ಎಲ್ಲ ಧರ್ಮಗಳನ್ನೂ ಗೌರವಿಸಬೇಕು

ಕೊಳ್ಳೇಗಾಲ ಪಟ್ಟಣದ ಚೌಡೇಶ್ವರಿ ಕಲ್ಯಾಣ ಮಂಟಪದಲ್ಲಿ ಭಾನುವಾರ ಜಿಲ್ಲಾ ಸರ್ವೋದಯ ಸಾಮರಸ್ಯ ವೇದಿಕೆ ವತಿಯಿಂದ ಆಯೋಜಿಸಿದ್ದ ಪ್ರಜಾಪ್ರಭುತ್ವ ಮತ್ತು ಸಾಮರಸ್ಯ ಸಮಾಜ ಕುರಿತು ಚಿಂತನ ಸಭೆ ಕಾರ್ಯಕ್ರಮವನ್ನು ಮುಡಿಗುಂಡ ವಿರಕ್ತ ಮಠದ ಶ್ರೀಕಂಠಸ್ವಾಮೀಜಿ ಉದ್ಘಾಟಿಸಿದರು. ಡಾ.ರಾಜು, ಮಂಜುನಾಥ್ ಪ್ರಸನ್ನ, ಚಿಕ್ಕಜವರಪ್ಪ, ಶಂಕರ್ ಇದ್ದಾರೆ.
ಕೊಳ್ಳೇಗಾಲ ಪಟ್ಟಣದ ಚೌಡೇಶ್ವರಿ ಕಲ್ಯಾಣ ಮಂಟಪದಲ್ಲಿ ಭಾನುವಾರ ಜಿಲ್ಲಾ ಸರ್ವೋದಯ ಸಾಮರಸ್ಯ ವೇದಿಕೆ ವತಿಯಿಂದ ಆಯೋಜಿಸಿದ್ದ ಪ್ರಜಾಪ್ರಭುತ್ವ ಮತ್ತು ಸಾಮರಸ್ಯ ಸಮಾಜ ಕುರಿತು ಚಿಂತನ ಸಭೆ ಕಾರ್ಯಕ್ರಮವನ್ನು ಮುಡಿಗುಂಡ ವಿರಕ್ತ ಮಠದ ಶ್ರೀಕಂಠಸ್ವಾಮೀಜಿ ಉದ್ಘಾಟಿಸಿದರು. ಡಾ.ರಾಜು, ಮಂಜುನಾಥ್ ಪ್ರಸನ್ನ, ಚಿಕ್ಕಜವರಪ್ಪ, ಶಂಕರ್ ಇದ್ದಾರೆ.
Published on

ಚಾಮರಾಜನಗರ: ದೇವರು ಹಾಗೂ ಧರ್ಮದ ಹೆಸರಲ್ಲಿ ಕೆಲವರು ಸಂಘರ್ಷ ಹುಟ್ಟು ಹಾಕುತ್ತಿದ್ದಾರೆ ಎಂದು ಮುಡಿಗುಂಡ ವಿರಕ್ತ ಮಠದ ಶ್ರೀ ಕಂಠಸ್ವಾಮೀಜಿ ಅಭಿಪ್ರಾಯಪಟ್ಟರು.

ಕೊಳ್ಳೇಗಾಲ ಪಟ್ಟಣದ ಚೌಡೇಶ್ವರಿ ಕಲ್ಯಾಣ ಮಂಟಪದಲ್ಲಿ ಭಾನುವಾರ ಜಿಲ್ಲಾ ಸರ್ವೋದಯ ಸಾಮರಸ್ಯ ವೇದಿಕೆ ವತಿಯಿಂದ ಆಯೋಜಿಸಿದ್ದ ಪ್ರಜಾಪ್ರಭುತ್ವ ಮತ್ತು ಸಾಮರಸ್ಯ ಸಮಾಜ ಕುರಿತು ಚಿಂತನ ಸಭೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಭಾರತ ದೇಶದಲ್ಲಿ ವಿವೈಧ್ಯಮಯ ಧರ್ಮ ಆಚರಣೆಗಳಿವೆ. ಈ ಎಲ್ಲ ಧರ್ಮಗಳನ್ನು ಗೌರವಿಸಬೇಕು. ಡಾ.ಬಿ.ಆರ್.ಅಂಬೇಡ್ಕರ್ ನೀಡಿರುವ ಸಂವಿಧಾನದಲ್ಲಿ ಎಲ್ಲ ಧರ್ಮಕ್ಕೂ ಅವಕಾಶವಿದೆ. ದೇಶದಲ್ಲಿ ಕೋಮು ಹಾಗೂ ಧರ್ಮ ಸಾಮರಸ್ಯ ಹುಟ್ಟು ಹಾಕಬೇಕಾದರೆ ಬುದ್ಧ, ಬಸವಣ್ಣ, ಡಾ.ಬಿ.ಆರ್.ಅಂಬೇಡ್ಕರ್, ನಾರಾಯಣ ಗುರು ಇತರೆ ಮಹಾಪುರಷರನ್ನು ಅನುಸರಿಸಬೇಕಿದೆ. ಇವೆರೆಲ್ಲರೂ ದೈವ ಸ್ವರೂಪಿಗಳು. ಮಾನವರಾಗಿ ಭೂಮಿಗೆ ಬಂದು ಸಮಾನತೆ, ಮಾನವೀಯತೆ ಪರವಾಗಿ ನಿಂತವರು ಎಂದು ಬಣ್ಣಿಸಿದರು.

ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಮಂಜುನಾಥ್ ಪ್ರಸನ್ನ ಮಾತನಾಡಿ, ಭಾರತ ಸಂವಿಧಾನದ ಪೀಠಿಕೆಯಲ್ಲೇ ಸಮಾನತೆ, ಭಾತೃತ್ವದ ಸರಾಂಶವಿದೆ. ದೇಶದಲ್ಲಿ ಪ್ರಜಾಪ್ರಭುತ್ವ ಹಾಗೂ ಸಾಮಾಜಿಕ ಸಾಮರಸ್ಯ ಬೆಳೆಸಬೇಕಾದರೆ ಸಂವಿಧಾನದಿಂದ ಮಾತ್ರ ಸಾಧ್ಯ ಎಂದರು.

ನಿವೃತ್ತ ಐಎಫ್‌ಎಸ್ ಅಧಿಕಾರಿ ಡಾ.ರಾಜು ಸುದ್ದಿಗಾರರೊಂದಿಗೆ ಮಾತನಾಡಿ, ಸಮಾಜದ ಸ್ಥಿತಿಗತಿಗಳ ಬಗ್ಗೆ ಪೂರ್ಣ ಅವಲೋಕನ ಮಾಡುವ ಉದ್ದೇಶದಿಂದ ಸಾಮರಸ್ಯ ವೇದಿಕೆಯಿಂದ ಚಿಂತನ ಸಭೆ ನಡೆಸಲಾಗುತ್ತಿದೆ ಎಂದರು. ಚಾಮರಾಜನಗರ ಜಿಲ್ಲೆಯಲ್ಲಿ 9 ವರ್ಷ ಅಧಿಕಾರಿಯಾಗಿ ಸೇವೆ ಮಾಡಿದ್ದೇನೆ. ಅಂತೆಯೇ, ಮುಂದೆ ರಾಜಕೀಯವಾಗಿಯೂ ಜನಸೇವೆ ಮಾಡುವ ಚಿಂತನೆ ಇದೆ. ಲೋಕಸಭಾ ಚುನಾವಣೆಯಲ್ಲಿ ಯಾವ ಪಕ್ಷದಿಂದ ಸ್ಪರ್ಧಿಸಲು ಇಚ್ಛಿಸಿದ್ದೇನೆ ಎಂಬುದರ ಬಗ್ಗೆ ಮುಂದೆ ತಿಳಿಸುತ್ತೇನೆ ಎಂದರು. ಕಾರ್ಯಕ್ರಮದಲ್ಲಿ ಸಾಮಾಜಿಕ ಚಿಂತಕ ಚಿಕ್ಕಜವರಪ್ಪ, ಸರ್ವೋದಯ ಸಾಮರಸ್ಯ ವೇದಿಕೆ ಶೇಖರ್‌ಬುದ್ಧ, ಶಂಕರ್ ಮತ್ತಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net