ಮೀಸಲಾತಿ; ಮರಾಠರಿಗೆ ಕುನ್ಬಿ ಜಾತಿ ಪ್ರಮಾಣ ನೀಡಲು ಅನುಮೋದನೆ ನೀಡಿದ ಮಹಾರಾಷ್ಟ್ರ ಸರ್ಕಾರ| Maratha quota

Manoj Jarange
Published on

Maratha quota: ಮಹಾರಾಷ್ಟ್ರದಲ್ಲಿ ಮರಾಠ ಮೀಸಲಾತಿ ಹೋರಾಟಕ್ಕೆ ಮಣಿದಿರುವ ಮಹಾಯುತಿ ಸರ್ಕಾರ ಮರಾಠವಾಡದ ಮರಾಠಿಗಳಗೆ ಹಿಂದುಳಿದ ಕುನ್ಬಿ ಜಾತಿ ಪ್ರಮಾಣಪತ್ರಗಳನ್ನು ನೀಡಲು ಅನುಮೋದನೆ ನೀಡಿದ್ದು, ಪ್ರಧಾನಿ ಮೋದಿ ಹುಟ್ಟಿದ ದಿನ ಸೆ. 17ರಿಂದ ಪ್ರಮಾಣಪತ್ರ ವಿತರಿಸಲು ಮುಂದಾಗಿದೆ ಎಂದು ವರದಿಯಾಗಿದೆ.

ಮರಾಠರಿಗೆ ಮೀಸಲಾತಿ ನೀಡುವಂತೆ ಒತ್ತಾಯಿಸಿ ಮುಂಬೈನ ಆಜಾದ್ ಮೈದಾನದಲ್ಲಿ ಮನೋಜ್ ಜರಂಗೆ 5 ದಿನಗಳ ಕಾಲ ಉಪವಾಸ ಸತ್ಯಾಗ್ರಹ ನಡೆಸಿದ್ದರು. 30,000 ಕ್ಕೂ ಹೆಚ್ಚು ಜನರು ಜಾರಂಗೆಗೆ ಮುಂಬೈಗೆ ಬಂದು ಬೆಂಬಲ ನೀಡಿದ್ದರು. ಸರ್ಕಾರ ಅವರ ಹೋರಾಟಕ್ಕೆ ಮಣಿದು ಬೇಡಿಕೆ ಈಡೇರಿಸುವ ಭರವಸೆಯನ್ನು ನೀಡಿತ್ತು.

ಸದರಿ ಸೆಪ್ಟೆಂಬರ್ 17 ರಂದು ಮರಾಠವಾಡ ಮುಕ್ತಿ ದಿವಸ್ ಆಚರಿಸಲು ಮರಾಠರಿಗೆ 'ಕುನ್ಬಿ' ಜಾತಿ ಪ್ರಮಾಣಪತ್ರಗಳನ್ನು ನೀಡಲು ಸರ್ಕಾರ ಆದೇಶ ಹೊರಡಿಸಿದೆ. 1918 ರ ಹೈದರಾಬಾದ್ ಗೆಜೆಟ್ ಪ್ರಕಾರ ಸರ್ಕಾರಿ ನಿರ್ಣಯ (ಜಿಆರ್) ಜಾರಿಗೆ ಬರಲಿದೆ. ಈ ಕೋಟಾದಡಿಯಲ್ಲಿ ಹಿಂದುಳಿದ ವರ್ಗಗಳ (ಒಬಿಸಿ) ವರ್ಗದ ಅಡಿಯಲ್ಲಿ ಸಾವಿರಾರು ಮರಾಠರು ಮೀಸಲಾತಿ ಪ್ರಯೋಜನಗಳನ್ನು ಪಡೆಯುತ್ತಾರೆ ಎಂದು ಅಧಿಕಾರಿಗಳು ಅಂದಾಜಿಸಿದ್ದಾರೆ.

ಈ ನಡುವೆ ಸರ್ಕಾರದ ಅನುಮೋದನೆ ಬಗ್ಗೆ ಸ್ಪಷ್ಟೀಕರಣ ಬಯಸಿ ಹಿಂದುಳಿದ ವರ್ಗ ಮತ್ತು ಎನ್​ಸಿಪಿ ನಾಯಕ ಸಚಿವ ಛಗನ್ ಭುಜಬಲ್ ಸಿಎಂ ಫಡ್ನವಿಸ್​ಗೆ 8 ಪುಟಗಳ ಸುದೀರ್ಘ ಪತ್ರ ಬರೆದಿದ್ದಾರೆ.

1918 ರ ಹೈದರಾಬಾದ್ ಗೆಜೆಟ್ ಸ್ವೀಕರಿಸುವ ಬಗ್ಗೆ ಸಚಿವ ಸಂಪುಟದಲ್ಲಿ ಯಾವುದೇ ತೀರ್ಮಾನ ತೆಗೆದುಕೊಂಡಿಲ್ಲ. ಸಾರ್ವಜನಿಕರಿಂದ ಯಾವುದೇ ಸಲಹೆ, ಆಕ್ಷೇಪಣೆಗಳನ್ನು ಕೇಳಲಾಗಿಲ್ಲ. ಮರಾಠ ಸಮುದಾಯದ ಒತ್ತಡದ ಮೇರೆಗೆ ಸರ್ಕಾರ ಅನುಮೋದನೆ ನೀಡಿದೆ. ಹಿಂದುಳಿದ ವರ್ಗಗಳ ಮೇಲೆ  ನಕರಾತ್ಮಕ ಅಂಶ ಬೀರದಂತೆ ಸರ್ಕಾರ ಜಿಆರ್​ ಅನ್ನು ವಾಪಸ್ ಪಡೆಯಬೇಕು. ಇಲ್ಲ ತಿದ್ದುಪಡಿ ಮಾಡಬೇಕು ಎಂದು ಒತ್ತಾಯಿಸಿದ್ದಾರೆ ಎನ್ನಲಾಗಿದೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net