ಅಮೆರಿಕದಲ್ಲಿ ರಾಜೀನಾಮೆ ಪರ್ವ

Employee
Published on

ಅಮೆರಿಕದಲ್ಲಿ ಜನವರಿ ಮತ್ತು ೆಬ್ರವರಿಗೆ ಹೋಲಿಸಿದರೆ ಮಾರ್ಚ್​ ತಿಂಗಳಲ್ಲಿ ಉದ್ಯೋಗಕ್ಕೆ ರಾಜೀನಾಮೆ ನೀಡಿದವರ ಸಂಖ್ಯೆ 45 ಲಕ್ಷಕ್ಕೆ ಏರಿಕೆ ಕಂಡಿದೆ. ರಾಜೀನಾಮೆ ನೀಡುವವರ ಪ್ರಮಾಣ ಶೇಕಡ 3 ಏರಿಕೆಯಾಗಿದೆ ಎಂದು ಬ್ಯೂರೋ ಆಫ್ ಲೇಬರ್​ ಸ್ಟಾಟಿಸ್ಟಿಕ್ಸ್​ ಹೇಳಿದೆ.

ಏಪ್ರಿಲ್​ ದತ್ತಾಂಶ ಪ್ರಕಾರ, ಅಮೆರಿಕದ ಅರ್ಥವ್ಯವಸ್ಥೆಯಲ್ಲಿ ಮಾರ್ಚ್​ ತಿಂಗಳಲ್ಲಿ 4.31 ಲಕ್ಷ ಉದ್ಯೋಗ ಸೃಜನೆಯಾಗಿದೆ. ನಿರುದ್ಯೋಗ ಪ್ರಮಾಣ ಶೇಕಡ 3.6ಕ್ಕೆ ಕುಸಿದಿದೆ.

ೆಬ್ರವರಿ ತಿಂಗಳಲ್ಲಿ ಘೋಷಿಸಿದ ಯೋಜನೆ ಪ್ರಕಾರ, ಸ್ಟೋರ್​ಗಳಲ್ಲಿ ಕೆಲಸ ಮಾಡುವ ಉದ್ಯೋಗಿಗಳ ಗಂಟೆಯ ವೇತನ 15 ಡಾಲರ್​ನಿಂದ 24 ಡಾಲರ್​ ತನಕ ನಿಗದಿ ಮಾಡಲಾಗಿದೆ.

ಕಾರ್ಮಿಕರನ್ನು ಉಳಿಸಿಕೊಳ್ಳಲು ವಾಲ್ಮಾರ್ಟ್​ ಕಳೆದ ತಿಂಗಳು 12,000 ಟ್ರಕ್​ ಚಾಲಕರಿಗೆ ಹೊಸ ವೇತನ ಏರಿಕೆಯನ್ನು ಪ್ರಕಟಿಸಿತ್ತು.ಹೊಸದಾಗಿ ಕೆಲಸಕ್ಕೆ ಸೇರುವ ಚಾಲಕರು ಮೊದಲ ವರ್ಷ 1,10,000 ಡಾಲರನ್ನು ಗಳಿಸಬಹುದು. ಹೆಚ್ಚು ಕೆಲಸ ಮಾಡಿದರೆ ಇನ್ನೂ ಹೆಚ್ಚು ಗಳಿಸುವುದು ಸಾಧ್ಯವಿದೆ.

2021ರ ಮಾರ್ಚ್​ನಿಂದ ರಾಜೀನಾಮೆ ನೀಡಿಕೆ 1,46,000 ಹೆಚ್ಚಾಗಿದೆ. ೆಬ್ರವರಿಗೆ ಹೋಲಿಸಿದರೆ ಮಾರ್ಚ್​ನಲ್ಲಿ ವೃತ್ತಿಪರರು ಮತ್ತು ವ್ಯಾಪಾರ ಸೇವೆಗಳಲ್ಲಿ ರಾಜೀನಾಮೆ ಸಂಖ್ಯೆ ಅನುಕ್ರಮವಾಗಿ 88,000 ಮತ್ತು 69,000 ಹೆಚ್ಚಾಗಿದೆ. ಉದ್ಯೋಗ ನಷ್ಟ 14 ಲಕ್ಷ ಸೇರಿ ಕೆಲಸ ಬಿಟ್ಟವರ ಸಂಖ್ಯೆ 63 ಲಕ್ಷ ಇದೆ. ಮಾರ್ಚ್​ ತಿಂಗಳಲ್ಲಿ ಗಂಟೆಯ ವರಮಾನ ಸರಾಸರಿ 12 ಸೆಂಟ್ಸ್​ ನಿಂದ 31.73 ಡಾಲರ್​ಗೆ ಏರಿಕೆಯಾಗಿದೆ. ೆಬ್ರವರಿ ತಿಂಗಳಲ್ಲಿ ಇದು 31.58 ಡಾಲರ್​ ಇತ್ತು. ಕಳೆದ 12 ತಿಂಗಳ ಅವಧಿಯಲ್ಲಿ ಗಂಟೆಯ ವರಮಾನ ಶೇಕಡ 5.6 ಏರಿಕೆಯಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net