ನಿವೃತ್ತ ನೌಕರರಿಗೆ ಸರಿಯಾದ ಸೌಲಭ್ಯ ಒದಗಿಸಿ; ಸಂದಿಂದ ಮನವಿ ಸಲ್ಲಿಕೆ

19-RNR-07
Published on

ರಾಣೆಬೆನ್ನೂರ: 7ನೇ ವೇತನ ಆಯೋಗ ಅನುಷ್ಠಾನದಲ್ಲಿ 2022ರಿಂದ 2024ರ ಅವಧಿಯಲ್ಲಿ ನಿವೃತ್ತಿ ಹೊಂದಿದ ನೌಕರರಿಗೆ ಪರಿಷತ ವೇತನ ಶ್ರೇಣಿಯಲ್ಲಿ ನಿವೃತ್ತಿ ಸೌಲಭ್ಯ ಒದಗಿಸಿಕೊಡಬೇಕು ಎಂದು ಆಗ್ರಹಿಸಿ ರಾಜ್ಯ ಸರ್ಕಾರಿ ನಿವೃತ್ತ ನೌಕರರ ಸಂದ ವತಿಯಿಂದ ಸೋಮವಾರ ತಹಸೀಲ್ದಾರ ಆರ್​.ಎಚ್​. ಭಗವಾನ್​ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
7ನೇ ವೇತನ ಆಯೋಗದ ವರದಿಯಂತೆ ಪರಿಸತ ವೇತನದಲ್ಲಿ ನಿವೃತ್ತಿ ಆಥಿರ್ಕ ಸೌಲಭ್ಯಗಳನ್ನು ಪಡೆಯುವ ಅರ್ಹತೆ ಹೊಂದಿರುತ್ತೇವೆ. ಆದರೆ, ಡಿಸಿಆರ್​ಜಿ, ಇಎಲ್​ ಎನ್​ಕ್ಯಾಶ್​ಮೆಂಟ್​ ಲೆಕ್ಕಾಚಾರ ಮಾಡದೆ ಹಳೆಯ ವೇತನ ಶ್ರೇಣಿಯ ಮೇಲೆಯೇ ಪರಿಗಣಿಸಲಾಗುತ್ತಿದೆ. ಇದರಿಂದ ಜೀವನ ಸಂಧ್ಯಾಕಾಲದಲ್ಲಿರುವ ನಮಗೆ ಅತೀವ ಆಘಾತವಾಗಿದೆ.
ಆದ್ದರಿಂದ ಸರ್ಕಾರ ಕೂಡಲೇ ಆಗಿರುವ ನ್ಯೂನತೆಯನ್ನು ಸರಿಪಡಿಸಿ ನಿವೃತ್ತಿ ಹೊಂದಿದ ನೌಕರರಿಗೆ ಪರಿಷತ ವೇತನ ಶ್ರೇಣಿಯಲ್ಲಿ ನಿವೃತ್ತಿ ಸೌಲಭ್ಯ ಒದಗಿಸಿಕೊಡಬೇಕು ಎಂದು ಒತ್ತಾಯಿಸಿದರು.
ಪ್ರಮುಖರಾದ ಗಂಗಪ್ಪ ಬೆಳವಗಿ, ಹನುಮಂತಪ್ಪ ಬಿ.ಎಚ್​., ಆರ್​.ಡಿ. ಹೊಂಬರಡಿ, ಎಸ್​. ಸಿ. ಷಡರಿಮಠ, ಎಸ್​.ವಿ. ಅವಾರಿ, ಎಂ.ಎ. ಮುಲ್ಲಾ, ಎಂ.ಜಿ. ಬಡಪ್ಪನವರ, ಎಸ್​.ಎಚ್​. ಪಾಟೀಲ, ಎಸ್​.ಸಿ. ಹರಿಹರ, ಪಿ.ಎನ್​. ರಾಮಲಿಂಗಣ್ಣನವರ, ಎಲ್​.ಬಿ. ಬಡಿಗೇರ, ಆರ್​.ಎಚ್​. ಭಾನುವಳ್ಳಿ, ಎಂ.ಎಲ್​. ಯರೇಸಿಮಿ, ಬಿ.ಕೆ. ಒಡೇನಹಳ್ಳಿ, ಜಿ.ಆರ್​. ಯರೇಶಿಮಿ, ಎಂ.ಎನ್​. ಕೆಂಪಳ್ಳೇರ ಮತ್ತಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net