

ಬೆಂಗಳೂರು: ಮನೆ, ಸೈಟ್, ಜಮೀನು, ಕಟ್ಟಡ ಸೇರಿದಂತೆ ಸ್ಥಿರಾಸ್ತಿ ಖರೀದಿದಾರರಿಗೆ ಕಂದಾಯ ಇಲಾಖೆ ಮತ್ತೊಮ್ಮೆ ಸಿಹಿ ಸುದ್ದಿ ನೀಡಿದೆ. ಸ್ಥಿರಾಸ್ತಿ ಮಾರ್ಗಸೂಚಿ ದರದಲ್ಲಿ ಶೇ.10 ರಿಯಾಯಿತಿಯನ್ನು ಮೂರು ತಿಂಗಳು ವಿಸ್ತರಣೆ ಮಾಡಿ ಕಂದಾಯ ಇಲಾಖೆ ಅಧಿಸೂಚನೆ ಹೊರಡಿಸಿದೆ.
ಏಪ್ರಿಲ್ 25 ರಿಂದ ಜುಲೈ 24ರ ವರೆಗೆ ಶೇ.10 ವಿನಾಯಿತಿ ನೀಡಲಾಗಿದೆ. ಈ ಹಿಂದೆ ಸಹ ಜನವರಿ 1 ರಿಂದ ಮಾರ್ಚ್ 31ರ ವರೆಗೆ ರಿಯಾಯಿತಿ ನೀಡಲಾಗಿತ್ತು. ಇದರಿಂದ ನೋಂದಣಿ ಮತ್ತು ಮುದ್ರಾಂಕ ಇಲಾಖೆಯಲ್ಲಿ ಹೆಚ್ಚುವರಿ 1 ಸಾವಿರ ರೂ. ಕೋಟಿ ರೂ.ರಾಜಸ್ವ ಸಂಗ್ರಹವಾಗಿತ್ತು. ಇದರ ಲಾಭ ಪಡೆದ ಸಾರ್ವಜನಿಕರು ಸಹ ಮತ್ತೊಮ್ಮೆ ವಿಸ್ತರಿಸಬೇಕೆಂದು ಒತ್ತಾಯ ಕೇಳಿ ಬಂದಿದ್ದವು. ಕೊನೆಗೂ ಕಂದಾಯ ಇಲಾಖೆ ಮಾರ್ಗಸೂಚಿ ದರವನ್ನು ರಿಯಾಯಿತಿ ನೀಡಿ ಅಧಿಕೃತವಾಗಿ ೋಷಣೆ ಮಾಡಿದೆ. ಇದರಿಂದ ಕರೊನಾ ಸಂಕಷ್ಟದಲ್ಲಿ ಸಿಲುಕಿದ್ದ ರಿಯಲ್ ಎಸ್ಟೇಟ್ ಉದ್ಯಮಕ್ಕೂ ಉತ್ತೇಜನ ಸಿಕ್ಕಂತೆ ಆಗಿದೆ ಎಂದು ಅಧಿಕಾರಿಗಳ ಅಭಿಪ್ರಾಯವಾಗಿದೆ.
2021-22ನೇ ಸಾಲಿನಲ್ಲಿ 11,150 ಕೋಟಿ ರೂ. ಆದಾಯ ಸಂಗ್ರಹದ ಟಾರ್ಗೆಟ್ ನೀಡಲಾಗಿತ್ತು. ವಿನಾಯಿತಿ ಮತ್ತು ಕಚೇರಿ ಸಮಯ ವಿಸ್ತರಣೆ ಇಂದಾಗಿ ಟಾರ್ಗೆಟ್ ಮೀರಿ 12,229 ಕೋಟಿ ರೂ. ತೆರಿಗೆ ಸಂಗ್ರಹಿಸುವಲ್ಲಿ ಸಬ್ ರಿಜಿಸ್ಟ್ರಾರ್ ಕಚೇರಿ ಅಧಿಕಾರಿಗಳು ಯಶಸ್ವಿಯಾಗಿದ್ದರು.
ಈಗಾಗಲೇ ಕಚೇರಿ ಸಮಯವನ್ನು ಬೆಳಗ್ಗೆ 10.30ರಿಂದ ರಾತ್ರಿ 7 ಗಂಟೆವರೆಗೆ ತೆರೆಯುವಂತೆ ಸೂಚನೆ ನೀಡಿದ್ದಾರೆ. ರಾತ್ರಿ ಆಗುತ್ತಿದಂತೆ ಸಾರ್ವಜನಿಕರು ಸಹ ಸಬ್ ರಿಜಿಸ್ಟ್ರಾರ್ ಕಚೇರಿಗೆ ಬರಲು ಆಸಕ್ತಿ ತೋರಿಸುತ್ತಿಲ್ಲ ಎಂಬುದು ನೋಂದಣಿ ಮತ್ತು ಮುದ್ರಾಂಕ ಇಲಾಖೆ ಅಭಿಪ್ರಾಯವಾಗಿದೆ.