ರಾಜ್ಯಸರ್ಕಾರಿ ನಿವೃತ್ತ ನೌಕರರಿಂದ ಮನವಿ

CTD PINCHANI------
Published on

ಚಿತ್ರದುರ್ಗ: ಕೇಂದ್ರದ ಹೊಸ ಪಿಂಚಣಿ ಯೋಜನೆ ಜಾರಿಯಿಂದಾಗಿ ಹಳೇ ಪಿಂಚಣಿ ಯೋಜನೆಯಡಿ ಲಭ್ಯವಾಗುತ್ತಿದ್ದ ಆರ್ಥಿಕ ಸೌಲಭ್ಯಗಳಿಂದ ವಂಚಿತರಾಗಿರುವುದನ್ನು ಖಂಡಿಸಿ ರಾಜ್ಯಸರ್ಕಾರಿ ನಿವೃತ್ತ ನೌಕರರ ಸಂಘ ಜಿಲ್ಲಾ ಶಾಖೆಯಿಂದ ಜಿಲ್ಲಾಧಿಕಾರಿ ಕಚೇರಿ ಬಳಿ ಮಂಗಳವಾರ ಪ್ರತಿಭಟಿಸಿ ಎಡಿಸಿ ಬಿ.ಟಿ.ಕುಮಾರಸ್ವಾಮಿ ಮೂಲಕ ಪ್ರಧಾನ ಮಂತ್ರಿಗೆ ಮನವಿ ಸಲ್ಲಿಸಲಾಯಿತು.

ಸರ್ಕಾರಿ ನೌಕರರ ಹಾಗೂ ಪಿಂಚಣಿದಾರರ ವೇತನ ಪರಿಷ್ಕರಣೆಗಾಗಿ ಕೇಂದ್ರ 8ನೇ ವೇತನ ಆಯೋಗ ರಚಿಸಿದ್ದು,ಆರ್ಥಿಕ ಸಚಿವೆ ನಿರ್ಮಲಾ ಸೀತಾರಾಮನ್ ಅವರು 2026 ಏಪ್ರಿಲ್ 1ರ ಮೊದಲು ನಿವೃತ್ತರಾದ ನೌಕರರಿಗೆ ಪಿಂಚಣಿ ಮತ್ತು ಕುಟುಂಬ ಪಿಂಚಣಿ ಪರಿ ಷ್ಕರಣೆ ಸಾಧ್ಯವಿಲ್ಲ ವೆಂದು ನಿರ್ಣಯ ಕೈಗೊಂಡಿದ್ದಾರೆ. ಇದರಿಂದ ನಿವೃತ್ತ ಸರ್ಕಾರಿ ನೌಕರರು ಹಾಗೂ ಕುಟುಂಬದವರು ಆರ್ಥಿಕವಾಗಿ ಸಂಕಷ್ಟಕ್ಕೆ ಈಡಾಗುವಂತಾಗಿದೆ ಎಂದು ಪ್ರತಿಭಟನಾಕಾರರು ದೂರಿದರು.

ರಾಜ್ಯಸರ್ಕಾರಿ ನಿವೃತ್ತ ನೌಕರರ ಸಂಘದ ಜಿಲ್ಲಾಧ್ಯಕ್ಷ ಪ್ರೇಮನಾಥ್,ಗೌರವಾಧ್ಯಕ್ಷ ಚಂದ್ರಶೇಖರ್,ರಂಗಪ್ಪರೆಡ್ಡಿ,ಟಿ.ತಿಮ್ಮಪ್ಪ, ಜೆ.ಪಿ. ಜ್ಞಾನಮೂರ್ತಿ,ಬಿ.ಬಡಮಲ್ಲಪ್ಪ,ಮಂಜುನಾಥ್,ಪಿ.ನಾಗರಾಜ್ ಇತರರು ಇದ್ದರು.

(ಸಿಟಿಡಿ 23 ಪಿಂಚಣಿ)

ಹೊಸ ಪಿಂಚಣಿ ಯೋಜನೆ ವಿರೋಧಿಸಿ ರಾಜ್ಯಸರ್ಕಾರಿ ನಿವೃತ್ತ ನೌಕರರು ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಬಳಿ ಪ್ರತಿಭಟಿಸಿ ಎಡಿ ಸಿ ಬಿ.ಟಿ.ಕುಮಾರಸ್ವಾಮಿ ಅವರಿಗೆ ಮನವಿ ಸಲ್ಲಿಸಿದರು. ಪ್ರೇಮನಾಥ್,ಚಂದ್ರಶೇಖರ್,ರಂಗಪ್ಪರೆಡ್ಡಿ,ಟಿ.ತಿಮ್ಮಪ್ಪ ಇತರರು ಇದ್ದರು.

------------------------

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net