ಉನ್ನತ ಸಾಧನೆಗೆ ಸಂಶೋಧನೆ ಪೂರಕ

5sgr1
ಸಾಧಕ ವಿದ್ಯಾರ್ಥಿಗಳನ್ನು ಸಾಗರದ ಸೇವಾ ಸಾಗರ ವಿದ್ಯಾಸಂಸ್ಥೆಯಿಂದ ಸನ್ಮಾನಿಸಲಾಯಿತು. ಅ.ಪು.ನಾರಾಯಣಪ್ಪ, ಅ.ಶ್ರೀ.ಆನಂದ್, ಅಭಿನಂದನ್, ಉತ್ಸವ್, ಪೂರ್ಣಿಮಾ ಇತರರಿದ್ದರು.
Published on

ಸಾಗರ: ಉದ್ಯೋಗದ ಉದ್ದೇಶದ ಜತೆಯಲ್ಲಿ ಹೊಸ ಆವಿಷ್ಕಾರ ಕೊಡುಗೆ ನೀಡುವ ಸಂಕಲ್ಪದೊಂದಿಗೆ ವಿಜ್ಞಾನಿಗಳಾಗಬೇಕು ಎಂದು ಸೇವಾಸಾಗರ ವಿದ್ಯಾಸಂಸ್ಥೆ ಅಧ್ಯಕ್ಷ ಅ.ಪು.ನಾರಾಯಣಪ್ಪ ಹೇಳಿದರು.

ಸಾಗರದ ಸೇವಾಸಾಗರ ವಿದ್ಯಾಸಂಸ್ಥೆ ಏರ್ಪಡಿಸಿದ್ದ ಸಾಧಕ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿ, ನಿರಂತರ ಪರಿಶ್ರಮದಿಂದ ಸಾಧನೆ ಮಾಡಲು ಸಾಧ್ಯ ಎಂದರು.

ವಿಜ್ಞಾನ ಸಂಶೋಧನೆಗಳು ಭಾರತದಲ್ಲಿ ಹೊಸಭಾಷ್ಯಾ ಬರೆಯುತ್ತಿವೆ. ಶಾಲಾ ಹಂತದಲ್ಲಿಯೇ ವಿಜ್ಞಾನ ಕ್ಷೇತ್ರದಲ್ಲಿ ಹೊಸ ಹೊಸ ಪ್ರಯೋಗ ಮಾಡಲು ಆಲೋಚನೆ ಮಾಡಿದಲ್ಲಿ ಉನ್ನತ ಸಾಧನೆಗೆ ಸಹಕಾರಿ ಆಗಲಿದೆ. ಹಂತ ಹಂತವಾಗಿ ಗುರುಗಳ ಮಾರ್ಗದರ್ಶನದಲ್ಲಿ ಯಶಸ್ಸು ಗಳಿಸಬೇಕು ಎಂದು ತಿಳಿಸಿದರು.

ಕರ್ನಾಟಕ ಸಾವಯವ ಕೃಷಿ ಮಿಷನ್ ಮಾಜಿ ಅಧ್ಯಕ್ಷ ಅ.ಶ್ರೀ.ಆನಂದ್ ಮಾತನಾಡಿ, ಸಾಮರ್ಥ್ಯದ ಜತೆಯಲ್ಲಿ ಸಾಧಿಸುವ ಕನಸು ಕೂಡ ಮುಖ್ಯ. ನೂರಾರು ವಿದ್ಯಾರ್ಥಿಗಳ ನಡುವೆ ಕೆಲವರು ಮಾತ್ರ ಸಾಧನೆ ಮಾಡುತ್ತಾರೆ. ಕನಸು ಸಾಕಾರಗೊಳಿಸುವ ಪ್ರಯತ್ನದಲ್ಲಿ ಫಲಿತಾಂಶ ಕಾಣುತ್ತಾರೆ. ಸಂಶೋಧನೆ ಮೂಲಕ ಪಠ್ಯ ಅರ್ಥೈಸಿಕೊಳ್ಳಬೇಕು. ವಿಜ್ಞಾನದಲ್ಲಿ ಸಂಶೋಧನೆಗಳು ಬಹುಮುಖ್ಯ ಪಾತ್ರ ವಹಿಸಿವೆ ಎಂದರು.

ವಿಜ್ಞಾನ ಮಾದರಿ ಸ್ಪರ್ಧೆಯಲ್ಲಿ ದಕ್ಷಿಣ ಭಾರತ ವಿಭಾಗ ಮಟ್ಟಕ್ಕೆ ಆಯ್ಕೆಯಾದ ಅಭಿನಂದನ್ ಹಾಗೂ ಯೋಗಾಸನ ಸ್ಪರ್ಧೆಯಲ್ಲಿ ರಾಷ್ಟಮಟ್ಟಕ್ಕೆ ಆಯ್ಕೆಯಾಗಿರುವ ಉತ್ಸವ್ ಅವರನ್ನು ಸನ್ಮಾನಿಸಲಾಯಿತು. ಮುಖ್ಯಶಿಕ್ಷಕಿ ಪೂರ್ಣಿಮಾ, ಯೋಗ ಗುರು ಸಂಧ್ಯಾ ಕಾನಗೋಡು, ಅನ್ನಪೂರ್ಣಾ, ರಮೇಶ್ ಕೋಳಿವಾಡ, ದೀಪಾ, ಸೀತಾರಾಂ ಮಡಿವಾಳ, ಶಿಕ್ಷಕರಾದ ಚರಣ್, ಗಜೇಂದ್ರ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net