RBIನಿಂದ 10 ಮತ್ತು 500 ರೂಪಾಯಿಗಳ ಹೊಸ ನೋಟುಗಳ ಬಿಡುಗಡೆ! ಹಳೆಯ ನೋಟುಗಳ ಪರಿಸ್ಥಿತಿ ಏನು? RBI

500
Published on

ಭಾರತೀಯ ರಿಸರ್ವ್ ಬ್ಯಾಂಕ್ (RBI) ಶೀಘ್ರದಲ್ಲೇ 10 ರೂ ಮತ್ತು 500 ರೂ ಮುಖಬೆಲೆಯ ಬ್ಯಾಂಕ್ ನೋಟುಗಳನ್ನು ಬಿಡುಗಡೆ ಮಾಡುತ್ತಿರುವುದಾಗಿ ಹೇಳಿಕೊಂಡಿದೆ. ಸದ್ಯದಲ್ಲಿ ಚಾಲ್ತಿಯಲ್ಲಿರುವ ನೋಟುಗಳಂತೆಯೇ ಹೊಸ ನೋಟುಗಳು ಕೂಡ ಇರಲಿದ್ದು, ಆರ್​​ಬಿಐ ಗವರ್ನರ್ ಹಸ್ತಾಕ್ಷರ ಮಾತ್ರ ಬದಲಾಗುತ್ತದೆ.

ಕಳೆದ ತಿಂಗಳು 100 ರೂ ಹಾಗೂ 200 ರೂ ಮುಖಬೆಲೆಯ ನೋಟುಗಳನ್ನು ಬಿಡುಗಡೆ ಮಾಡುವುದಾಗಿ ಆರ್​​ಬಿಐ ಹೇಳಿಕೊಂಡಿತ್ತು. ಈ ಹೊಸ ನೋಟುಗಳಲ್ಲಿ ನೂತನ ಆರ್​​ಬಿಐ ಗವರ್ನರ್ ಸಂಜಯ್ ಮಲ್ಹೋತ್ರಾ ಅವರ ಹಸ್ತಾಕ್ಷರ ಸೇರಿಸಲಾಗಿದೆ.

RBI | ರಿಸರ್ವ್ ಬ್ಯಾಂಕ್ ಶೀಘ್ರದಲ್ಲೇ ಹೊಸ 500 ರೂಪಾಯಿ ನೋಟುಗಳನ್ನ ಬಿಡುಗಡೆ ಮಾಡಲಿದೆ. ಈ ಹಿಂದೆ ಆರ್‌ಬಿಐ ಚಿಕ್ಕ ಗಾತ್ರದಲ್ಲಿ 500 ರೂ.ಗಳ ನೋಟುಗಳನ್ನು ಬಿಡುಗಡೆ ಮಾಡಿತ್ತು. ಈಗ ಮತ್ತೊಮ್ಮೆ ಅದರ ಬಣ್ಣ ಮತ್ತು ಗಾತ್ರದಲ್ಲಿ ದೊಡ್ಡ ಬದಲಾವಣೆಯಾಗಲಿದೆ.

ಆರ್​​ಬಿಐಗೆ ಸಂಜಯ್ ಮಲ್ಹೋತ್ರಾ ಅವರು ನೂತನ ಗವರ್ನರ್ ಆಗಿ ನೇಮಕವಾಗಿದ್ದಾರೆ. ಅವರಿಗಿಂತ ಮೊದಲು ಶಕ್ತಿಕಾಂತ್ ದಾಸ್ ಅವರು ಆರ್​​ಬಿಐ ಗವರ್ನರ್ ಆಗಿದ್ದರು. ಸಂಜಯ್ ಮಲ್ಹೋತ್ರಾ ಅವರು ಗವರ್ನರ್ ಆದ ಬಳಿಕ ಎರಡನೇ ಬಾರಿಗೆ ಬ್ಯಾಂಕ್ ನೋಟುಗಳ ಮುದ್ರಣ ಮಾಡಲಾಗುತ್ತಿದೆ. ಇದು ಹೊಸ ನೋಟು ಆಗಿರೋದ್ರಿಂದ ಹೊಸ ಗವರ್ನರ್ ಅವರ ಹಸ್ತಾಕ್ಷರವನ್ನು ಸೇರಿಸಲಾಗಿದೆ. ಈ ನೋಟುಗಳ ಬಣ್ಣ, ಗಾತ್ರ, ಥೀಮ್, ಭದ್ರತಾ ವೈಶಿಷ್ಟ್ಯಗಳು ಮತ್ತು ವಿನ್ಯಾಸದಲ್ಲಿ ಪ್ರಮುಖ ಬದಲಾವಣೆಗಳನ್ನು ಮಾಡಲಾಗುವುದು. ಪ್ರಸ್ತುತ ಚಲಾವಣೆಯಲ್ಲಿರುವ 500 ರೂ. ನೋಟು ಬೂದು ಬಣ್ಣದ್ದಾಗಿದೆ, ಆದರೆ ಈಗ ಹೊಸ ಬಣ್ಣವನ್ನು ಹೊಂದಿದ ನೋಟನ್ನು ಬಿಡುಗಡೆ ಮಾಡಬಹುದು. ಹೊಸ 500 ರೂ. ನೋಟಿನ ಗಾತ್ರ 66 x 150 ಮಿಲಿಮೀಟರ್ ಇರಲಿದೆ ಎನ್ನಲಾಗಿದೆ.

ಹಳೆ ನೋಟುಗಳ ಪರಿಸ್ಥಿತಿ ಏನು?

ಹೊಸ ನೋಟುಗಳನ್ನು ಬಿಡುಗಡೆ ಮಾಡಿದ ನಂತರವೂ, ಈ ಹಿಂದೆ ಬಿಡುಗಡೆ ಮಾಡಿದ ಎಲ್ಲಾ 10 ಮತ್ತು 500 ರೂ. ಬ್ಯಾಂಕ್ ನೋಟುಗಳು ಕಾನೂನುಬದ್ಧವಾಗಿ ಚಲಾವಣೆಯಲ್ಲಿ ಮುಂದುವರಿಯುತ್ತವೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಸ್ಪಷ್ಟವಾಗಿ ಹೇಳಿದೆ. ಇದರರ್ಥ ಅಸ್ತಿತ್ವದಲ್ಲಿರುವ ಎರಡೂ ಕರೆನ್ಸಿ ನೋಟುಗಳು ಪ್ರಸ್ತುತ ಇರುವಂತೆಯೇ ಮಾರುಕಟ್ಟೆಯಲ್ಲಿ ಚಲಾವಣೆಯಲ್ಲಿ ಮುಂದುವರಿಯುತ್ತವೆ.

100, 200 ರೂ.ಹೊಸ ನೋಟುಗಳು

ಕಳೆದ ತಿಂಗಳು ಆರ್‌ಬಿಐ 100 ಮತ್ತು 200 ರೂಪಾಯಿಗಳ ಹೊಸ ನೋಟುಗಳನ್ನು ಬಿಡುಗಡೆ ಮಾಡುವುದಾಗಿ ಘೋಷಿಸಿತು. ಇದರರ್ಥ ನೀವು ಶೀಘ್ರದಲ್ಲೇ ಮಾರುಕಟ್ಟೆಯಲ್ಲಿ ಅನೇಕ ಹೊಸ ನೋಟುಗಳನ್ನು ನೋಡಬಹುದು. ಇದುವರೆಗಿನ ಪ್ರಕಟಣೆಗಳ ಪ್ರಕಾರ, ರಿಸರ್ವ್ ಬ್ಯಾಂಕ್ 10, 100, 200 ಮತ್ತು 500 ರೂ.ಗಳ ಹೊಸ ನೋಟುಗಳನ್ನು ಬಿಡುಗಡೆ ಮಾಡಲಿದೆ. ಈ ಎಲ್ಲಾ ನೋಟುಗಳ ಮೇಲೆ ಹೊಸ ಗವರ್ನರ್ ಮಲ್ಹೋತ್ರಾ ಅವರ ಸಹಿ ಕಂಡುಬರುತ್ತದೆ.

(ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net