ಡಿಕೆಶಿಯಿಂದ ಸಿದ್ದರಾಮಯ್ಯ ಅವರಿಗೆ ಅಭದ್ರತೆ ಕಾಡಿದೆ: ಸಚಿವ ಆರ್​.ಅಶೋಕ್​ ಟಾಂಗ್​

Ashok-siddu
Published on

ಬೆಂಗಳೂರು: ನಾವು ಒಂದೇ ಪಕ್ಷವನ್ನು ನೋಡಿರುವವರು, ಆದರೆ ಸಿದ್ದರಾಮಯ್ಯ ಅವರಿಗೆ ಎರಡು ಮೂರು ಪಕ್ಷಗಳೇ ಆಗಿವೆ ಎಂದು ಸಚಿವ ಆರ್​.ಅಶೋಕ್​ ತಿರುಗೇಟು ನೀಡಿದ್ದಾರೆ.

ಆರ್​​ಎಸ್​ಎಸ್​ ಕುರಿತು ಸಿದ್ದರಾಮಯ್ಯ ಅವರು ಸದಾ ಟೀಕಿಸುತ್ತಿರುತ್ತಾರೆ. ಆದರೆ ಅರ್​ಎಸ್​ಎಸ್​ ಯಾವತ್ತೂ ಸಿದ್ದರಾಮಯ್ಯ ಅವರ ಬಗ್ಗೆ ಮಾತನಾಡಿಲ್ಲ,ಆದರೆ ಅವರು ಯಾಕೆ ಮಾತನಾಡುತ್ತಾರೆ ಎಂದು ಗೊತ್ತಿಲ್ಲ ಎಂದು ಹೇಳಿದ್ದಾರೆ.

ನಮಗೆ ಆರ್​​ಎಸ್​ಎಸ್​ ತಾಯಿ ಸಮಾನ, ನಮಗೆಲ್ಲಾ ಒಂದೇ ಪಕ್ಷ.ಆದರೆ ಇವರಿಗೆ ಎರಡು ಮೂರು ಪಕ್ಷ ಆಗಿದೆ. ಅವರಿಗೆ ಯಾವುದೇ ನೈತಿಕತೆ ಇಲ್ಲ. ಮಾಡಲು ಕೆಲಸ ಇಲ್ಲದವರು ಏನೋ ಮಾಡಿದ್ರಂತೆ ಅನ್ನೋ ಹಾಗಿದೆ ಅವರ ವರ್ತನೆ ಎಂದು ಹೇಳಿದ್ದಾರೆ.

ಪ್ರತಿದಿನ ಡಿಕೆ ಶಿವಕುಮಾರ್ ಮಾಧ್ಯಮಗಳಲ್ಲಿ ಕಾಣಿಸಿಕೊಳ್ತಾ ಇದಾರೆ. ಹಾಗಾಗಿ ಇತ್ತ ತಾನು ಕಾಣೆಯಾಗುತ್ತಿದ್ದೇನೆ ಎಂಬ ಅಭದ್ರತೆ ಸಿದ್ದರಾಮಯ್ಯ ಅವರಿಗೆ ಕಾಡ್ತಾ ಇದೆ.ಅದಕ್ಕೆ ಹೀಗೆಲ್ಲಾ ಆಡ್ತಾ ಇದಾರೆ ಎಂದಿದ್ದಾರೆ.

ರಾಜ್ಯ ಸಭೆ ಚುನಾವಣೆಯಲ್ಲಿ ನಾವು ಯಾವುದೇ ಕಾರಣಕ್ಕೂ ಜೆಡಿಎಸ್ ಗೆ ಬೆಂಬಲ ನೀಡಲ್ಲ.ಮೂರನೇ ಅಭ್ಯರ್ಥಿ ಯನ್ನು ಗೆಲ್ಲಿಸಲು ಏನು ಬೇಕೋ ಅದು ಮಾಡುತ್ತೇವೆ ಎಂದರು. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net