ನಿವೃತ್ತ ಯೋಧನಿಗೆ ಸನ್ಮಾನ, ಮೆರವಣಿಗೆಯಿಂದ ಸ್ವಾಗತ

3-RNR-04
Published on

ರಾಣೆಬೆನ್ನೂರ: ಭಾರತೀಯ ಸೇನೆಯಲ್ಲಿ 35 ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿ ಶುಕ್ರವಾರ ನಗರಕ್ಕೆ ಬಂದ ತಾಲೂಕಿನ ಮೇಡ್ಲೇರಿ ಗ್ರಾಮದ ಯೋಧ ನಾಗಪ್ಪ ಭಜಂತ್ರಿ ಅವರನ್ನು ತೆರೆದ ವಾಹನದಲ್ಲಿ ಮೆರವಣಿಗೆ ಮಾಡುವ ಮೂಲಕ ಸ್ವಾಗತ ಕೋರಲಾಯಿತು.

ನಾಗಪ್ಪ ಭಜಂತ್ರಿ ಅವರು 35 ವರ್ಷಗಳ ಕಾಲ ಜಮ್ಮು&ಕಾಶ್ಮೀರ, ರಾಜಸ್ತಾನ ಸೇರಿ ದೇಶದ ವಿವಿಧ ರಾಜ್ಯದಲ್ಲಿ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿದ್ದಾರೆ. ನಗರದ ಕೋರ್ಟ್​ ವೃತ್ತ ಬಳಿ ಅವರನ್ನು ಶಿವಶರಣ ನೂಲಿಯ ಚಂದಯ್ಯ ಕೊರಮ ಸಮಾಜದ ಕ್ಷೇಮಾಭಿವೃದ್ಧಿ ಸಂದ ವತಿಯಿಂದ ಸನ್ಮಾನಿಸಲಾಯಿತು. ನಂತರ ನಗರದ ಪ್ರಮುಖ ಬೀದಿಗಳಲ್ಲಿ ತೆರೆದ ವಾಹನದಲ್ಲಿ ಮೆರವಣಿಗೆ ಮಾಡಿ ಗ್ರಾಮಕ್ಕೆ ಕಳುಹಿಸಿಕೊಡಲಾಯಿತು.

ಸಮಾಜದ ತಾಲೂಕು ಅಧ್ಯಕ್ಷ ಅರುಣಕುಮಾರ ಕೊರಗರ, ರವೀಂದ್ರಗೌಡ ಪಾಟೀಲ, ಕೆಂಜೋಡಪ್ಪ ಭಜಂತ್ರಿ, ರಮೇಶ ಹುಲಿಹಳ್ಳಿ, ರೇವಣಪ್ಪ ಕೊರವರ, ಗಂಗಪ್ಪ ಭಜಂತ್ರಿ, ನಾಗರಾಜ ಕೊರವರ, ಚಂದ್ರು ಕೊರವರ, ನೂರಂದಪ್ಪ ಭಜಂತ್ರಿ ಮತ್ತಿತರರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net