ಸೇನ್‌ಗುಪ್ತಾ ಮಗುವಿಗೆ ನನ್ನ ಪ್ರೀತಿ ಮತ್ತು ಆಶೀರ್ವಾದಗಳು ಎಂದ ಪ್ರತಿಕ್ರಿಯಸಿದ್ದಾರೆ.
ಜುಲೈ 16ರಂದು ಹೆಣ್ಣು ಮಗುವನ್ನು ಸ್ವಾಗತಿಸಿಗ ದಂಪತಿ, ಕಳೆದ ವಾರ ತಮ್ಮ ನವಜಾತ ಮಗಳ ಪುಟ್ಟ ಪಾದಗಳ ಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಆರೋಗ್ಯವಂತ ಹೆಣ್ಣು ಮಗುವಿನ ಆಗಮನದ ವಿಷಯವನ್ನು ತಿಳಿಸಲು ನಾವು ಸಂತೋಷ ಪಡುತ್ತಿದ್ದೇವೆ. ನಮ್ಮ ಕುಟುಂಬಗಳು ಅತೀವವಾಗಿ ಸಂತೋಷಗೊಂಡಿವೆ. ನಮ್ಮ ಹಿತೈಷಿಗಳ ಪ್ರೀತಿ ಮತ್ತು ಆಶೀರ್ವಾದಕ್ಕಾಗಿ ನಾವು ಧನ್ಯವಾದಗಳನ್ನು ಅರ್ಪಿಸುತ್ತೇವೆ! ಎಂದು ಹೇಳಿದ್ದರು. (ಏಜೆನ್ಸೀಸ್)