ಬಿದರೂರಲ್ಲಿ ಒತ್ತುವರಿ ತೆರವು ಮಾಡಿ

06kgl01
Published on

ಕಾರ್ಗಲ್: ಭಾರಂಗಿ ಹೋಬಳಿಯ ಬ್ರಾಹ್ಮಣ ಇಳಕಳಲೆ ಕಂದಾಯ ಗ್ರಾಮದ ಅರಳಗೋಡು ಗ್ರಾಪಂ ವ್ಯಾಪ್ತಿಯಲ್ಲಿ ಪಟ್ಟಣದ ಇಬ್ಬರು ವ್ಯಕ್ತಿಗಳು ಅರಣ್ಯ ಮತ್ತು ಕಂದಾಯ ಭೂಮಿ ಒತ್ತುವರಿ ಮಾಡಿದ್ದು ಕೂಡಲೇ ಅವುಗಳನ್ನು ತೆರವ ಮಾಡುವಂತೆ ಆಗ್ರಹಿಸಿ ಬಿದರೂರು ಗ್ರಾಮಸ್ಥರು ಜಿಪಂ ಸದಸ್ಯ ರಾಜಶೇಖರ ಗಾಳಿಪುರ ಮತ್ತು ತಹಸೀಲ್ದಾರ್ ಚಂದ್ರಶೇಖರ ನಾಯ್್ಕೆ ಮನವಿ ಸಲ್ಲಿಸಿದರು.

ಮನವಿ ಸ್ವೀಕರಿಸಿ ಮಾತನಾಡಿದ ಜಿಪಂ ಸದಸ್ಯ ರಾಜಶೇಖರ್ ಗಾಳಿಪುರ, ಕೂಡಲೇ ಅಕ್ರಮ ಒತ್ತುವರಿ ತೆರವುಗೊಳಿಸಬೇಕು. ಪ್ರಕರಣಕ್ಕೆ ಸಂಬಂಧಿಸಿ ಇಲಿಯಾಸ್ ಮತ್ತು ಹನೀಫ್ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಗ್ರಾಮಸ್ಥ ಮೋಹನ್ ಸಿ.ನಾಯ್್ಕ ಮಾತನಾಡಿ, ಐದಾರು ಎಕರೆ ಜಮೀನನ್ನು ಜೆಸಿಬಿ ಮೂಲಕ ಆರೋಪಿಗಳು ಸಮತಟ್ಟುಗೊಳಿಸಿ ಸೊಪ್ಪಿನ ಬೆಟ್ಟದಲ್ಲಿದ್ದ ಮರ-ಗಿಡಗಳನ್ನು ಸಂಪೂರ್ಣ ನಾಶಪಡಿಸಿದ್ದಾರೆ. ಜಾನುವಾರು ಮತ್ತು ಕೃಷಿ ಕುಟುಂಬಗಳಿಗೆ ಪೂರಕವಾಗಿದ್ದ ಸೊಪ್ಪಿನ ಬೆಟ್ಟ ನಾಶವಾಗಿದೆ. ಅರಣ್ಯ ಇಲಾಖೆ ಈ ಪ್ರಕರಣದಲ್ಲಿ ನಿಷ್ಕ್ರಿಯವಾಗಿದೆ ಎಂದು ದೂರಿದರು.

ಅಶೋಕ್, ಶಾಂತರಾಜು, ಪಾರ್ಶ್ವನಾಥ ಜೈನ್, ಶಶಿಕುಮಾರ್, ವೇದಾವತಿ, ಸೀತಮ್ಮ, ಭಾರತಿ, ರವಿಕುಮಾರ್, ಸುರೇಂದ್ರ, ಮಾದೇವಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net