ನಿವೃತ್ತರು, ವರ್ಗಾಯಿತರಿಗೆ ಗೌರವ

1-KGL-4,,,,
Published on

ಕೊಳ್ಳೇಗಾಲ: ಕೊಳ್ಳೇಗಾಲ ನಗರಸಭೆಯಲ್ಲಿ ಸೇವೆ ಸಲ್ಲಿಸಿ ವಯೋನಿವೃತ್ತಿ ಹೊಂದಿರುವ ಹಾಗೂ ವರ್ಗಾವಣೆಗೊಂಡ ಅಧಿಕಾರಿ, ಪೌರ ಕಾರ್ಮಿಕರಿಗೆ ಶನಿವಾರ ನಗರಸಭೆ ಆಡಳಿತ ಮಂಡಳಿ ವತಿಯಿಂದ ಗೌರವಿಸಲಾಯಿತು.

ನಗರಸಭೆ ಕಚೇರಿ ಆವರಣದಲ್ಲಿ ನಗರಸಭೆ ಅಧ್ಯಕ್ಷೆ ರೇಖಾ ರಮೇಶ್, ಉಪಾಧ್ಯಕ್ಷ ಎ.ಪಿ.ಶಂಕರ್ ಹಾಗೂ ಸದಸ್ಯರು ಮತ್ತು ನಗರಸಭೆ ಪೌರಾಯುಕ್ತ ಎ.ರಮೇಶ್ ಹಾಗೂ ಸಿಬ್ಬಂದಿ ನಗರಸಭೆಯಲ್ಲಿ ಸೇವೆ ಸಲ್ಲಿಸಿ ಮುಂಬಡ್ತಿ ಪಡೆದು ಬೆಂಗಳೂರಿಗೆ ವರ್ಗಾವಣೆಯಾದ ಎಇಇ ಸುರೇಶ್ ಹಾಗೂ ವಯೋನಿವೃತ್ತಿ ಹೊಂದಿರುವ ನಗರಸಭೆ ಸಮುದಾಯ ಸಂಘಟನಾಧಿಕಾರಿ ಹಾಗೂ ಮಾಜಿ ಪ್ರಭಾರ ಪೌರಾಯುಕ್ತ ಪರಶಿವ ಹಾಗೂ ಪೌರಕಾರ್ಮಿಕರಾದ ಪಿ.ಬಣ್ಣಾರಿ ಹಾಗೂ ಮುರುಗ ಅವರನ್ನು ಸನ್ಮಾನಿಸಲಾಯಿತು.

ಈ ವೇಳೆ ನಿವೃತ್ತ ಸಮುದಾಯ ಸಂಘಟನಾಧಿಕಾರಿ ಪರಶಿವ ಮಾತನಾಡಿ, ಅಧಿಕಾರಿಯಾಗಿ ಸಾರ್ವಜನಿಕರ ಕೆಲಸವನ್ನು ಮಾಡಿದ ತೃಪ್ತಿ ತಂದಿದೆ. ಕಚೇರಿಯಲ್ಲಿ ನಗರಸಭೆ ಸದಸ್ಯರು ಹಾಗೂ ಸಹೋದ್ಯೋಗಿಗಳು ನನಗೆ ಸಹಕಾರ ನೀಡಿದ್ದಾರೆ. ಸಾರ್ವಜನಿಕರ ಕೆಲಸವನ್ನು ನನ್ನ ಕೆಲಸ ಎಂದು ಭಾವಿಸಿ ಸ್ಪಂದಿಸಿದ್ದೇನೆ ಎಂದರು.

ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಜಿ.ಸುರೇಶ್, ಸದಸ್ಯರಾದ ಪ್ರಕಾಶ್ ಶಂಕನಪುರ, ಮಂಜುನಾಥ್, ರಾಘವೇಂದ್ರ, ಶಾಂತರಾಜು ಬಸ್ತೀಪುರ, ನಾಮ ನಿರ್ದೇಶಿತ ಸದಸ್ಯ ಸ್ವಾಮಿ ನಂಜಪ್ಪ, ಮಾಜಿ ಅಧ್ಯಕ್ಷ ಎಸ್.ರಮೇಶ್, ನಗರಸಭೆ ಇಂಜಿನಿಯರ್ ನಾಗೇಂದ್ರ, ಹೆಲ್ತ್ ಇನ್ಸ್‌ಪೆಕ್ಟರ್ ಚೇತನ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net