ಅಭಿವೃದ್ಧಿ ರಿವರ್ಸ್ ಗೇರ್ ಕಾಂಗ್ರೆಸ್ ಸಾಧನೆ; ಬಿಜೆಪಿ ಗೇಲಿ

BJP logo
Published on

ಬೆಂಗಳೂರು: ದೂರಗಾಮಿ ಲ ನೀಡುವ ಯೋಜನೆಗಳಿಗೆ ಅನುದಾನ ಕಡಿತಗೊಳಿಸಿ, ಅಭಿವೃದ್ಧಿ ರಿವರ್ಸ್ ಗೇರ್‌ಗೆ ಕೊಂಡೊಯ್ದಿರುವುದು ಕಾಂಗ್ರೆಸ್ ಸರ್ಕಾರದ ಶತ ದಿನದ ಸಾಧನೆ ಎಂದು ಪ್ರತಿಪಕ್ಷ ಬಿಜೆಪಿ ಗೇಲಿ ಮಾಡಿದೆ.

ಗ್ಯಾರಂಟಿ ಹೆಸರಿನಲ್ಲಿ ಅಭಿವೃದ್ಧಿ ಯೋಜನೆಗಳನ್ನು ಕುಂಠಿತಗೊಳಿಸಿ ರಾಜ್ಯ ಸರ್ಕಾರದ ನೂರು ದಿನ ಪೂರೈಸುತ್ತಿರುವುದಕ್ಕೆ ಸಂಭ್ರಮಿಸುತ್ತಿದೆ. ಅಲ್ಲದೆ, ಹೈಕಮಾಂಡ್ ತಿಜೋರಿ ತುಂಬಲು ರಾಜ್ಯದ ಖಜಾನೆ ಖಾಲಿ ಮಾಡಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ಸಂದೇಶದಲ್ಲಿ ಕಮಲಪಡೆ ಕುಟುಕಿದೆ.

ಬಿಜೆಪಿ ಮೂಲಗಳ ಪ್ರಕಾರ ಕಾಂಗ್ರೆಸ್ ಸರ್ಕಾರದ ನೂರು ದಿನಗಳ ವೈಲ್ಯದ ಕುರಿತು ಕಿರು ಹೊತ್ತಗೆ ಸಿದ್ಧವಾಗುತ್ತಿದ್ದು, ಸೆಪ್ಟೆಂಬರ್ ಒಂದರಂದು ಬಿಡುಗಡೆಗೆ ಚಿಂತನೆ ನಡೆಸಿದೆ. ವರ್ಗಾವಣೆ ದಂಧೆ, ಶಾಸಕರ ಅಸಮಾಧಾನ, ಅಧಿಕಾರಿಗಳ ಲಂಚಪತ್ರ, ಐದು ಗ್ಯಾರಂಟಿಗಳ ವಿಷಯದಲ್ಲಿ ನುಡಿದಂತೆ ನಡೆದಿಲ್ಲವೆಂದು ಕಿರುಹೊತ್ತಗೆಯಲ್ಲಿ ವಿವರಿಸಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net